ಮೈಸೂರಲ್ಲಿ ವೀಕೆಂಡ್‌ ಲಾಕ್‌ಡೌನ್‌ ತೆಗೆದು, ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರಿಗೆ ರಾತ್ರಿ ಕರ್ಫ್ಯು ಮುಂದುವರಿಕೆ  ಮೈಸೂರಿನಲ್ಲಿ ನೈಟ್‌  ಕರ್ಪ್ಯೂ ರದ್ದುಗೊಳಿಸಬೇಕು ಎಂದು ಹೋಟೆಲ್‌ ಮಾಲೀಕರ ಸಂಘ ಆಗ್ರಹ

 ಮೈಸೂರು (ಸೆ.17): ಮೈಸೂರಲ್ಲಿ ವೀಕೆಂಡ್‌ ಲಾಕ್‌ಡೌನ್‌ ತೆಗೆದು, ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರಿಗೆ ರಾತ್ರಿ ಕರ್ಫ್ಯು ಮುಂದುವರಿಸಲಾಗಿದೆ.

ಇದರಿಂದ ರಾತ್ರಿ ವೇಳೆ ಕರೋನ ಕೇಸುಗಳು ಕಡಿಮೆಯಾಗುತ್ತೆ ಎಂಬುದು ಸರಿಯಲ್ಲ. ಮೈಸೂರಿನಲ್ಲಿ ನೈಟ್‌ ಕರ್ಪ್ಯೂ ರದ್ದುಗೊಳಿಸಬೇಕು ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಆಗ್ರಹಿಸಿದ್ದಾರೆ.

ಬಸ್ಸುಗಳು, ರೈಲು, ವಿಮಾನ ಹಾರಾಟ, ಮದುವೆ, ಶುಭ ಸಮಾರಂಭಗಳು, ಎಲ್ಲಾ ತರಹ ವ್ಯಾಪಾರ, ವ್ಯವಹಾರಗಳು ಎಂದಿನಂತೆ ನಡೆಯುತ್ತಿವೆ. ಕಲ್ಯಾಣ ಮಂಟಪಗಳಲ್ಲಿ ರಾತ್ರಿ 12 ರವರೆಗೆ ಶಾಸ್ತ್ರಗಳು, ಆರತಕ್ಷತೆ ನಡೆಯುತ್ತಿರುತ್ತಿವೆ. ಊಟೋಪಚಾರ ನಡೆಯುತ್ತಿರುತ್ತಿವೆ.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಆದ್ರೂ ಎಚ್ಚರದಿಂದ ಇರೋಣ

ಕೇವಲ, ಹೋಟಲು, ರೆಸ್ಟೊರೆಂಟ್‌, ಬಾರ್‌ಗಳು ಮತ್ತು ಕ್ಲಬ್‌ಗಳಿಗೆ ಮಾತ್ರ ಈ ನಿಯಮ ಜಾರಿ ಎಷ್ಟುಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೊರೋನಾ ಪ್ರಕರಣಗಳು ಪೂರ್ತಿ ಕಡಿಮೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾತ್ರಿ ಕರ್ಫ್ಯು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.