ಮೈಸೂರು ಪಶುವೈದ್ಯ ಡಾ.ನಾಗರಾಜ್ ವರ್ಗಾವಣೆ ಹಿನ್ನೆಲೆ ವರ್ಗಾವಣೆ ರದ್ದು ಮಾಡಿ ಮತ್ತೆ ಮರುನೇಮಕಕ್ಕೆ ಒತ್ತಾಯ   ಅರಣ್ಯಾಧಿಕಾರಿಗಳಿಗೆ ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಮನವಿ   

ಬೆಂಗಳೂರು (ಸೆ.19): ಮೈಸೂರು ಪಶುವೈದ್ಯ ಡಾ.ನಾಗರಾಜ್ ವರ್ಗಾವಣೆ ಹಿನ್ನೆಲೆ ವರ್ಗಾವಣೆ ರದ್ದು ಮಾಡಿ ಮತ್ತೆ ಮರುನೇಮಕಕ್ಕೆ ಒತ್ತಾಯ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರಣ್ಯಾಧಿಕಾರಿಗಳಿಗೆ ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಮನವಿ ಮಾಡಿದ್ದಾರೆ. ಕಳೆದ 20ವರ್ಷಗಳಿಂದ ಡಾ.ನಾಗರಾಜ್ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಅಂಬಾರಿ ಕಟ್ಟುವ ಕೆಲಸದಲ್ಲಿ ಡಾ‌.ನಾಗರಾಜ್ ಅನುಭವಸ್ಥರು. ಪ್ರತೀ ವರ್ಷ ತಾಲೀಮು, ಜಂಬೂಸವಾರಿ ಮೆರವಣಿಗೆಯನ್ನ ಯಶಸ್ವಿಯಾಗಿ ನಡೆಸಿದ್ದಾರೆ ಎಂದರು. 

ಮೈಸೂರು ದಸರೆಗೆ ದುಬಾರೆಯಿಂದ ಮೂರು ಆನೆಗಳ ಆಗಮನ

ಹತ್ತಾರು ವರ್ಷಗಳಿಂದ ಆನೆಗಳ ಸ್ವಭಾವ, ಗುಣಲಕ್ಷಣಗಳ ತಿಳುವಳಿಕೆ ಹೊಂದಿದ್ದಾರೆ. ಆದರೆ ಇದೀಗ ಅವರನ್ನ ಕೆ.ಆರ್.ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸದಾಗಿ ಬಂದಿರುವ ಪಶುವೈದ್ಯರಿಗೆ ಅಂಬಾರಿ ಕಟ್ಟುವುದು ಹಾಗೂ ತಾಲೀಮು ನೀಡುವ ಬಗ್ಗೆ ಅನುಭವ ಇಲ್ಲ. ಹಾಗಾಗಿ ಡಾ.ನಾಗರಾಜ್ ರವರ ವರ್ಗಾವಣೆ ರದ್ದು ಮಾಡಬೇಕೆಂದು ಮನವಿ ಮಾಡಿದ್ದಾರೆ. 

ದಸರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಡಾ‌.ನಾಗರಾಜ್ ಅವಶ್ಯಕರಾಗಿದ್ದಾರೆ ಎಮದು ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಒತ್ತಾಯ ಮಾಡಿದ್ದಾರೆ.