ಫಾರ್ಮ್‌ಹೌಸ್ ನಲ್ಲಿ ಜಿಂಕೆ ಪ್ರಕರಣ, ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹ
ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ ಸೇರಿದ ಕಲ್ಲೇಶ್ವರ್ ರೈಸ್ ಮಿಲ್ ಹಿಂಭಾಗದ ಫಾರಂ ಹೌಸ್ ಮೇಲೆ ಸಿಸಿಬಿ ಹಾಗು ಅರಣ್ಯ ಇಲಾಖೆ ಜಂಟಿ ದಾಳಿ ಪ್ರಕರಣದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ರನ್ನು ಬಂಧಿಸುವಂತೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ಆಗ್ರಹಿಸಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಡಿ.25): ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ ಸೇರಿದ ಕಲ್ಲೇಶ್ವರ್ ರೈಸ್ ಮಿಲ್ ಹಿಂಭಾಗದ ಫಾರಂ ಹೌಸ್ ಮೇಲೆ ಸಿಸಿಬಿ ಹಾಗು ಅರಣ್ಯ ಇಲಾಖೆ ಜಂಟಿ ದಾಳಿ ಪ್ರಕರಣದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ರನ್ನು ಬಂಧಿಸುವಂತೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ಆಗ್ರಹಿಸಿದ್ದಾರೆ. ಸಂಸದ ಜಿ ಎಂ ಸಿದ್ದೇಶ್ವರ್ ಪತ್ರಿಕಾಗೋಷ್ಠಿ ನಡೆಸಿ ಆರೋಪಿಗಳನ್ನು ಇದುವೆರೆಗು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಬೇತೂರು ರಸ್ತೆಯ ಆನೆಕೊಂಡದ ನಿವಾಸಿ ಸೆಂಥಿಲ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ ಜಿಂಕೆ ಚರ್ಮ ಹಾಗು ಕೊಂಬು ಮಾರಾಟ ಮಾಡಲು ಹೋಗಿದ್ದ.. ಅಲ್ಲಿ ಸೆಂಥಿಲ್ ನನ್ನು ಬಂಧಿಸಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ವಿಚಾರಣೆ ಮಾಡಿಲ್ಲ.. ಆತ ಕೊಟ್ಟ ಮಾಹಿತಿ ಮೇರೆಗೆ ತಪಾಸಣೆ ಮಾಡಿ ಸಂಬಂಧಪಟ್ಟವರನ್ನು ಬಂಧಿಸಬೇಕಿತ್ತು.
ವನ್ಯಜೀವಿ ಕಾಯ್ದೆ 1972 ಪ್ರಕಾರ ರೈಸ್ ಮಿಲ್ ಮ್ಯಾನೇಜರ್ ಸಂಪಣ್ಣ ಹಾಗು ಕರಿಬಸವಯ್ಯ ಹಾಗು ಜಾಗದ ಮಾಲೀಕರ ಮೇಲೆ ಎಪ್ ಐ ಆರ್ ಆಗಿದೆ. ದಾವಣಗೆರೆ ಅರಣ್ಯ ಇಲಾಖೆ ಡಿಎಪ್ ಓ ಯಾರನ್ನು ಬಂಧಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಜಿಂಕೆ ಕೊಂಬು ಚರ್ಮ ಇತ್ತೆಂದ ಮೇಲೆ ಅದರ ಮಾಂಸ ಎಲ್ಲಿ ಹೋಯಿತು.. ಒಂದೇ ಜಿಂಕೆ ಸತ್ತಿರೋದು ಇನ್ನು ಎಷ್ಟು ಇವೆ ಈ ಬಗ್ಗೆ ತನಿಖೆ ಆಗಬೇಕು. ಎಪ್ ಐ ಆರ್ ನಲ್ಲಿ ಜಾಗದ ಮಾಲೀಕ ಎಂದು ನಮೂದಾಗಿದೆ ಆದ್ರೆ ಮಿಲ್ ಮಾಲೀಕ ಎಸ್ ಎಸ್ ಮಲ್ಲಿಕಾರ್ಜುನ್ ಅಂತಾ ಎಲ್ಲರಿಗು ಗೊತ್ತು. ಅವರು ಅಲ್ಲೇ ಮೀಟಂಗ್ ಮಾಡೋದು ಗೊತ್ತು... ಆದ್ರೆ ಅವರನ್ನು ಬಂಧಿಸಿಲ್ಲ ಏಕೆ ಎಂದು ಕಿಡಿಕಾರಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು .. ಜಿಂಕೆ ಕೊಂದ ಚರ್ಮ ಕೊಂಬು ಸಿಕ್ಕಿದ ನಂತರ ಜಿಂಕೆ ಮಾಂಸ ಎಲ್ಲಿ ಹೋಯಿತು ಈ ಬಗ್ಗೆ ಸತ್ಯ ಹೊರಬರಬೇಕು ಎಂದರು.
Davanagere News: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಒಪಿಎಸ್ ಜಾರಿ: ಶಾಮನೂರು
ಈ ಬಗ್ಗೆ ತನಿಖಾ ನಡೆಸುತ್ತಿರುವ ದಾವಣಗೆರೆ ಅರಣ್ಯ ಇಲಾಖೆ ಡಿಎಪ್ ಓ ಮಾಧ್ಯಮದವರಿಗು ಸಿಗುತ್ತಿಲ್ಲ. ನಮಗು ಸಿಗುತ್ತಿಲ್ಲ. ತನಿಖೆ ಹೇಗೆ ನಡೆಯುತ್ತಿದೆ ಈ ಬಗ್ಗೆ ಮಾಹಿತಿ ನಮಗು ನೀಡುತ್ತಿಲ್ಲ ಈ ಡಿಎಪ್ ಓ ರನ್ನು ಅಮಾನತ್ತುಮಾಡುವಂತೆ ಜಿ ಎಂ ಸಿದ್ದೇಶ್ವರ್ ಆಗ್ರಹಿಸಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ಸದನದಲ್ಲಿ ಪ್ರಸ್ತಾಪಿಸಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನರನ್ನು ಬಂಧಿಸುವಂತೆ ಒತ್ತಾಯಿಸುತ್ತಾರೆ. ನಾವೇ ಸರ್ಕಾರದ ಭಾಗವಾಗಿದ್ದು ಈ ಪ್ರಕರಣದ ಬಗ್ಗೆ ಡಿಎಪ್ ಓ ಸೂಕ್ತ ಮಾಹಿತಿ ನೀಡುತ್ತಿಲ್ಲ ತಕ್ಷಣ ಡಿಎಪ್ ಓ ರನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು. ನಮ್ಮ ಕಾರ್ಯಕರ್ತರು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಬಂಧನ ಆಗೋವರೆಗು ನಮ್ಮ ಹೋರಾಟ ಇದ್ದೆ ಇರುತ್ತದೆ. ನಾನು ಈ ವಿಚಾರವನ್ನು ಪಾರ್ಲಿಮೆಂಟ್ ನಲ್ಲಿ ಪ್ರಸ್ತಾಪಿಸುತ್ತಿದ್ದೇ ಆದ್ರೆ ಸದನ ಮುಂದೂಡಲ್ಪಟ್ಟಿದೆ. ಅದು ಯಾವತ್ತಾದ್ರು ಸರಿ ಅದನ್ನು ಸದನದಲ್ಲಿ ದನಿ ಎತ್ತುತ್ತೇನೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಗುಡುಗಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿದೆಡೆಯಿಂದ ಬಂದ ಗಣ್ಯವ್ಯಕ್ತಿಗಳು ಜಿಂಕೆ ಬಾಡೂಟಕ್ಕೆ ಬರುತ್ತಿದ್ದರು ಎಂಬ ಆರೋಪ ಇದೆ .. ಜಿಂಕೆಯನ್ನು ಮಾಂಸಕ್ಕಾಗಿ ಕೊಂದಿದ್ದೇ ಆಗಿದ್ದರೆ ಅದನ್ನು ತಿಂದವರ ಮೇಲೆ ಪ್ರಕರಣ ದಾಖಲು ಆಗಬೇಕು.. ಸಿದ್ದರಾಮಯ್ಯನವರು ಬಂದು ತಿಂದಿದ್ದಾರೆ ಅನ್ನೋ ಆರೋಪ ಇದೆ ಸಿದ್ದರಾಮಯ್ಯ ತಿಂದಿದ್ದರು ಸರಿ ನಾನು ತಿಂದಿದ್ದರು ಸರಿ ಕಾನೂನು ಎಲ್ಲರಿಗು ಒಂದೇ .. ಸೂಕ್ತ ಪ್ರಮಾಣದಲ್ಲಿ ತನಿಖೆ ನಡೆಸಿ ಅಂತವರ ಮೇಲೆ ಪ್ರಕರಣ ದಾಖಲು ಆಗಬೇಕೆಂದು ಜಿ ಎಂ ಸಿದ್ದೇಶ್ವರ್ ಆಗ್ರಹಿಸಿದ್ದಾರೆ.