Asianet Suvarna News Asianet Suvarna News

ಮರುಳೀಧರ ಹಾಲಪ್ಪಗೆ ಟಿಕೆಟ್ ನೀಡಿ: ಕೈ ಮುಖಂಡರ ಒತ್ತಾಯ

ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಕಟ್ಟಿದ ಮುರುಳಿಧರ ಹಾಲಪ್ಪ ಅವರಿಗೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗುರುತಿಸಿ ಟಿಕೆಟ್ ನೀಡಬೇಕು ಎಂದು ಗುಬ್ಬಿ ತಾಲೂಕಿನ ಕೆಲ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

Demand Ticket For Muralidar Halappa snr
Author
First Published Feb 5, 2024, 12:46 PM IST

 ಗುಬ್ಬಿ :  ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಕಟ್ಟಿದ ಮುರುಳಿಧರ ಹಾಲಪ್ಪ ಅವರಿಗೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗುರುತಿಸಿ ಟಿಕೆಟ್ ನೀಡಬೇಕು ಎಂದು ಗುಬ್ಬಿ ತಾಲೂಕಿನ ಕೆಲ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಲವು ಮುಖಂಡರು, ಬಿಜೆಪಿಯಿಂದ ವಲಸೆ ಬಂದ ಮುದ್ದ ಹನುಮೇಗೌಡರಿಗೆ ಕಾಂಗ್ರೆಸ್ ಪಕ್ಷ ಮನ್ನಣೆ ನೀಡಿ ಟಿಕೆಟ್ ನೀಡಿದರೆ ಪಕ್ಷಕ್ಕೆ ದುಡಿದ ನಾವು ಅವರನ್ನು ಸೋಲಿಸಲು ಟೊಂಕ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಕ್ಷದಿಂದ ಪಕ್ಷಕ್ಕೆ ಬದಲಾವಣೆಯಾಗುವ ಮುದ್ದ ಹನುಮೇಗೌಡರಿಗೆ ಯಾವ ನೈತಿಕತೆ ಇದೆ. ಎಲ್ಲಾ ಪಕ್ಷಗಳನ್ನು ನೋಡಿ ಬಂದ ಇವರಲ್ಲಿ ಅಧಿಕಾರ ಲಾಲಸೆ ಕಾಣುತ್ತಿದೆ. ಅಂತಹ ಅಧಿಕಾರದಾಹಿಗಳು ಮತ್ತೇ ಪಕ್ಷ ಬದಲಿಸುವುದು ಖಚಿತ. ಇಂತಹವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಕೂಡದು.

ಮುರಳಿಧರ್ ಹಾಲಪ್ಪನವರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅಂತಹವರನ್ನು ಪಕ್ಷದ ಮುಖಂಡರು ಗೌರವಿಸಬೇಕು. ಅವರದೇ ಆದಂತಹ ದೊಡ್ಡ ಅಭಿಮಾನಿ ಬಳಗ ಜಿಲ್ಲೆಯಲ್ಲಿದ್ದು ಅಂತವರಿಗೆ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಗೆಲುವು ಪಡೆಯುತ್ತಾರೆ ಎಂದರು.

ನಮ್ಮಲ್ಲಿರುವ ಜಿಲ್ಲಾ ಸಚಿವರು, ಶಾಸಕರು ಮುರಳೀಧರ್ ಹಾಲಪ್ಪ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಒತ್ತಡ ಹೇರಬೇಕು ಎಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕುಂಟ ರಾಮನಹಳ್ಳಿ ರಾಮಣ್ಣ, ಲಿಂಗರಾಜು, ದೊಡ್ಡಯ್ಯ, ರಾಧಾ, ಶಿವಕುಮಾರ್‌, ಛಾಯಾಮಣಿ, ಸಿದ್ದರಾಮೇಗೌಡ, ರಾಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios