ಕನಿಷ್ಠ ವೇತನ ಪರಿಷ್ಕರಣೆಗೆ ಸಿಐಟಿಯು ಒತ್ತಾಯ

ಬೀಡಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡುವಂತೆ ಸಿಐಟಿಯು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

Demand For Minimum wage snr

  ತುಮಕೂರು :   ಬೀಡಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡುವಂತೆ ಸಿಐಟಿಯು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಿಐಟಿಯು ಪದಾಧಿಕಾರಿಗಳು, ರಾಜ್ಯದ -22-23 ಜಿಲ್ಲೆಗಳಲ್ಲಿ ನೂರಾರು ಬೀಡಿ ಉದ್ಯಮಗಳಲ್ಲಿ ಸರಿ ಸುಮಾರು 6 ರಿಂದ 7 ಲಕ್ಷ ಜನರಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸರಿಸುಮಾರು 70 ಸಾವಿರ ಜನ ಬೀಡಿ ಕಾರ್ಮಿಕರು ಇದ್ದಾರೆ 5 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ತ್ರಿಪಕ್ಷೀಯ ಸಮಿತಿ ರಚಿಸಿ ಕನಿಷ್ಠ ವೇತನ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯು ನ್ಯಾಯಲಯದಲ್ಲಿ ಕಳೆದ 4-5 ವರ್ಷಗಳಿಂದ ವಿವಾದಕ್ಕೆ ಒಳಗಾಗಿ ಜಾರಿಯಾಗದೇ ಹಾಗೇ ಉಳಿದಿದೆ ಎಂದರು.

ಈ ಪ್ರಶ್ನೆಯಲ್ಲಿ ಸರ್ಕಾರದ ಪರಿಣಾಮಕಾರಿ ಮಧ್ಯ ಪ್ರವೇಶಕ್ಕೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಸಿಐಟಿಯು ಅಗ್ರಹ ಪೂರಕವಾಗಿ ವಿನಂತಿಸುತ್ತದೆ, ಕಳೆದ 5 ವರ್ಷಗಳಿಂದ ಬಡ ಕಾರ್ಮಿಕರು ಬೆಲೆ ಏರಿಕೆಯಲ್ಲಿ ಬೆಂದು, ಕನಿಷ್ಠ ಕೂಲಿ ಇಲ್ಲದೆ ದುಸ್ತರವಾದ ಬದುಕು ಸಾಗಿರುತ್ತಿರುವುದನ್ನು ಸರ್ಕಾರ ಪರಿಗಣಿಸಿ ತಕ್ಷಣವೇ ಕ್ರಮ ವಹಿಸುವಂತೆ ಕೋರಿದ್ದಾರೆ.

ನಿರಂತರವಾಗಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ಅನುಗುಣವಾಗಿ ಹಾಗೂ ಕನಿಷ್ಠ ವೇತನ ನಿಗದಿಗೆ ಪೂರಕವಾಗಿ ದೇಶದ ಸರ್ವೋಚ್ಛ ನ್ಯಾಯಲಯವು ರಪ್ಪಾಕೋಸ್ ಬೇಟ್ ಪ್ರಕರಣದ ತೀರ್ಪಿನಲ್ಲಿ ಸೂಚಿಸಿರುವ ಆಂಶಗಳ ಆಧಾರದಲ್ಲಿ ಕನಿಷ್ಠ ಕೂಲಿಯನ್ನು ನಿಗಧಿ ಪಡಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕ ಫೆಡರೇಷನ್ ಸಿಐಟಿಯು ಮತ್ತು ತುಮಕೂರು ಜಿಲ್ಲಾ ಬೀಡಿ ಕೆಲಸಗಾರರ ಸಂಘ ಸಿಐಟಿಯು ಸರ್ಕಾರವನ್ನು ವಿನಂತಿಸಿದೆ.

ಈ ಬಾರಿ ಕನಿಷ್ಟ ಕೂಲಿಯನ್ನು ಪರಿಷ್ಕರಿಸಿ ನಿಗದಿ ಪಡಿಸುವಾಗ ಒಂದು ಸಾವಿರ ಬೀಡಿಯ ಕೂಲಿಯನ್ನು 395 ರು. ಹಾಗೂ ತುಟ್ಟಿ ಭತ್ಯೆಯನ್ನು ಪ್ರತಿ ಪಾಯಿಂಟ್ಗೆ 5 ಪೈಸೆಯಂತೆ ಕೋರಲಾಗಿದೆ. ಒಂದು ತಿಂಗಳಲ್ಲಿ ಈ ಕೆಲಸವನ್ನು ಮಾಡದೆ ಹೋದಲ್ಲಿ ಸಂಘವು ಅನಿರ್ವಾಯವಾಗಿ ಮುಂದಿನ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾಧ್ಯಾಕ್ಷೆ ಶಹತಾಜ್, ಪ್ರಧಾನ ಕಾರ್ಯದರ್ಶಿ, ಸೈಯದ್ ಮುಜೀಬ್ ಇದ್ದರು,

Latest Videos
Follow Us:
Download App:
  • android
  • ios