ಕಾಡುಗೊಲ್ಲರ ಮೀಸಲಾತಿಗೆ ಸಂಸತ್ತಲ್ಲಿ ಒತ್ತಾಯಿಸುವೆ : ಸಂಸದ ಬಸವರಾಜು

ಈ ಬಾರಿಯ ಸಂಸತ್‌ ಅಧಿವೇಶನದಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಲು ಒತ್ತಾಯವನ್ನು ನಾನು ಸೇರಿದಂತೆ ಅನೇಕ ಸಂಸದರು ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.

Demand for Kadugollar reservation in Parliament MP Basavaraju snr

  ಗುಬ್ಬಿ :  ಈ ಬಾರಿಯ ಸಂಸತ್‌ ಅಧಿವೇಶನದಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಲು ಒತ್ತಾಯವನ್ನು ನಾನು ಸೇರಿದಂತೆ ಅನೇಕ ಸಂಸದರು ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸೋಮವಾರ ನಡೆದ ಕಾಡುಗೊಲ್ಲರಿಗೆ ಎಸ್‌ಟಿ ಮೀಸಲಾತಿ ಹಕ್ಕೊತ್ತಾಯ ಕಾರ್ಯಕ್ರಮ ಹಾಗೂ ಜಾಥಾ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಮಾತನಾಡಿ, ನಾನು ಶಾಸಕನಾದ ಮೇಲೆ ಬಹುತೇಕ ಕಾಡುಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದೇನೆ.

ಸಂಸದ ಜಿಎಸ್‌ ಬಸವರಾಜ್‌ ಅವರು ಸಂಸತ್‌ನಲ್ಲಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಪಡಿಸಬೇಕು. ಸಮುದಾಯಕ್ಕೆ ನೀಡಬೇಕಾಗಿರುವಂತಹ ಮೀಸಲಾತಿ ನೀಡಿದಾಗ ಶಿಕ್ಷಣ, ಉದ್ಯೋಗ ಸೇರಿದಂತೆ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾಡುಗೊಲ್ಲ ಸಮುದಾಯದ ರಾಜ್ಯ ಅಧ್ಯಕ್ಷ ರಾಜಣ್ಣ ಮಾತನಾಡಿ, ಸುಮಾರು ಎರಡು-ಮೂರು ವರ್ಷಗಳಿಂದಲೂ ನಿರಂತರವಾಗಿ ನಾವು ಹೋರಾಟ ಮಾಡುತ್ತಿದ್ದು, ನಮ್ಮ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಿದಾಗ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯವಿದ್ದು ಎಲ್ಲಾ ಪಕ್ಷದ ನಾಯಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಜಿಲ್ಲಾಧ್ಯಕ್ಷ ಗಂಗಾಧರ್‌, ತಾಲೂಕು ಅಧ್ಯಕ್ಷ ದೇವರಾಜ್‌, ಪೂಜಾರಿಗಳಾದ ಪಾಪಣ್ಣ ಯರಪ್ಪ, ಮುಖಂಡರಾದ ಬಸವರಾಜು, ತಿಮ್ಮಣ್ಣ, ಯಶೋಧಮ್ಮ, ನಾಗರಾಜು, ಕೆ.ಟಿ. ಪ್ರಭು ಗುಡ್ಡದಹಳ್ಳಿ ಬಸವರಾಜು, ಜುಂಜೇಗೌಡ, ಸಿದ್ದರಾಜು, ಕೃಷ್ಣಮೂರ್ತಿ, ಕಾಡುಗೊಲ್ಲ ಸಮುದಾಯದ ಗೌಡರು, ಪೂಜಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಳೆದ ಮಾಚ್‌ರ್‍ನಲ್ಲಿ ನಡೆದ ಅಧಿವೇಶನದಲ್ಲಿ ಈಗಾಗಲೇ ಸಮುದಾಯದ ಬಗ್ಗೆ ಮೀಸಲಾತಿಗೆ ಸಂಬಂಧಿಸಿದಂತೆ ಮಾತನಾಡಿದ್ದು, ಮತ್ತೆ ಮುಂಬರುವ ಅಧಿವೇಶನದಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತ್ತೇನೆ . ಸಮುದಾಯಕ್ಕೆ ಹೆಚ್ಚಿನ ಶಿಕ್ಷಣ ಸಿಗುವಂತಾಗಬೇಕಾಗಿದೆ ಮತ್ತು ಮೂಢನಂಬಿಕೆಯಿಂದ ಹೊರಬಂದು ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ತಾವೆಲ್ಲರೂ ಸಹ ಒಟ್ಟಾಗಿದ್ದು ಹೋರಾಟ ನಡೆಸಿದ್ದಲ್ಲಿ ಪ್ರತಿ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಬಸವರಾಜು ಸಂಸದ

 ಕಾಡುಗೊಲ್ಲರ ಮೀಸಲಾತಿಗೆ ಸಂಸತ್ತಲ್ಲಿ ಒತ್ತಾಯಿಸುವೆ

ಸಮುದಾಯವನ್ನು ಎಸ್ಟಿಗೆ ಸೇರಿಸಲು ಪ್ರಾಮಾಣಿಕ ಕೆಲಸ ಮಾಡುವೆ: ಸಂಸದ ಬಸವರಾಜು

ಹಕ್ಕೊತ್ತಾಯ ಹೋರಾಟ

ತುಮಕೂರು : ರಾಜ್ಯದಲ್ಲಿ ಹಿಂದೂಳಿದ ಜಾತಿಯಲ್ಲಿರುವ ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ನೂರಾರು ಜನರು ಗುಬ್ಬಿ ಪಟ್ಟಣದಲ್ಲಿ ಹಕ್ಕೊತ್ತಾಯ ಬಹಿರಂಗ ಸಭೆ ನಡೆಸಿದ್ರು. ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ರಾಮನಗರದ ಸೇರಿದಂತೆ ರಾಜ್ಯದ ಹಲವು ಕಡೆ ಈ ಕಾಡುಗೊಲ್ಲ ಸಮುದಾಯವಿದ್ದು, ಈ ಸಮುದಾಯ ಸಾಮಾಜಿಕ ಸ್ತರದಲ್ಲಿ ಕೆಳಹಂತದಲ್ಲಿದ್ದು, ಶಿಕ್ಷಣದ ಕೊರತೆ ಹಾಗೂ ಆರ್ಥಿಕ ಅಸಬಲತೆ ಕಾರಣದಿಂದ ಈ ಸಮುದಾಯ ಮೌಢ್ಯದಲ್ಲಿ ಮುಳುಗಿದೆ. ಹೀಗಾಗಿ ಈ ಕಾಡುಗೊಲ್ಲ ಜಾತಿಯನ್ನು ಎಸ್ಟಿಗೆ ಸೇರಿಸಿ ಮೀಸಲಾತಿ ಅವಕಾಶ ನೀಡಬೇಕೆಂದು ಈ ಸಭೆಯ ಆಗ್ರಹವಾಗಿತ್ತು

Latest Videos
Follow Us:
Download App:
  • android
  • ios