ರೈತರ ಮೇಲೆ ದಾಳಿ ಮಾಡಿದ ಅಧಿಕಾರಿಗಳ ವಜಾ ಆಗ್ರಹ

ಗುಬ್ಬಿ ತಾಲೂಕು ಚೇಳೂರು ಹೋಬಳಿ ಗಂಗಯ್ಯನಪಾಳ್ಯದಲ್ಲಿ ರೈತರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ವಜಾಕ್ಕೆ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

Demand for dismissal of officials who attacked farmers snr

 ತುಮಕೂರು: ಗುಬ್ಬಿ ತಾಲೂಕು ಚೇಳೂರು ಹೋಬಳಿ ಗಂಗಯ್ಯನಪಾಳ್ಯದಲ್ಲಿ ರೈತರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಅರಣ್ಯಾಧಿಕಾರಿಗಳ ವಜಾಕ್ಕೆ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಡ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು, ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳುವ ಹೇಯ ಕುತಂತ್ರವನ್ನು, ನಿಲ್ಲಿಸುವಂತೆ ಹಾಗೂ ರೈತರ ಮೇಲಿನ ದೌರ್ಜನ್ಯ ನಡೆಸಿರುವ ಗುಬ್ಬಿ ಎಸಿಎಫ್‌ ಮಹೇಶ್‌, ರೇಂಜರ್‌ ದುಗ್ಗಯ್ಯ ಸೇರಿದಂತೆ ಇತರೆ ಎಲ್ಲ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬೇಕು. ಒಕ್ಕಲೆಬ್ಬಿಸುವ ಕುತಂತ್ರಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.

ಸಿಐಟಿಯುನ ಪ್ರಧಾನ ಕಾರ್ಯದÜರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ರೈತ ಸಂಘದ ಎ,ಗೋವಿಂದರಾಜು, ಪ್ರಗತಿಪರ ಚಿಂತಕ ದೊರೈರಾಜ್‌, ಕೆಪಿಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಭರತ್‌ರಾಜ್‌, ನವೀನಕುಮಾರ, ಕೆಪಿಆರ್‌ಎಸ್‌ ಜಿಲ್ಲಾ ಆಧ್ಯಕ್ಷರಾದ ಅಜ್ಜಪ್ಪ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್‌.ಕೆ . ಸುಬ್ರಮಣ್ಯ, ಬಿ. ಉಮೇಶ್‌ ಸಿ.ಐ.ಟಿ.ಯುನ ಸೈಯದ್‌ ಮುಜೀಬ್‌, ರೈತ ಸಂಘದ ಸ್ವಾಮಿ, ಸಮಾಜ ಸೇವಕ ತಾಜುದ್ದಿನ್‌ ಷರೀಪ್‌ ಮಾತನಾಡಿದರು.

ಹೋರಾಟದಲ್ಲಿ ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್‌, ಜನವಾದಿ ಮಹಿಳಾ ಸಂಘದ ಪ್ರಭ, ಸಿಐಟಿಯು ಗೌರಮ್ಮ, ಕೆ. ಕುಮಾರ್‌, ಶಿವಕುಮಾರ ಸ್ವಾಮಿ, ಯೋಗೀಶ್‌, ಪ್ರಾಂತ ರೈತ ಸಂಘದ ರಾಜಮ್ಮ, ನರಸಿಂಹ ಮೂರ್ತಿ,ಕೋದಂಡಪ್ಪ, ಸಾಮಾಜಿಕ ಹೋರಾಟಗಾರ ಎಸ್‌. ರಾಘವೇಂದ್ರ, ಬಸವರಾಜು, ನಾಗರತ್ನ, ಸಿದ್ದಮ್ಮ, ಗಾಯಾಳುಗಳಾದ ಚೇತನಾ, ವಿವೇಕಾ, ಅಳ್ಳಪ್ಪ, ನೂರಾರು ರೈತ- ಕಾರ್ಮಿಕರ ಮುಂದಾಳುಗಳು ಇದ್ದರು. ಮನವಿ ಸ್ವೀಕರಿಸಿ ಮಾತನಾಡಿದ ಅಪರÜ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಘಟನೆಯ ಬಗ್ಗೆ ವರದಿ ತರಿಸಿಕೊಂಡು ಕ್ರಮ ವಹಿಸುವುದಾಗಿ ಭರವಸೆ ನೀಡಿದರು. 

Latest Videos
Follow Us:
Download App:
  • android
  • ios