ಕಸ್ತೂರಿ ರಂಗನ್ ವರದಿ ವಾಪಸ್ ಮಾಡದಿದ್ದರೆ ದೆಹಲಿ ಸ್ವರೂಪದ ಹೋರಾಟದ ಎಚ್ಚರಿಕೆ

ಪಶ್ಚಿಮಘಟ್ಟಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಮಾಡುತ್ತೇವೆಂದು ಮಾಧವ ಗಾಡ್ಗಿಳ್ ವರದಿಯನ್ನು ಜಾಡಿ ಮಾಡಲು ಹೊರಟ್ಟಿದ್ದರು. ಆದರೆ ತೀವ್ರ ವಿರೋಧದ ಬಳಿಕ ಕಸ್ತೂರಿ ರಂಗನ್ ನೇತೃತ್ವದಲ್ಲಿ ಎಸಿ ಕೊಠಡಿಯಲ್ಲಿ ಕುಳಿತು ಮಾಧವ ಗಾಡ್ಗಿಳ್ ವರದಿಯನ್ನು ಹೇಗೆ ಜಾರಿ ಮಾಡಬೇಕೆಂಬ ಯೋಜನೆ ರೂಪಿಸಲಾಯಿತು.

Delhi style protest warning if Kasturi Rangan report not returned gvd

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
 
ಕೊಡಗು (ಆ.11):
ಪಶ್ಚಿಮಘಟ್ಟಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಮಾಡುತ್ತೇವೆಂದು ಮಾಧವ ಗಾಡ್ಗಿಳ್ ವರದಿಯನ್ನು ಜಾಡಿ ಮಾಡಲು ಹೊರಟ್ಟಿದ್ದರು. ಆದರೆ ತೀವ್ರ ವಿರೋಧದ ಬಳಿಕ ಕಸ್ತೂರಿ ರಂಗನ್ ನೇತೃತ್ವದಲ್ಲಿ ಎಸಿ ಕೊಠಡಿಯಲ್ಲಿ ಕುಳಿತು ಮಾಧವ ಗಾಡ್ಗಿಳ್ ವರದಿಯನ್ನು ಹೇಗೆ ಜಾರಿ ಮಾಡಬೇಕೆಂಬ ಯೋಜನೆ ರೂಪಿಸಲಾಯಿತು. ಅರಣ್ಯ ಕಾಯ್ದೆ ಮೂಲಕ ಆದಿವಾಸಿಗಳನ್ನು ಅರಣ್ಯದಿಂದ ಓಡಿಸಲಾಯಿತು. ಈ ಕಸ್ತೂರಿ ರಂಗನ್ ವರದಿ ಜಾರಿ ಮೂಲಕ ಗ್ರಾಮಗಳಲ್ಲಿ ಇರುವ ಜನರನ್ನು ಓಡಿಸುವ ಹುನ್ನಾರ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಶುಕ್ರವಾರ ಮಾಧವ ಗಾಡ್ಗಿಳ್ ವರದಿಯ ಸಾಧಕ ಬಾಧಕಗಳ ಕುರಿತು ನಡೆದ ರಾಜ್ಯಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಿ ರಂಗನ್ ವರದಿ ಕೂಡ ಸ್ಥಳ ಪರಿಶೀಲನೆ ಮಾಡಿಲ್ಲ. ಸ್ಥಳೀಯ ನಿವಾಸಿಗಳ ಬದುಕನ್ನು ನಿರ್ಲಕ್ಷಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ರೈತರ ಕಸುಬೆ ನಿಸರ್ಗದತ್ತವಾದದ್ದು, ಈಗ ನಿಸರ್ಗಕ್ಕೆ ವಿರೋಧಿಯಾದ ಕುಲಾಂತರಿ ತಳಿಗಳನ್ನು ಅಭಿವೃದ್ಧಿಗೊಳಿಸಿ ರೈತರನ್ನು, ಜೊತೆಗೆ ಪರಿಸರವನ್ನು ನಾಶಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಜಾರಿಗೆ ಬಂದರೆ ಸ್ಥಳೀಯ ನಿವಾಸಿಗಳ ಬದುಕನ್ನು ಕಿತ್ತುಕೊಳ್ಳುತ್ತದೆ‌. 

ತಲಪಾಡಿ: ಬಿಜೆಪಿ-ಎಸ್ಡಿಪಿಐ ಒಪ್ಪಂದ: ಎಚ್ಚೆತ್ತ ಬಿಜೆಪಿ ನಾಯಕರಿಂದ ಪಕ್ಷ ವಿರೋಧಿಗಳಿಗೆ ಗೇಟ್ ಪಾಸ್!

ನಾವು ಪರಿಸರವಾದಕ್ಕೆ ವಿರೋಧ ಇಲ್ಲ. ಭೂಸುಧಾರಣಾ ಕಾಯ್ದೆ ಜಾರಿಗೆ ಬಂದ ಮೇಲೆ ಪಶ್ಚಿಮ ಘಟ್ಟಗಳ ಭೂಮಿ ಬಂಡವಾಳಶಾಹಿಗಳ ಕೈಗೆ ಹೋಗುತ್ತಿದೆ ಎಂದರು. ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಅವರು ಮಾತನಾಡಿ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ ಭಿನ್ನ ಅಲ್ಲ. ಬಾಹ್ಯಾಕಾಶ ವಿಜ್ಞಾನಿ ಕೇವಲ ಎಂಟೇ ತಿಂಗಳಲ್ಲಿ ಕಚೇರಿಯಲ್ಲಿ ಕುಳಿತುಕೊಂಡು ವರದಿ ಮಾಡಿದರು. ಇದೀಗ ಅದನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಎನ್ಜಿಟಿಗೆ ಅಫಿಡೆವಿಟ್ ಸಲ್ಲಿಸಿದೆ. ಆದರೆ ಈ ಹಿಂದೆ ಇದ್ದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಅವೈಜ್ನಾನಿಕವಾಗಿದೆ. 

ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿತ್ತು. ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವರದಿ ಜಾರಿ ಮಾಡುತ್ತೇವೆ ಎಂದು ಹೇಳಿ ಮತ್ತೆ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಏನೇ ಆದರೂ ಮಲೆನಾಡಿನ ಪ್ರದೇಶಗಳ ಜನರು ಆತಂಕದಲ್ಲಿ ಜೀವನ ಮಾಡಬೇಕಾಗಿದೆ. ಜನರು ಹಾಗೂ ಪರಿಸರ ಬೇರೆ ಬೇರೆ ಅಲ್ಲ, ಕೆಲವು ಪರಿಸರವಾದಿಗಳು ಇದರಿಂದ ಅನುದಾನ ಪಡೆಯುವವರೂ ಇದ್ದಾರೆ. ಅವರಿಗೆ ಜ‌ನಬೇಕಿಲ್ಲ. ಜೀವವೈವಿಧ್ಯ ಮಾತ್ರ ಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾರೋ ಮಾಡಿದ ಪಾಪವನ್ನು ಕಾಡಿನಲ್ಲಿರುವ ಪಾಪದವರು ಪರಿಹಾರ ಮಾಡಬೇಕಾ?? ನಾವೇ ವರದಿ ತಯಾರಿಸಿ ಕೊಡೋಣ. ಈ ವರದಿ ಜಾರಿ ಮಾಡಿ ಎಂದು ಹೇಳೋಣ ಎಂದರು. 

ಇನ್ನು ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿಯಿಂದ ಜಿಲ್ಲೆಯ 56 ಹಳ್ಳಿಗಳು ಸಮಸ್ಯೆ ಎದುರಿಸುತ್ತವೆ. ವರದಿ ಜಾರಿ ಮಾಡುವುದಾದರೆ ಅದರಲ್ಲಿ ಯಾವ ರೀತಿಯ ತಿದ್ದುಪಡಿ ಮಾಡಿದ್ದಾರೆ ಎನ್ನುವುದನ್ನೆಲ್ಲಾ ಗಮನಿಸಬೇಕಾಗಿದೆ. ಇಲ್ಲದಿದ್ದರೆ ಕಸ್ತೂರಿ ರಂಗನ್ ವರದಿಯಲ್ಲಿ ವಿರೋಧಿಸಿ ಜನರು ಅನಿವಾರ್ಯವಾಗಿ ಬೀದಿಗೆ ಇಳಿಯಲೇಬೇಕಾಗಿದೆ. ಅದಕ್ಕಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ದೆಹಲಿಯಲ್ಲಿ ನಡೆದ ರೈತರ ಹೋರಾಟಕ್ಕಿಂತ ಉಗ್ರವಾದ ರೀತಿಯಲ್ಲಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ. ಹೋರಾಟಗಾರ ಕೆ.ಎಲ್.ಅಶೋಕ್ ಅವರು ಮಾತನಾಡಿ ಪರಿಸರ ಎಂದರೆ ಕೇವಲ ಗಿಡ ಮರ ಪ್ರಾಣಿ ಅಲ್ಲ. ಅದರಲ್ಲಿ ಜನರೂ ಇದ್ದಾರೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. 

Chikkamagaluru: ವಾಹನ ಸವಾರರಿಗೆ ಕಂಟಕವಾದ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ!

ವಿದೇಶಿ ಕಂಪನಿಗಳ ಹುನ್ನಾರದಿಂದ ರಾಷ್ಟ್ರೀಯ ಉದ್ಯಾನಗಳನ್ನು ಮಾಡುವ ನೆಪದಲ್ಲಿ ಜನರನ್ನು ತೊಂದರೆ ತಳ್ಳಲಾಗುತ್ತಿದೆ ಎಂದರು.  ಪರಿಸರ ಸಂರಕ್ಷಣೆಗೆ ವಿಷಯ ತಜ್ಞರು ಅಲ್ಲದವರು ವರದಿ ಕೊಡುತ್ತಾರೆ. ಸಂಸದರು ಬೇಜವಾಬ್ದಾರಿ‌ಯಿಂದ ಕೆಲಸ ಮಾಡುತ್ತಾರೆ. ಪರಿಸರ ಉಳಿಸಬೇಕು ಎನ್ನುವವರು, ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ದೊಡ್ಡ ಕಾರ್ಪೋರೆಟ್ ಕಂಪನಿಗೆ ರತ್ನಗಂಬಳಿ ಹಾಸುತ್ತಿದ್ದಾರೆ. ಹೀಗಾದರೆ ಪರಿಸರ ಹೇಗೆ ರಕ್ಷಣೆ ಆಗುತ್ತದೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯವನ್ನು ಶಾಶ್ವತವಾಗಿ ಇಲ್ಲದಂತೆ ಮಾಡುವುದೇ ಈ ವರದಿಯ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಗ್ಗಟ್ಟಿನಿಂದ ಎಲ್ಲ ಸಂಸದರ ಮೇಲೆ ಒತ್ತಡ ತರಬೇಕು. ಈ ವರದಿ ವಾಪಸ್ ಪಡೆಯುವಂತೆ ಮಾಡಬೇಕು ರಾಜ್ಯ ಸರ್ಕಾರ ಸ್ಪಷ್ಟವಾಗಿ ತನ್ನ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. 

Latest Videos
Follow Us:
Download App:
  • android
  • ios