ಬಾಗಲಕೋಟೆ: ಭ್ರೂಣಲಿಂಗ ಪತ್ತೆ, ಗರ್ಭಿಣಿ ಸಾವು ಪ್ರಕರಣ, ದೆಹಲಿ ವಿಶೇಷ ಅಧಿಕಾರಿಗಳ ತಂಡದಿಂದ ದಾಳಿ
ದೆಹಲಿಯ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯ ತಂಡದಿಂದ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಖಾಸಗಿ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ. ಸುಮಾರು 15 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ.
ಬಾಗಲಕೋಟೆ(ಜು.24): ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ, ಗರ್ಭಿಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ(ಬುಧವಾರ) ಕೂಡ ದೆಹಲಿ ವಿಶೇಷ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ದಾಳಿ ನಡೆಸಿದೆ. ದೆಹಲಿಯ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯ ತಂಡದಿಂದ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಖಾಸಗಿ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ. ಸುಮಾರು 15 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ.
ಗುಳೇದಗುಡ್ಡ ಪಟ್ಟಣದ ಬನಶಂಕರಿ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸ್ಕ್ಯಾನಿಂಗ್ ಮಷಿನ್ ಪತ್ತೆಯಾಗಿದ್ದು ಸೀಜ್ ಮಾಡಲಾಗಿದೆ. ಬನಶಂಕರಿ ಆಸ್ಪತ್ರೆ ಡಾ. ಬಂಟನೂರು ಒಡೆತನದ್ದಾಗಿದ್ದು ಆಸ್ಪತ್ರೆಯಲ್ಲಿ ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ಭ್ರೂಣ ಲಿಂಗಪತ್ತೆ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
ಅನಧಿಕೃತವಾಗಿ ಸ್ಕ್ಯಾನಿಂಗ್ ಮಷಿನ್ ಇಟ್ಟುಕೊಂಡು ಭ್ರೂಣಲಿಂಗ ಪತ್ತೆ ಮಾಡುತ್ತಿದ್ದರ ಬಗ್ಗೆ ಆರೋಪ ಕೇಳಿ ಬಂದಿತ್ತು. ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಮಾಡಿರುವ ವೈದ್ಯರ ವಿರುದ್ಧ ದೂರು ದಾಖಲು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.