ಮೃತರ ಕುಟುಂಬಕ್ಕೆ ವಿಮಾ ಪರಿಹಾರ ನೀಡಲು ವಿಳಂಬ, ಕುಮಟಾ ಸಾರಿಗೆ ಬಸ್ ಜಪ್ತಿ!
ಅಪಘಾತ ಪರಿಹಾರ ವಿಮಾ ಹಣವನ್ನು ಮೃತರ ಕುಟುಂಬಕ್ಕೆ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿಗಳು ಕೆ.ಎಸ್.ಆರಾ.ಟಿ.ಸಿ. ಕುಮಟಾ ಡಿಪೋದ ಬಸ್ಸನ್ನು ಜಪ್ತಿಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹೊನ್ನಾವರ (ಏ.14) : ಅಪಘಾತ ಪರಿಹಾರ ವಿಮಾ ಹಣವನ್ನು ಮೃತರ ಕುಟುಂಬಕ್ಕೆ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಕೆಎಸ್‌ಆರ್‌ಟಿಸಿ. ಕುಮಟಾ ಡಿಪೋದ ಬಸ್ಸನ್ನು ಜಪ್ತಿಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಾಲೂಕಿನ ಕೆಕ್ಕಾರ ಗ್ರಾಮ(Kekkar village)ದ ಶಂಕರ ಗೌಡ(Shankar gowda) ಎಂಬಾತ 2019ರ ಅಗಸ್ಟತಿಂಗಳಲ್ಲಿ ಅಂಕೋಲಾದ ಹೊಸೂರ ಕ್ರಾಸ್ ಬಳಿ ಬಸ್ ಹತ್ತಿ ಮನೆಗೆ ಮರಳುತ್ತಿದ್ದ. ಆ ಸಮಯದಲ್ಲಿ ಬಸ್ಸಿನಿಂದ ರಸ್ತೆಗೆ ಬಿದ್ದು ಮೃತನಾಗಿದ್ದ. ಮೃತನ ಪತ್ನಿ ನಾಗರತ್ನ ಗೌಡ ಅಪಘಾತ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಸತೀಶ್ ಸೈಲ್ ಟಿಕೆಟ್ ನೀಡಿದ್ದಕ್ಕೆ ಚೈತ್ರಾ ಗರಂ: ಕಾಂಗ್ರೆಸ್‌ನಲ್ಲಿ ಮತ್ತೊಂದು ಬಂಡಾಯ..!
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಆದೇಶ ನೀಡಿತ್ತು. ನ್ಯಾಯಾಲಯ ನೀಡಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಮೃತನ ಕುಟುಂಬಕ್ಕೆ ಪರಿಹಾರ ನೀಡಿರಲಿಲ್ಲ.
ಕೋರ್ಟ್ ಹೇಳಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಹಣ ನೀಡದೇ ಇರುವುದರಿಂದ ಅರ್ಜಿದಾರಳು ಕೆ.ಎಸ್.ಆರ್.ಟಿ.ಸಿ ವಿರುದ್ಧ ಹಣ ವಸೂಲಿಗೆ ಅಮಲ್ಜಾರಿ ಪ್ರಕರಣ ದಾಖಲಿಸಿ ನ್ಯಾಯಾಲಯವು ಹೇಳಿದ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಎಲ್ಲ ಸೇರಿ .16,46,388 ಪರಿಹಾರ ನೀಡಬೇಕು ಎಂದು ಕೋರಿಕೊಂಡಿದ್ದಳು. ಆಗಲೂ ಸಹ ಕೆ.ಎಸ್.ಆ್ಜdd.ಟಿ.ಸಿ ಹಣ ಪಾವತಿಸಲು ವಿಫಲ ಆದ ಹಿನ್ನೆಲೆಯಲ್ಲಿ ಹೊನ್ನಾವರ ನ್ಯಾಯಾಧೀಶ ಕುಮಾರ ಜಿ ಬಸ್ ಜಪ್ತಿಪಡಿಸಲು ಆದೇಶ ನೀಡಿದ್ದರು.
ಮಾಜಿ ರಾಜ್ಯಪಾಲರ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಡಿ: ಮುಸ್ಲಿಂ ಸಘಟನೆಯಿಂದ AICCಗೆ ಪತ್ರ
ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರ ಸಿವಿಲ್ ಕೋರ್ಚ್ ಸಿಬ್ಬಂದಿಗಳಾದ ಎಸ್.ಎಸ್. ಗೊಂಡಾ ಹಾಗೂ ಎಸ್.ಎನ್. ಶೆಟ್ಟಿಬಸ್ ಜಪ್ತಿ ಪಡಿಸಿಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು. ಅರ್ಜಿದಾರಳ ಪರವಾಗಿ ನ್ಯಾಯವಾದಿ ಎಂ.ಎಲ್. ನಾಯ್ಕ ನ್ಯಾಯ ಮಂಡಿಸಿದ್ದರು.