ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಇದರ ಮಾರ್ಗಸೂಚಿಗಳ ಪ್ರಕಾರ 2019-20ನೇ ಸಾಲಿನ ಪದವಿ ಮಟ್ಟದ 6ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು 2020ರ ಸಪ್ಟೆಂಬರ್‌ಅಂತ್ಯದ ಒಳಗೆ ನಡೆಯಲಿದೆ
ಮಂಗಳೂರು(ಆ.08): ಕೋವಿಡ್-19 ಕಾರಣದಿಂದ ಮಂಗಳೂರು ವಿಶ್ವವಿದ್ಯಾನಿಲಯದ 2019-20ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ನಡೆಸಲು ಸಾಧ್ಯವಾಗಿರುವುದಿಲ್ಲ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಇದರ ಮಾರ್ಗಸೂಚಿಗಳ ಪ್ರಕಾರ 2019-20ನೇ ಸಾಲಿನ ಪದವಿ ಮಟ್ಟದ 6ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿ ಮಟ್ಟದ 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು 2020ರ ಸಪ್ಟೆಂಬರ್‌ಅಂತ್ಯದ ಒಳಗೆ ನಡೆಯಲಿದೆ.
ಆ.10 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್
ಈ ಬಗ್ಗೆ ವೇಳಾಪಟ್ಟಿಯನ್ನು ಮಂಗಳೂರು ವಿವಿ ಜಾಲತಾಣ-https://mangaloreuniversity.ac.in/ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಂಗಳೂರು ವಿವಿ ವೆಬ್‌ಸೈಟ್ ಅಥವಾ ದೂರವಾಣಿ ಸಂಖ್ಯೆ: 0824-2287276 ಸಂಪರ್ಕಿಸುವಂತೆ ವಿವಿ ಕುುಲಸಚಿವರ ಪ್ರಕಟಣೆ ತಿಳಿಸಿದೆ.
