Asianet Suvarna News Asianet Suvarna News

ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ : ಸಚ್ಚಿದಾನಂದ ಸ್ವಾಮೀಜಿ

ಮನುಷ್ಯನ ಬದಲಾದ ಜೀವನ ಶೈಲಿಯಿಂದ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು 

Declining human values : Satchidananda Swamiji snr
Author
First Published Oct 9, 2023, 8:08 AM IST

  ಮೈಸೂರು : ಮನುಷ್ಯನ ಬದಲಾದ ಜೀವನ ಶೈಲಿಯಿಂದ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿದೆ ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು 

ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಆದರ್ಶ ರತ್ನ, ಆದರ್ಶ ಸೇವಾ ರತ್ನ, ಆದರ್ಶ ಪ್ರತಿಭಾ ರತ್ನ, ಆದರ್ಶ ಬಾಲ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀಕೃಷ್ಣ ಹೇಳಿರುವಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಹೀಗಾಗಿ ಪ್ರಸ್ತುತ ಭಗವದ್ಗೀತೆಯ ಮೌಲ್ಯಗಳು ವಿಶ್ವದಾದ್ಯಂತ ಹೆಚ್ಚು ಮನ್ನಣೆಗಳಿಸುತ್ತಿದೆ. ಪ್ರಸ್ತುತ ಯುವ ಸಮೂಹದಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ಪರರ ದುಃಖಕ್ಕೆ ಸಾಂತ್ವಾನ ಹೇಳುವ ಮತ್ತು ಸುಃಖ ಹಂಚಿಕೊಳ್ಳುವ ಪ್ರಕ್ರಿಯೆ ಕಡಿಮೆಯಾಗಿದೆ. ಈ ಮೌಲ್ಯ ಹೆಚ್ಚಾಬೇಕಾದರೆ ಭಗವದ್ಗೀತೆ, ವೇದ, ಉಪನಿಷತ್ತಿನ ಅಭ್ಯಾಸ ಮಾಡಬೇಕು ಎಂದರು.

ವಿದೇಶಗಳಲ್ಲಿ ನೆಲೆಸಿರುವ ಹಿಂದುಗಳು ಮಕ್ಕಳಿಗೆ ಭಗವದ್ಗೀತೆ ಪಠಣ ಮಾಡಿಸುತ್ತಿದ್ದಾರೆ. ಆಮೇರಿಕಾರದಲ್ಲಿ ಭಗವದ್ಗೀತೆ ಅಭ್ಯಾಸ ಹೆಚ್ಚಾಗುತ್ತಿದೆ. ಆ ಮೂಲಕ ದೊಡ್ಡ ಕ್ರಾಂತಿ ಆಗುತ್ತಿದೆ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ವಾತನಾಡಿ, ನಾನು ಶಾಸಕನಾಗಲು ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ ಅವರ ಪಾತ್ರ ದೊಡ್ಡದಿದೆ, ಎಂದು ಕೃತಜ್ಙತೆ ಸಲ್ಲಿಸಿದರು.

ವೇದಾಧ್ಯುಯನ ನಿರತ ಬಾಲ ಸಾಧಕ ಪೃಥು ಪಿ. ಅದ್ವ್ತ್ಯೈತ್, ಭರತನಾಟ್ಯ ಬಾಲ ಕಲಾವಿದ ಭಗತ್ ಶರ್ಮ, ಕಿರುತರೆ ನಟ ವಿ. ಅಮೋಘ ಕೃಷ್ಣ, ವಯೋಲಿನ್‌ವಾದಕ ಪ್ರಣವ್ ಚಂದ್ರಶೇಖರ್. ಅವರಿಗೆ ಆದರ್ಶ ಬಾಲಪ್ರತಿಭಾ ರತ್ನ ಪ್ರಶಸ್ತಿ ನೀಡಲಾಯಿತು.

ಯುವ ವಿಜ್ಞಾನಿ ಆಕಾಶ್‌, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಆಟಗಾರ ವಿದ್ಯಾನಂದ ಕಶ್ಯಪ್‌, ಮಾರ್ಗದರ್ಶಕ ಬಿ. ನಾಗರಾಜ್‌ಕುಮಾರ್‌, ಯುವ ಚಿಂತಕ ಪ್ರಜ್ಞಾ ಕಶ್ಯಪ್‌, ಗಾಯಕ ಕೆ. ರಮೇಶ್‌, ಕೋಟಿ ವೃಕ್ಷ ಪ್ರತಿಷ್ಠಾನದ ಶ್ರೀಕಾಂತ್‌ಭಟ್‌, ಮಾಧ್ಯಮ ಪ್ರವರ್ತಕ ಅಮಿತ್‌, ಗಾಯಕಿ ಹಂಸಿನಿ ಎಸ್‌. ಕುಮಾರ್‌, ಯುವ ಉದ್ಯಮಿ ಶೌಮಿಕಾ ಎಸ್‌. ರಾವ್‌, ವಯೋಲಿನ್‌ವಾದಕ ಸಿರಿ ಪರಮಾತ್ಮ, ಚಿತ್ರಕಲಾವಿದೆ ಶಿವಾನಿ ಪ್ರಸಾದ್, ಎಂಜಿನಿಯರ್‌ಪಿ.ಎನ್. ಪ್ರಶಾಂತ್ ಅವರಿಗೆ ಆದರ್ಶ ಪ್ರತಿಭಾ ಪತ್ನ ಪ್ರಶಸ್ತಿ ನೀಡಲಾಯಿತು.

ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಬಿ.ಎನ್. ನಾಗರಾಜು, ನಿವೃತ್ತ ಪ್ರಾಧ್ಯಾಪಕ ಕೆ.ಎನ್.ನಾಗೇಶ್, ಎಂ.ಶ್ರೀಕಂಠಮೂರ್ತಿ, ವಿನೋದಮ್ಮ ಅವರಿಗೆ ಆದರ್ಶ ರತ್ನ ಪ್ರಶಸ್ತಿ ನೀಡಲಾಯಿತು.

ಸುಮಾರು 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಹೈ ಕೋರ್ಟ್‌ನಿವೃತ್ತ ನ್ಯಾಯಾಧೀಶ ಎನ್‌. ಕುಮಾರ್‌, ವಿಶ್ವ ವಿಪ್ರತ್ರಯೀ ಪರಿಷತ್‌ನ ಅಧ್ಯಕ್ಷ ಎನ್.ರಘುನಾಥ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜು ಮೊದಲಾದವರು ಇದ್ದರು.

Follow Us:
Download App:
  • android
  • ios