ಮಂಡ್ಯ [ಡಿ.13]: ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೂಲು ಕಂಡಿದ್ದು, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಜಯಗಳಿಸಿದ್ದು, ಜೆಡಿಎಸ್ ನಾಯಕರ ತಲೆ ಬಿಸಿ ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಜೆಡಿಎಸ್ ಸೋಲಿಗೆ ಇಲ್ಲಿ ಕಾರಣಗಳೇನು ಎನ್ನುವ ಲೆಕ್ಕಾಚಾರಕ್ಕೆ ಜೆಡಿಎಸ್ ನಾಯಕರು ಇಳಿದಿದ್ದು, ಇದೀಗ ಕೃತಜ್ಞತಾ ಸಭೆ ಆಯೋಜನೆ ಮಾಡುತ್ತಿದ್ದಾರೆ. 

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸಭೆ ನಡೆಸಲಿದ್ದು, ಜೆಡಿಎಸ್ ಗೆ ಮಯ ನೀಡಿದ ಮತದಾರರಿಗೆ ಕೃತಜ್ಞತೆ ತಿಳಿಸಲು ಮುಂದಾಗಿದ್ದಾರೆ. ಡಿಸೆಂಬರ್ 14ರ ಶನಿವಾರ ಜೆಡಿಎಸ್ ನಾಯಕರ ಸಭೆ ನಡೆಯಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಭೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆ ನಡೆಯಲಿದ್ದು ಮುಂದೆ ಪಕ್ಷ ಕಟ್ಟುವ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಿದ್ದಾರೆ. 

ಈ ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ, ಪುಟ್ಟರಾಜು, ಶಾಸಕ ಬಾಲಕೃಷ್ಣ, ಪರಾಜಿತ ಅಭ್ಯರ್ಥಿ ಬಿಎಲ್. ದೇವರಾಜು ಪಾಲ್ಗೊಳ್ಳಲಿದ್ದಾರೆ. 

ಕೆ.ಆರ್ ಪೇಟೆ ಕ್ಷೇತ್ರದಿಂದ ಅನರ್ಹರಾಗಿದ್ದ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಇಲ್ಲಿ ಜಯಗಳಿಸಿದ್ದು, ಜೆಡಿಎಸ್ ಅಭ್ಯರ್ಥಿ ದೇವರಾಜು ಪರಾಭವಗೊಂಡಿದ್ದರು.