ಬೆಂಗಳೂರಿನಲ್ಲಿ ನೂತನ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಮೇಲೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರಿಜ್ವಾನ್ ಅರ್ಷದ್ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಬೆದರಿಕೆ ಹಾಕಲಾಗಿದ್ದು, "ಅಲ್ಲಾ" ಮತ್ತು "ಶ್ರೀಕೃಷ್ಣ" ಹೆಸರಿನಲ್ಲಿ 'ನಿನ್ನ ಸಾವು ನನ್ನಿಂದಲೇ' ಎಂದು ಬರೆಯಲಾಗಿದೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಆ.06): ರಾಜ್ಯ ಸರ್ಕಾರದ 2ನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ 19 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಸಚಿವರಾಗುತ್ತಿದ್ದಂತೆ ಅವರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಲಾಗಿತ್ತು. ಆದರೆ, ಅವರ ಬ್ಯಾನರ್ ಮೇಲೆ ಕಿಡಿಗೇಡಿಗಳು ನಿನ್ನ ಸಾವು ನನ್ನ ಕೈಯಿಂದಲೇ ಎಂದು ಬರೆದು ಕೊಲೆ ಬೆದರಿಕೆ ಹಾಕಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ನಲ್ಲಿ ಸಚಿವ ರಿಜ್ವಾನ್ ಅರ್ಹಾದ್ ಗೆ ಶುಭಕೊರಿದ ಫ್ಲಕ್ಸ್ ನಲ್ಲಿ ಕೊಲೆ ಬೆದರಿಕೆ ಬರಹವನ್ನು ಬರೆಯಲಾಗಿದೆ. ದೇವರ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಿಜ್ವಾನ್ ಅರ್ಷಾದ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ. ರಿಜ್ವಾನ್ ಅರ್ಷದ್ ಪೋಸ್ಟರ್ ನಲ್ಲಿ ಡಿಕೆಶಿ ವಿರುದ್ಧ ಅವಹೇಳನಕಾರಿ ಬರಹ ಬರೆಯಲಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನ ಕೊಲೆ ಮಾಡೋದಾಗಿ ಬೆದರಿಕೆ ಬರೆಯಲಾಗಿದೆ.

ಶ್ರೀಕೃಷ್ಣ-ಅಲ್ಲಾನ ಮೇಲಾಣೆ

ಕೊಲೆಗಾರ ಡಿಕೆಶಿ, ನಿನ್ನ ಸಾವು ನನ್ನಿಂದ - ಶ್ರೀಕೃಷ್ಣ. ಹಾಗೂ ರಿಜ್ವಾನ್ ಅರ್ಷದ್ ವಿರುದ್ಧವೂ ಕೊಲೆ ಬೆದರಿಕೆ ಬರಹ ಬರೆಯಲಾಗಿದೆ. ರಿಜ್ವಾನ್ ಅರ್ಷದ್ ಅವರಿಗೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ನಿನ್ನ ಸಾವು ಖಚಿತ - ಅಲ್ಲಾ ಎಂದು ಬರೆಯಲಾಗಿದೆ. ವಸಂತನಗರ ಕ್ಯನಿಂಗ್ ಹ್ಯಾಮ್ ರಸ್ತೆಯಲ್ಲಿ ಹಾಕಿರುವ ಪ್ಲೆಕ್ಸ್‌ನಲ್ಲಿ ಕಿಡಿಗೇಡಿಗಳು ಶ್ರೀಕೃಷ್ಣ ಮತ್ತು ಅಲ್ಲಾ ಹೆಸರಿನಲ್ಲಿ ಬೆದರಿಕೆ ಬರಹ ಬರೆದಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.