Asianet Suvarna News Asianet Suvarna News

ಹುಬ್ಬಳ್ಳಿ: ಓಮಿನಿ ಕಾರು, ಲಾರಿ ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ಮೂವರ ದುರ್ಮರಣ

ಓಮಿನಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮೂರು ಜನರಿಗೆ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಬಳಿ ನಡೆದಿದೆ. 

Death of three members of the same family due to road accident near hubballi grg
Author
First Published Aug 24, 2024, 7:00 AM IST | Last Updated Aug 24, 2024, 7:03 AM IST

ಹುಬ್ಬಳ್ಳಿ(ಆ.24):  ಓಮಿನಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮೂರು ಜನರಿಗೆ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದ ಬಳಿ ಇಂದು(ಶನಿವಾರ) ನಡೆದಿದೆ. 

ಮೃತರನ್ನ ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದವರಾಗಿದ್ದು, ಜಾಫರಸಾಬ ಮಂಗಳೂರು (60) ಮುಸ್ತಫಾ(36) ಹಾಗೂ ಶೊಹೇಬ್ ಮಂಗಳೂರು (6) ಎಂದು ಗುರುತಿಸಲಾಗಿದೆ. 

ತುಮಕೂರು: ಬೈಕ್‌ನಿಂದ ಆಯತಪ್ಪಿ ಬಿದ್ದ ಬಾಲಕನ ತಲೆ ಮೇಲೆ ಹರಿದ ಶಾಲಾ ಬಸ್‌, ಸ್ಥಳದಲ್ಲೇ ಸಾವು..!

ಇನ್ನುಳಿದ ಮೂರು ಜನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರು ಜಾಫರಸಾಬ ಮತ್ತು ಮಗ ಮುಸ್ತಫಾ (ಸಾಹೇಬ) ಹಾಗೂ ಮೊಮ್ಮಗ ಶೊಹೇಬ್ ಎಂದು ತಿಳಿದು ಬಂದಿದೆ. 

Latest Videos
Follow Us:
Download App:
  • android
  • ios