ಮೃತದೇಹ ಎತ್ತಬೇಕೆನ್ನುವಷ್ಟರಲ್ಲಿ ಕಣ್ಬಿಟ್ಟ ಮಹಿಳೆ, ಸಂಬಂಧಿಕರಿಗೆ ಶಾಕ್..!

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಮೃತಪಟ್ಟಿರೋದಾಗಿ ಕೊಪ್ಪಳದ ಕೆ.ಎಸ್.ಆಸ್ಪತ್ರೆ ವೈದ್ಯರು ಹೇಳಿದ್ದರು. ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದ ಸಂಬಂಧಿಕರು, ಇನ್ನೇನು ಮೃತದೇಹ ಎತ್ತಬೇಕೆನ್ನುವಷ್ಟರಲ್ಲಿ ಮಹಿಳೆ ಕಣ್ಬಿಟ್ಟಿದ್ದಾರೆ.

Dead Woman woke up when she was about to be cremated in Koppal

ಕೊಪ್ಪಳ(ಜು.23): ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಇನ್ನೇನು ಮೃತದೇಹ ಎತ್ತಬೇಕು ಎನ್ನುವಷ್ಟರಲ್ಲಿ ಮಹಿಳೆ ಕಣ್ಬಿಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಕವಿತಾ ಅವರಿಗೆ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಕೊಪ್ಪಳದ ಮಂಜುನಾಥ ಕುಂಬಾರ ಅವರ ಪತ್ನಿ ಆಗಿರುವ ಕವಿತಾ ಆರು ಮಕ್ಕಳ ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಕಾಣಿಸಿಕೊಂಡ ಅಧಿಕ ರಕ್ತಸ್ರಾವ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಸ್.ಆಸ್ಪತ್ರೆಗೆ ಸಾಗಿಸಲು ಶಿಫಾರಸು ಮಾಡಲಾಗಿತ್ತು.

ಎರಡು ದಿನ ಚಿಕಿತ್ಸೆ ನೀಡಿದ ಬಳಿಕ ಸೋಮರಾತ್ರಿ ರಾತ್ರಿ ಕವಿತಾ ಸತ್ತಿರುವುದಾಗಿ ಕೆ.ಎಸ್. ಆಸ್ಪತ್ರೆ ಸಿಬ್ಬಂದಿ ಘೋಷಿಸಿದ್ದರು.  ಕವಿತಾ ಮೃತಪಟ್ಟಿದ್ದಾರೆಂದು ಹೆಣ ಒಯ್ಯಲು‌ ಬಂದ ಸಂಬಂಧಿಕರಿಗೆ ಶಾಕ್ ಆಗಿದೆ.  ವೈದ್ಯಾಧಿಕಾರಿಗಳ ಘೋಷಣೆಯಿಂದ ಕವಿತಾಳ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಸಂಬಂಧಿಕರು ಬೆಳಗ್ಗೆ ಮೃತದೇಹ ಒಯ್ಯುವುದಾಗಿ ಹೇಳಿದ್ದರು. ಸಂಬಂಧಿಕರು ಇನ್ನೇನು ದೇಹ ಎತ್ತಿಕೊಳ್ಳುವಷ್ಟರಲ್ಲಿ ಕವಿತಾ ಕಣ್ಣು ಬಿಟ್ಟಿದ್ದಾರೆ.

ಪ್ರಪಾತಕ್ಕೆ ಉರುಳಿದರೂ ಅದೃಷ್ಟವಶಾತ್ ಬದುಕುಳಿದ ನಾಲ್ವರು

ಘಟನೆಯಿಂದ ಸಂಬಂಧಿಕರು ಸೇರಿ ನೆರೆದವರೂ ಶಾಕ್‌ಗೆ ಒಳಗಾಗಿದ್ದಾರೆ. ಅಂತ್ಯಸಂಸ್ಕಾರಕ್ಕೆಂದು ಬಂದ ಸಂಬಂಧಿಕರಿಂದ ಆಸ್ಪತ್ರೆ ಎದುರು ಗಲಾಟೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Latest Videos
Follow Us:
Download App:
  • android
  • ios