ಮುಳಬಾಗಿಲು: ಹೂತಿದ್ದ ಶಿಕ್ಷಕಿಯ ಶವ ಹೊರತೆಗೆದು ಪರೀಕ್ಷೆ, ಕಾರಣ?

ಶವಪರೀಕ್ಷೆ ನಡೆಸದೆ ಹೂಳುವುದು ಕಾನೂನು ಪ್ರಕಾರ ಅಪರಾಧ. ಹಾಗಾಗೀ ನಂಗಲಿ ಪೊಲೀಸರು ಮೇಲಧಿಕಾರಿಗಳ ಅನುಮತಿ ಪಡೆದು ತಹಸೀಲ್ದಾರ್‌ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಶವಪರೀಕ್ಷೆ ಮಾಡಿಸಲಾಯಿತು.

Dead Body of the Buried Teacher Exhumed and Examined at Mulabagilu in Kolar grg

ಮುಳಬಾಗಿಲು(ಜು.19):  ಅಪಘಾತದಲ್ಲಿ ಮೃತಪಟ್ಟ ಶಾಲಾ ಶಿಕ್ಷಕಿಯೊಬ್ಬರ ಶವಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ಮಾಡಿದ ಹಿನ್ನೆಲೆಯಲ್ಲಿ ಶವವನ್ನು ಸಮಾದಿಯಿಂದ ಹೊರತೆಗೆದು ಶವಪರೀಕ್ಷೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ತಾಲೂಕಿನ ತಾಯಲೂರು ಗ್ರಾಮದ ಯೋಗೇಶ್‌ ಎಂಬುವರ ಪತ್ನಿ ಮಂಜುಳಾ ಬೇವಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಅವರು ಶಾಲೆಯಿಂದ ಗ್ರಾಮಕ್ಕೆ ವಾಪಸ್‌ ಬರುವ ವೇಳೆ ಶ್ರೀರಂಗಪುರಂ ಗೇಟ್‌ ಬಳಿ ಅಪಘಾಕ್ಕೀಡಾಗಿದ್ದರು. ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಆದರೆ ಅವರ ಶವ ಪರೀಕ್ಷೆ ನಡೆದಸದೆ ತಾಯಲೂರು ಗ್ರಾಮದ ಸ್ಮಶಾನದಲ್ಲಿ ಹೂಳಲಾಗಿತ್ತು. 

ಸಾವಿರಾರು ಎಕರೆ ಭೂಮಿಗೆ ಭೂಗಳ್ಳರಿಂದ ಬೇಲಿ: ಕಣ್ಮುಚ್ಚಿ ಕುಳಿತಿದೆಯಾ ಸರ್ಕಾರ..?

ಆದರೆ ಶವಪರೀಕ್ಷೆ ನಡೆಸದೆ ಹೂಳುವುದು ಕಾನೂನು ಪ್ರಕಾರ ಅಪರಾಧ. ಹಾಗಾಗೀ ನಂಗಲಿ ಪೊಲೀಸರು ಮೇಲಧಿಕಾರಿಗಳ ಅನುಮತಿ ಪಡೆದು ಸೋಮವಾರ ತಹಸೀಲ್ದಾರ್‌ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಶವಪರೀಕ್ಷೆ ಮಾಡಿಸಲಾಯಿತು.

Latest Videos
Follow Us:
Download App:
  • android
  • ios