ಕಲಬುರಗಿ(ಫೆ.19): ಯಾವುದೇ ಪ್ರದೇಶದಲ್ಲಿ ಪ್ರಗತಿ ವಿಚಾರಗಳಲ್ಲಿ ತಾರತಮ್ಯವಾದಲ್ಲಿ ಪ್ರಸ್ನಿಸಬೇಕೇ ವಿನಹಃ ಅದನ್ನೇ ಮುಂದಿಟ್ಟುಕೊಂಡು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಹೋರಾಟ ಮಾಡುವುದು ಸರಿಯಲ್ಲ ಎಂದು ಉಪ ಮುಕ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಐಟಿ ಬಂದಾಗ ಧಾರವಾಡಕ್ಕೆ ಮಂಜೂರು ಮಾಡಲಾಗಿದೆ, ಐಐಐಟಿ ಬಂದಾಗ ರಾಯಚೂರಿಗೆ ಕೊಟ್ಟಿದ್ದೇವೆ. ಇಂತಹ ಯೋಜನೆಗಳು ಬಂದಾಗ ಆ ಭಾಗಕ್ಕೆ ಒಂದು ಈ ಭಾಗಕ್ಕೆ ಒಂದು ಕೊಡ್ತಿದ್ದೇವೆ. ಏಮ್ಸ್‌ ವಿಚಾರ ಬಂದಾಗ ಅದು ಎಲ್ಲರ ಬೇಡಿಕೆಯಾಗಿತ್ತು. ಈ ವಿಚಾರದಲ್ಲಿ ಕೇಂದ್ರ ನಿರ್ಣಯ ಕೈಗೊಳ್ಳುತ್ತದೆ ಎಂದರು.

ಡೀಸೆಲ್ ದರ ಏರಿಕೆ: ಬಸ್ ಟಿಕೇಟ್ ದರ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೊಟ್ಟ ಸವದಿ

ಅಭಿವೃದ್ಧಿ ಬಗ್ಗೆ ತಾರಾತಮ್ಯ ಆದಾಗ ಬಗ್ಗೆ ಕೇಳಬೇಕು, ಆದ್ರೆ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ, ಪ್ರತ್ಯೇಕ ರಾಜ್ಯದ ಬಗ್ಗೆ ಮಹತ್ವ ಕೊಡುವುದು ಸರಿಯಲ್ಲ, ನಮ್ಮ ಪೂರ್ವಜರು ಅಖಂಡ ಕರ್ನಾಟಕ್ಕೆ ಸಾಕಷ್ಟುಪರಿಶ್ರಮ ವಹಿಸಿದ್ದಾರೆ, ಕಲ್ಯಾಣ ಕರ್ನಾಟಕ ಅಂತಾ ನಾಮಕರಣ ಮಾಡಿರೋದು ಕಲ್ಯಾಣ ಆಗಲಿ ಅಂತಾ ಉದ್ದೇಶದಿದಂಲೇ ಹೊರತು ಅನ್ಯ ಉದ್ದೇಶಗಳಿಲ್ಲ. ಕಲ್ಯಾಣ ಕರ್ನಾಟಕ ಶ್ರೀಮಂತ ಆಗಲಿ ಅಂತಾ ನಮ್ಮ ಬಯಕೆ, ಆಶಾವಾದ ಇರಬೇಕು ನಿರಾಶಾವಾದ ಬೇಡ ಎಂದು ಸವದಿ ಹೇಳಿದರು.

ಕೊರೊನಾದಿಂದ ಸಾಕಷ್ಟುಹಣಕಾಸಿನ ತೊಂದರೆ ಆಗಿದೆ, ಈವಾಗ ಸುಧಾರಿಸಿಕೊಂಡು ಮೇಲೆ ಬರ್ತಿದ್ದವೆ, ಉತ್ತರ ಕರ್ನಾಟಕಕ್ಕೆ ಬರಬೇಕಾದ್ದು ತರೊಕೆ ಪ್ರಯತ್ನ ಮಾಡೋಣ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿಸಿಎಂ ಸವದಿ ಬೆಂಗಳೂರಿ ಬೌನ್ಸ… ಕಂಪನಿಗೆ ಮಾತ್ರ ಬೈಕ್‌ ಟ್ಯಾಕ್ಸಿ ಪರವಾನಗಿ ನೀಡಲಾಗಿದೆ, ಹತ್ತೊಂಬತ್ತು ಸಾವಿರ ಟ್ಯಾಕ್ಸಿಗೆ ಪರವಾನಗಿ ಪಡೆದಿದ್ದಾರೆ, ಆದ್ರೆ ಹತ್ತು ಸಾವಿರ ಮಾತ್ರ ಓಡಾಡುತ್ತಿವೆ, ಅನಧಿಕೃತವಾಗಿ ಯಾರಾದ್ರು ಬೈಕ್‌ ಟ್ಯಾಕ್ಸಿ ಓಡಿಸಿದ್ರೆ ಅವರ ವಿರುದ್ಧ ಅವಗವಾಗ ಪೊಲೀಸರು ಕ್ರಮ ತೆಗೆದುಕೊಂಡು ಕೇಸ್‌ ಹಾಕುತ್ತಿದ್ದಾರೆ, ಬೋನ್ಸ… ಕಂಪನಿ ಬಿಟ್ಟು ಬೇರೆ ಯಾರು ಪರವಾನಗಿ ಪಡೆದಿಲ್ಲಾ ಎಂದರು. ಸಾರಿಗೆ ಆಯುಕ್ತ ಶಿವಕುಮಾರ್‌ ಗುಂಡಾ ವರ್ತನೆ ಬಗ್ಗೆ ನನಗೆ ಗೊತ್ತಿಲ್ಲಾ, ನನ್ನ ಗಮನಕ್ಕೆ ಬಂದಿಲ್ಲಾ ಆ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸುತ್ತ ಸ್ಪಷ್ಟಪಡಿಸಿದ್ದಾರೆ.