ಬಳ್ಳಾರಿ(ಜ.26): ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಅನುದಾನ ‌ನೀಡಲಿದೆ. ಈ ಅನುದಾನವನ್ನ ಬರ ಪೀಡಿತ ಪ್ರದೇಶಗಳಿಗೆ ಬಳಸುತ್ತೇವೆ. ಬಜೆಟ್‌‌ನಲ್ಲಿ‌ ಬಳ್ಳಾರಿ ಕೃಷಿ ಕ್ಷೇತ್ರಕ್ಕೆ ಅನುದಾನ‌ ನೀಡಲು‌ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿ ರಸ್ತೆ ತೆರಿಗೆ ಕಡಿಮೆ ಇದೆ. ಒನ್ ನೇಷನ್ ಒನ್ ಟ್ಯಾಕ್ಸ್ ತರುವ ಪ್ರಯತ್ನ ನಡೆದಿದೆ. ಈ ರೀತಿ ‌ಮಾಡಿದರೆ ಎಲ್ಲ ರಾಜ್ಯಕ್ಕೂ ಅನುಕೂಲವಾಗಲಿದೆ. ಈ ಸಂಬಂಧ ಕೇಂದ್ರದ ಸಾರಿಗೆ ಸಚಿವರು ಎಲ್ಲ ರಾಜ್ಯದ ಸಾರಿಗೆ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ತೆರಿಗೆ ಕಟ್ಟುವುದಲ್ಲಿ ಸಾರಿಗೆ ಇಲಾಖೆ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. 

ಸಾರಿಗೆ ಇಲಾಖೆಯಲ್ಲಿ ಈ ಬಾರಿ ಒಂದು ಸಾವಿರ ಕೋಟಿ ಆದಾಯ ಕಡಿಮೆಯಾಗಿದೆ. ಡಿಸೈಲ್, ಪೆಟ್ರೋಲ್ ದರ ಏರಿಕೆಯಾಗಿದ್ದರಿಂದ ಸಾರಿಗೆ ಇಲಾಖೆ ಹೊರೆಗೆ ಕಾರಣವಾಗಿದೆ. ಟಿಕೆಟ್ ದರ ಹೆಚ್ಚಳ ಮಾಡದೇ ಇರೋದು ಕೂಡ ಆದಾಯ ಕಡಿಮೆಗೆ ಕಾರಣವಾಗಿದೆ. ಎಲೆಕ್ಟ್ರಿಕಲ್ ಬಸ್‌ಗಳನ್ನು ತರುವ ವಿಚಾರ ಇದೆ. ಇದಕ್ಕೆ ವಿದೇಶಿ ಕಂಪನಿಗಳು ಮುಂದೆ ಬಂದಿವೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದಾಯದಲ್ಲಿ ಶೇಕಡಾವಾರು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಬಿಎಂಟಿಸಿ ದಿನಕ್ಕೆ ಒಂದು ಕೋಟಿ ರು. ನಷ್ಟದಲ್ಲಿದೆ. ಆದಾಯ ತರುವುದೇ ನಮ್ಮ ಮೂಲ ಗುರಿಯಲ್ಲ, ಸಾರಿಗೆ ನೌಕರರನ್ನು ಸಾರಿಗೆ ನೌಕರರನ್ನಾಗಿ ಮಾಡುವ ವಿಚಾರದ  ಈ ಬಗ್ಗೆ ಸಮಿತಿ ರಚನೆ ಮಾಡಲಾಗಿದೆ. ಈ ಬಗ್ಗೆ ಚರ್ಚೆ ಕೂಡ ನಡೆದಿದೆ. ನೆರೆಯ ಆಂಧ್ರದಲ್ಲಿ ಜಾರಿಗೆ ತರುತ್ತಿದ್ದಾರೆ. ಅಲ್ಲಿ ನೋಡಿಕೊಂಡು ನಾವು ‌ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. 

ವಿಜಯನಗರ ಜಿಲ್ಲೆಯ ಮಾಡುವ ಸಂಬಂಧ ಈಗಾಗಲೇ ಒಂದು ಬಾರಿ ಸಭೆ ನಡೆದಿದೆ. ಅಧಿವೇಶನ ಮುಗಿದ ಮೇಲೆ ಮತ್ತೊಂದು ಸಭೆ ಮಾಡುತ್ತೇವೆ. ಸಂಘ ಸಂಸ್ಥೆ ಸೇರಿದಂತೆ ಜನಪ್ರತಿನಿಧಿಗಳ ಸಭೆ ನಡೆಯಲಿದೆ. ಬಳಿಕ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.  

ಪೂರ್ಣಪ್ರಮಾಣದ ಮಂತ್ರಿ ಮಂಡಲ ರಚನೆಯಾಗಿಲ್ಲ. ಈ ತಿಂಗಳ ಕೊನೆಯಲ್ಲಿ ರಚನೆಯಾಗಲಿದೆ. ಎಲ್ಲ ಸಚಿವರಿಗೂ ಜಿಲ್ಲಾ ಉಸ್ತುವಾರಿ ನಿಗದಿಯಾಗಲಿದೆ. ಬಳ್ಳಾರಿಯಲ್ಲಿ ಇರುವುದಾದರೆ ಕಚೇರಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತೇನೆ. ಆದರೆ, ಅವರ ವಿರುದ್ಧವೂ ಎಫ್‌ಐಆರ್‌ ಆಗಿದೆ. ಮಂಗಳೂರಿನ ಶಾಸಕರೊಬ್ಬರು ಪ್ರಚೋದನಕಾರಿ ಮಾತನಾಡಿದ್ದರು ಅದಕ್ಕೆ ಮಾತ್ರ ರೆಡ್ಡಿ ಕೌಂಟರ್ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ರೆಡ್ಡಿ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.