ಬೆಂಗಳೂರು(ಮೇ.08): ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ವಿಷಾನಿಲ ಸೋರಿಕೆ ಘಟನೆ ನಡೆದ ಪ್ರದೇಶದಲ್ಲಿ ಕರ್ನಾಟಕದವರು ಸಿಲುಕಿದ್ದರೆ ಪತ್ತೆ ಮಾಡಲು ಹಾಗೂ ಸಹಾಯ ಒದಗಿಸುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಸಹಾಯವಾಣಿ ಆರಂಭಿಸಿದ್ದಾರೆ. 

ರಾಯಚೂರು ಜಿಲ್ಲಾಡಳಿತದಿಂದ ಈ ಸಹಾಯವಾಣಿ (08532 228559 ಮತ್ತು 8660761866) ಆರಂಭಿಸಲಾಗಿದೆ. ಸಂತ್ರಸ್ತರು ಈ ಸಹಾಯವಾಣಿಯ ಪ್ರಯೋಜನ ಪಡೆಯಬಹುದು ಎಂದು ಸವದಿ ಹೇಳಿದ್ದಾರೆ.

ವಿಷಾನಿಲ ಸೋರಿಕೆ, 11 ಸಾವು, 200ಕ್ಕೂ ಹೆಚ್ಚು ಮಂದಿ ಗಂಭೀರ!

ಈ ವಿಷಾನಿಲ ಸೋರಿಕೆ ಪ್ರಕರಣದಿಂದ ಅಪಾರ ಸೋವು-ನೋವು ಉಂಟಾಗಿರುವುದು ದುರ್ದೈವ. ಈ ದುರ್ಘಟನೆಯಿಂದ ನೊಂದವರಿಗೆ ಸಾಂತ್ವನ ಹೇಳಿರುವ ಸಚಿವರು, ಘಟನೆಯಿಂದ ತೊಂದರೆಗೆ ಒಳಗಾದ, ಅನಾರೋಗ್ಯಕ್ಕೆ ಈಡಾಗಿರುವ ಹಾಗೂ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.