Asianet Suvarna News Asianet Suvarna News

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ 50 ಕೋಟಿ: ಡಿಸಿಎಂ ಸವದಿ

ರಾಯಚೂರು ವಿಮಾನ ನಿಲ್ದಾಣವು ಈಗ ನನಸಾಗುವ ಹಂತಕ್ಕೆ ಬಂದಿದೆ| ಯರಮರಸ್‌ ಹೊರವಲಯದಲ್ಲಿ 404 ಎಕರೆ ಭೂಮಿ ಮೀಸಲು| ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 114 ಕೋಟಿ ಅನುದಾನದಲ್ಲಿ 2,300 ಮನೆ ಮಂಜೂರು| 

DCM Laxman Savadi Says 50 Crores Rs for Raichur Airport grg
Author
Bengaluru, First Published Jan 27, 2021, 3:32 PM IST

ರಾಯಚೂರು(ಜ.27):  ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ .50 ಕೋಟಿ ಮಂಜೂರಾಗಿದ್ದು ಅದಕ್ಕೆ ಡಿಪಿಆರ್‌ ಸಿದ್ದಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ನಗರದ ಎಸ್ಪಿ ಕಚೇರಿಯಲ್ಲಿರುವ ಡಿಎಆರ್‌ ಪರೇಡ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 72 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಂಗಳವಾರ ಮಾತನಾಡಿದರು. ಜಿಲ್ಲೆಯ ಜನತೆಯ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣವು ಈಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಯರಮರಸ್‌ ಹೊರವಲಯದಲ್ಲಿ 404 ಎಕರೆ ಭೂಮಿಯನ್ನು ಇದಕ್ಕಾಗಿ ಕಾಯ್ದಿರಿಸಲಾಗಿದೆ. ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 40 ಕೋಟಿ ರೂಪಾಯಿ ಅನುದಾನ ಮತ್ತು ಡಿಎಂಎಫ್‌ ಅಡಿಯಲ್ಲಿ 10 ಕೋಟಿ ರೂ.ಗಳೂ ಸೇರಿದಂತೆ ಒಟ್ಟು 50 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟು ಈಗಾಗಲೇ ಡಿಪಿಆರ್‌ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.

ಕೊರೋನಾ ಲಸಿಕೆಯು ಸಾಕಷ್ಟುಪ್ರಮಾಣದಲ್ಲಿ ರಾಜ್ಯದಲ್ಲಿ ದೊರೆಯುವಂತೆ ಸರ್ಕಾರ ವ್ಯವಸ್ಥೆಮಾಡಿದ್ದು,ಆದರೆ ಲಸಿಕೆಯ ಬಗ್ಗೆ ಕೆಲವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡದೆ ಲಸಿಕೆ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅಕ್ರಮ ಮರಳು, ಮಟ್ಕಾ ದಂಧೆ ವಿರುದ್ಧ ಡಿಸಿಎಂ ಸವದಿ ಕೆಂಡಾಮಂಡಲ

ಜಿಲ್ಲೆಗೆ ಈಗಾಗಲೇ 9 ಸಾವಿರ ಡೋಸ್‌ ಲಸಿಕೆ ಬಂದಿದ್ದು, ಲಸಿಕೆನೀಡುವ ಕಾರ್ಯ ಮುಂದುವರಿಯುತ್ತಿರುವುದು ನೆಮ್ಮದಿಯ ಸಂಗತಿಯಾಗಿದೆ. ಜಿಲ್ಲೆಯ ಸುಮಾರು 23 ಕೇಂದ್ರಗಳಲ್ಲಿ ಈ ಲಸಿಕೆ ಕೊಡಲಾಗುತ್ತಿದ್ದು, ಮೊದಲ ಹಂತದಲ್ಲಿ ವೈದ್ಯರು, ಸ್ಟಾಫ್‌ನರ್ಸ್‌ಗಳು, ಗ್ರೂಪ್‌-ಡಿ ಸಿಬ್ಬಂದಿ ಸೇರಿದಂತೆ 15,260 ಆರೋಗ್ಯ ಕಾರ್ಯಕರ್ತರನ್ನು ಲಸಿಕೆಗಾಗಿ ಗುರುತಿಸಲಾಗಿದೆ. ಅವರೆಲ್ಲರಿಗೂ ಹಂತಹಂತವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಜಿಲ್ಲೆಗೆ 2,300 ಮನೆಗಳು ಮಂಜೂರಾಗಿವೆ. ಈ ಮನೆಗಳ ಪೈಕಿ ಹಂತ-2ರಲ್ಲಿ ರಾಯಚೂರಿನಲ್ಲಿ 1,050 ಹಾಗೂ ಹಂತ-3ರಲ್ಲಿ ರಾಯಚೂರಿನಲ್ಲಿ 500 ಮನೆಗಳು, ಸಿಂಧನೂರಿನಲ್ಲಿ 250 ಮನೆಗಳು, ದೇವದುರ್ಗದಲ್ಲಿ 250 ಮನೆಗಳು ಹಾಗೂ ಮಾನ್ವಿಗೆ 250 ಮನೆಗಳು ಮಂಜೂರಾಗಿವೆ. ಇದರ ಒಟ್ಟು ಯೋಜನಾ ಮೊತ್ತ 114 ಕೋಟಿ ರೂಪಾಯಿ. ಈ 2300 ಮನೆಗಳ ಪೈಕಿ 2,097 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಇಲ್ಲಿಯವರೆಗೆ ಒಟ್ಟು 80.66 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿವರಿಸಿದರು

ಗಣರಾಜ್ಯೋತ್ಸವ ನಿಮಿತ್ತ ಪೊಲೀಸ್‌ ಸೇರಿ ವಿವಿಧ ಇಲಾಖೆಗಳ ಆರು ತಂಡಗಳು ಆಕರ್ಷಕ ಕವಾಯತುನ್ನು ಪ್ರದರ್ಶಿಸಿದವು. ಡಿಸಿಎಂ ಲಕ್ಷ್ಮಣ ಸವದಿ ಅವರು ತೆರೆದ ಜೀಪಿನಲ್ಲಿ ತೆರಳಿ ಗೌರವವಂದನೆ ಸ್ವೀಕರಿಸಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರು, ಕೊರೋನಾ ವಾರಿಯ​ರ್‍ಸ್ಗೆ ಸನ್ಮಾನಿಸಿ ಗೌರವಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್‌ ವಹಿಸಿದ್ದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಎಂಎಲ್ಸಿ ಬಸವನಗೌಡ ಇಟಗಿ, ಡಿಸಿ ಆರ್‌.ವೆಂಕಟೇಶ ಕುಮಾರ, ಸಿಇಒ ಶೇಖ ತನ್ವೀರ ಆಸೀಫ್‌, ಎಸ್ಪಿ ನಿಕ್ಕಂ ಪ್ರಕಾಶ ಸೇರಿ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
 

Follow Us:
Download App:
  • android
  • ios