ಅಥಣಿ(ಜೂ.09): ಮನಸ್ಸಿಗೆ ನೋವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ವಿಷಯ ಮಾತನಾಡಿರಬಹುದು ಅಷ್ಟೇ. ಕೋವಿಡ್‌ ಸಂಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ರಾಜೀನಾಮೆ ವಿಷಯ ಚರ್ಚೆ ಅನಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಮಾಧ್ಯಮಗಳಲ್ಲಿ ಪದೇ ಪದೇ ಸಿಎಂ ಬದಲಾವಣೆ ವಿಚಾರವನ್ನು ಕೆಲವರು ಹಂಚಿಕೊಂಡಿದ್ದರಿಂದ ಎಲ್ಲೋ ಒಂದು ಕಡೆ ಅವರು ಬೇಜಾರು ಮಾಡಿಕೊಂಡು ಈ ವಿಚಾರವನ್ನು ಹೇಳಿರಬಹುದು ಅಷ್ಟೇ ಎಂದು ತಿಳಿಸಿದ್ದಾರೆ. 

ಎಲ್ಲಾನೂ ಸಿಎಂ ಮಾಡೋದಾದ್ರೆ ಬೆಳಗಾವಿಗೆ 4 ಮಂತ್ರಿಗಳೇಕೆ?: ಸತೀಶ್‌ ಜಾರಕಿಹೊಳಿ

ಪಕ್ಷದಲ್ಲಿ ಅವರ ರಾಜೀನಾಮೆ ವಿಚಾರ ಪ್ರಸ್ತಾಪವಾಗಿಲ್ಲ. ಹೈಕಮಾಂಡ್‌ನ ಯಾವೊಬ್ಬ ನಾಯಕರು ಇದರ ಬಗ್ಗೆ ಮಾತನಾಡಿಲ್ಲ. ಸಿಎಂ ಅವರ ಹೇಳಿಕೆಯಿಂದ ಇಂದು ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.