ದೆಹಲಿಯ ಮಣ್ಣಲ್ಲಿ ಮಣ್ಣಾದ ಕನ್ನಡದ ಮಣ್ಣಿನ ಮಗ ಸುರೇಶ್ ಅಂಗಡಿ
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ಕನ್ನಡದ ಮಣ್ಣಿನ ಮಗ ದೆಹಲಿಯ ದ್ವಾರಕಾ ಸೆಕ್ಟರ್ 24ರಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ಮಣ್ಣಾದರು. ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಹಾಗೂ ಕೋವಿಡ್ ನಿಯಮದಂತೆ ನೆರವೇರಿಸಲಾಯಿತು.
ರೈಲ್ವೆ ಖಾತೆ ರಾಜ್ಯ ಸಚಿವ (65) ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನೆರವೇರಿತು.
ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ ರುದ್ರಭೂಮಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಯ್ತು
ಕೋವಿಡ್ ಮಾರ್ಗಸೂಚಿ ನಿಯಮಾವಳಿ ಅನ್ವಯ ಅಂತ್ಯಕ್ರಿಯೆ ನಡೆಸಲಾಯಿತು.
ಪತ್ನಿ ಮಂಗಳಾ, ಪುತ್ರಿಯರು, ಅಳಿಯಂದಿರು, ಸಂಬಂಧಿಗಳು, ಬೀಗರಾದ ಜಗದೀಶ ಶೆಟ್ಟರ್ ದಂಪತಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ, ವಿ.ಸೋಮಣ್ಣ, ಸಂಸದರು ಸೇರಿದಂತೆ ಆಪ್ತರು ಹಾಜರಿದ್ದರು,
ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಪರೀಕ್ಷೆಗೆ ಒಳಗಾಗಿದ್ದ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಅನಂತರ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೆಪ್ಟೆಂಬರ್ 23ರಂದು ರಾತ್ರಿ ಅವರು ಕೊನೆಯುಸಿರೆಳೆದರು.
ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ-ಸೋಮವ್ವ ದಂಪತಿಯ ಪುತ್ರನಾಗಿ 1955ರ ಜೂನ್ 1ರಂದು ಜನಿಸಿದ್ದವರು ಈಗ ದೆಹಲಿ ಮಣ್ಣಲ್ಲಿ ಮಣ್ಣಾದರು.