ಬಾಗಲಕೋಟೆ(ಫೆ.03): ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಚರ್ಚೆಯಾಗಿದೆ. 10 ಜನ ಹೊರಗಡೆಯಿಂದ ಬಂದು ಗೆದ್ದ ಶಾಸಕರು, ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಸ್ಥಾನದ ಅವಕಾಶ ಕಲ್ಪಿಸಬೇಕೆಂದು ಸಿಎಂ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲರೂ ಒಂದೇ ಸಲ ಮಂತ್ರಿ ಆಗಬೇಕು ಅಂದರೆ ಸ್ವಲ್ಪ ಕಠಿಣ ಆಗುತ್ತೆ, ಕಾಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅವರಿಗೂ ನ್ಯಾಯ ಸಿಗುತ್ತದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ತೆರಿಗೆ ಸಂಗ್ರಹ ಹಣ ಕಡಿಮೆ ವಿಚಾರದ ಬಗ್ಗೆ ಮಾತನಾಡಿದ ಅವರು,  ನಾವು ಒಂದು ಅಂದಾಜು ಮಾಡಿರುತ್ತೇವೆ. ಮುಂದಿನ 12 ತಿಂಗಳಿಗೆ ಎಷ್ಟು ತೆರಿಗೆ ಬರಬಹುದು. ಈ ಸಂದರ್ಭದಲ್ಲಿ ಒಮ್ಮೆ ಹೆಚ್ಚು, ಒಮ್ಮೆ ಕಡಿಮೆ ಆಗಬಹುದು. ಖಂಡಿತವಾಗಲೂ ನಮ್ಮ ಪಾಲಿನ ಹಣ ಎಷ್ಟು ಬರಬೇಕೊ ಅಷ್ಟು ಬರುತ್ತೆ ಎಂದಿದ್ದಾರೆ.

"