ಬಾಗಲಕೋಟೆ(ಜೂ.03): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿರುತ್ತದೆ. ಅವರೇ ನಮ್ಮ ನಾಯಕರು. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 3 ವರ್ಷಗಳ ಕಾಲ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿರುತ್ತಾರೆ. ಸರ್ಕಾರಕ್ಕೆ ಯಾವುದೇ ಅಭದ್ರತೆ ಕಾಡುವುದಿಲ್ಲ. ನಾನು ವಿವಾದಾತ್ಮಕ ಮನುಷ್ಯನಲ್ಲ. ವಿವಾದ ಮಾಡುವುದಕ್ಕೆ ಇಳಿಯುವ ಮನುಷ್ಯನೂ ಅಲ್ಲ ಎಂದರು.

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

ಪ್ರಧಾನಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ಪ್ಯಾಕೇಜ್‌ ಅನ್ನು ಹಾಗೂ ಒಂದು ವರ್ಷದ ಸಾಧನೆ ಶೂನ್ಯ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್‌ ನೀಡಿದ ಕಾರಜೋಳ, ಬೆಣ್ಣೆಯಲ್ಲಿ ಕೂದಲು ಹುಡುಕುವುದು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯ ಮಾಡಿದಾಗ ಅಭಿನಂದಿಸುವ ಹಾಗೂ ಸ್ಮರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.