ಬಾಗಲಕೋಟೆ [ಸೆ.01]: ಉಪಮುಖ್ಯಮಂತ್ರಿ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರು ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದ ಘಟನೆ ಬಾಗಲಕೋಟೆಯಲ್ಲಿ ನಡೆಯಿತು.

ಉಪಮುಖ್ಯಮಂತ್ರಿಯಾದ ನಂತರ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ನೆರೆ ಸಂತ್ರಸ್ತರ ಪರಿಹಾರ ಕುರಿತು ಸಭೆಗೆ ಆಗಮಿಸಿದ ಗೋವಿಂದ ಕಾರಜೋಳ ಅವರು, ಶಾಸಕ ವೀರಣ್ಣ ಚರಂತಿಮಠ ಅವರನ್ನು ನೋಡಿದ ತಕ್ಷಣ ಕಾಲಿಗೆ ನಮಸ್ಕರಿಸಲು ಮುಂದಾದರು. 

ತಕ್ಷಣವೇ ಅಯ್ಯೋ ಬೇಡ ಎಂದು ಚರಂತಿಮಠ ಅವರು ತಡೆಯಲು ಮುಂದಾದರು. ಆದರೂ ಬಿಡದ ಸಚಿವರು, ‘ಸ್ವಾಮಿಗಳು ತಾವು ನಿಮ್ಮ ಆಶೀರ್ವಾದ ಬೇಕು ನಮಗೆ’ ಎಂದು ಅವರಿಗೆ ನಮಸ್ಕರಿಸಿದರು.