ಕಲಬುರಗಿ(ಫೆ.05):  ಕಲಬುರಗಿ ನಗರದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಚಾಲನೆ ನೀಡಿದ್ದಾರೆ.

ನಗರದ ಪಂಡಿತ್ ರಂಗ ಮಂದಿರದಿಂದ ಆರಂಭವಾದ ಸಮ್ಮೇಳನಾಧ್ಯಕ್ಷ ಎಚ್ ಎಸ್ ವೆಂಕಟೇಶಮೂರ್ತಿ  ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿವೆ. ರಂಗಮಂದಿರದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಲಬರ್ಗಾ ವಿವಿವರೆಗೆ  ನಡೆಯಲಿದೆ. 

ಕನ್ನಡ ಸಾಹಿತ್ಯ ಸಮ್ಮೇಳನ ಲಿಟರರಿ ಫೆಸ್ಟ್‌ ಆಗಬಾರದು: ಎಚ್. ಎಸ್.ವಿ

ಈ ವೇಳೆ ಕಲಬುರಗಿ ಸಂಸದ ಸಂಸದ ಜಾದವ್, ಶಾಸಕರಾದ ಬಸವರಾಜ ಮತ್ತಿಮುಡು, ರಾಜಕುಮಾರ್ ಪಾಟೀಲ್ ತೆಲ್ಕೂರ್ ಹಾಗೂ ಅವಿನಾಶ್ ಜಾಧವ್ ಸೇರಿದಂತೆ ಮತ್ತಿತರು ಗಣ್ಯರು ಭಾಗವಿಸಿದ್ದಾರೆ. ನಗರದಾದ್ಯತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.