ರಾಯಚೂರು(ಫೆ.25): ಮೊದಲು ಇಬ್ರಾಹಿಂರ ಅವರಿಗೆ ಏನು ಬರದಂತೆ ನೋಡಿಕೊಳ್ಳಲಿ. ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಚೀನಾ ಬುರ್ಕಾ ಬ್ಯಾನ್ ಮಾಡಿದಾಗ ಕೋರೋನಾ ಬಂದಿದೆ ಎಂಬ ಇಬ್ರಾಹಿಂ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ  ಭೇಟಿ ನೀಡಿ ನಾಲ್ಕು ನೂತನ ಕೂಠಡಿಗಳನ್ನು ಉದ್ಘಾಟನೆ ಮಾಡಿದ ಉಪಮುಖ್ಯಮಂತ್ರಿ ನಂತರ ಮಾತನಾಡಿದ್ದಾರೆ. ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಐಟಿ ಮತ್ತು ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಯಣ ಅವರು ಉದ್ಘಾಟನೆ ನಡೆಸಿದ್ದಾರೆ. ಈ ಸಂರ್ದಭದಲ್ಲಿ ಸಂಸದರು, ಶಾಸಕರು ಭಾಗಿಯಾಗಿದ್ದರು.

ವಾಟ್ಸಾಪ್ ದೂರು ನೋಡಿ ಪರಿಶೀಲನೆಗೆ ಬಂದ ಸಚಿವರು..!

ಸಿದ್ದರಾಮಯ್ಯ ಹಾಗು ಸಿ.ಎಂ. ಇಬ್ರಾಹಿಂ‌ 30 ಜನ ಬಿಜೆಪಿ ಶಾಸಕರು ರಾಜಿನಾಮೆ ನೀಡುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಎಂ. ಇಬ್ರಾಹಿಂ ಮುಸ್ಲಿಂರ ಬಗ್ಗೆ ರಷ್ಯಾ ಡಿವೈಡ್ ಆಯಿತು. ಚೀನಾ ಬುರ್ಕಾ ಬ್ಯಾನ್ ಮಾಡಿದಾಗ ಕೋರೋನಾ ಬಂದಿದೆ ಎಂದು ಹೇಳಿದ್ದಾರೆ. ಮೊದಲು ಇಬ್ರಾಹಿಂ ಅವರಿಗೆ ಏನೂ ಬರದಂತೆ ನೋಡಿಕೊಳ್ಳಲಿ. ಮೊದಲು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.

ಟ್ರಂಪ್ ಭಾರತಕ್ಕೆ ಬಂದಿದ್ದು ಸ್ವಾಗತಾರ್ಹ. ಅವರು ಬಂದಾಗ ಸ್ವಾಗತ ಕೋರಲು 3000 ಕೋಟಿ ಖರ್ಚು ಮಾಡಿಲ್ಲ ಕೇವಲ 100 ಕೋಟಿ ಖರ್ಚು ಮಾಡಿದ್ದಾರೆ.ಟ್ರಂಪ್ ಬಂದಾಗ ಗೋಡೆ ನಿರ್ಮಿಸಿದ್ದು ಎಲ್ಲವನ್ನು ಬದಲಾಯಿಸಲು ಆಗಿಲ್ಲ. ಟ್ರಂಪ್  ಪಾಕಿಸ್ತಾನದ ಬಗ್ಗೆ ಮಾತನಾಡುತ್ತಿರುವುದು. ಪಾಕಿಸ್ತಾನದಂಥ ಮಗುವನ್ನು ಬಿಡಬಾರದು ಎಂಬಂತೆ ಈ ನೋಡಿದ್ದಾರೆ ಎಂದಿದ್ದಾರೆ.