ಬೆಂಬಲ ನೀಡುವ ಸಲುವಾಗಿ ಹಿರಿಯ ಕಾಂಗ್ರೆಸ್ ಮುಖಂಡನನ್ನು ಭೇಟಿ ಮಾಡಿದ್ದು ನಿಜ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಶಿರಾ (ನ.01): ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಡಿಸಿಎಂ ಅಶ್ವಥ್ ನಾರಾಯಣ್ ವ್ಯಕ್ತಪಡಿಸಿದ್ದಾರೆ.
Add Asianetnews Kannada as a Preferred Source

ಅವರು ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಎಲ್ಲಾ ಜಾತಿಗೂ ಪ್ರಾಮುಖ್ಯತೆ ಕೊಡುವ ಪಕ್ಷ ಏನಾದರೂ ಇದ್ದರೆ ಅದು ಬಿಜೆಪಿ ಎಂದರು.
ಆಂಧ್ರ ಪ್ರದೇಶ ಕಾಂಗ್ರೆಸ್ ನಾಯಕ ರಘುವೀರ ರೆಡ್ಡಿಯನ್ನು ಭೇಟಿ ಮಾಡಿದ್ದು ನಿಜ ಎಂದ ಅವರು ರಘುವೀರರೆಡ್ಡಿ ಯಾದವ ಸಮುದಾಯದ ಮುಖಂಡರು. ಹಾಗಾಗಿ ಅವರ ಬೆಂಬಲ ಕೋರಿದ್ದಾಗಿ ತಿಳಿಸಿದರು.
ಶಿರಾ ಉಪ ಚುನಾವಣೆ : ಬಿಜೆಪಿಗೆ ಗೆಲುವು ಖಚಿತವೆನ್ನೋ ಭವಿಷ್ಯ .
ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಹಾಗಾಗಿ ರಘುವೀರ ರೆಡ್ಡಿ ಬೆಂಬಲ ನಮಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು. ಕಾಂಗ್ರೆಸ್ ಅಥವಾ ಜೆಡಿಎಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಅವರ ಮತ ಕೇಳಲು ಮುಖ ಇಲ್ಲ ಎಂದರು.
