ಕೊರೋನಾತಂಕ: ಫಲಿತಾಂಶ ಬರೋವರೆಗೆ ಕ್ವಾರಂಟೈನ್‌ ಕಡ್ಡಾಯ

ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಪಾಟೀಲ| ವಾಣಿಜ್ಯ, ವ್ಯಾಪಾರಕ್ಕಾಗಿ ಬರುವವರು ಕಡ್ಡಾಯವಾಗಿ ಸೇವಾಸಿಂಧುದಲ್ಲಿ ನೋಂದಣಿ| ಎರಡು ದಿನಕ್ಕಿಂತ ಹೆಚ್ಚಿನ ದಿನಗಳಿಗೆ ಇಲ್ಲಿ ವಾಸ್ತವ್ಯ ಮಾಡಿದಲ್ಲಿ ಕೋವಿಡ್‌-19 ವೈದ್ಯಕೀಯ ಪರೀಕ್ಷೆ ಹಾಗೂ ಸ್ವಯಂ ಕ್ವಾರಂಟೈನ್‌ ಆಗಬೇಕು|

DC Y S Patil Says Quarantine is mandatory until the Coronavirus Report come

ವಿಜಯಪುರ(ಜೂ.10): ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಜನರ ಅವಶ್ಯಕತೆ ಸಂದರ್ಭದಲ್ಲಿ ಕಳುಹಿಸಲಾದ ಗಂಟಲು ದ್ರವ ಪರೀಕ್ಷಾ ವರದಿ ಫಲಿತಾಂಶ ಬರುವವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದ್ದಾರೆ.

ಕೋವಿಡ್‌-19 ನಿಯಂತ್ರಣ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾ ಕಾರ್ಯಪಡೆ ಸಮಿತಿ ಮತ್ತು ನಿಗದಿತ ವೈದ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಕೋವಿಡ್‌-19 ಪಾಸಿಟಿವ್‌ ರೋಗಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಅಗತ್ಯಬಿದ್ದಾಗ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೊಳಿಸಬೇಕು. ಪರಿಷ್ಕೃತ ನಿಯಮಾವಳಿಗಳನ್ವಯ ಹೋಂ ಕ್ವಾರಂಟೈನ್‌ ಮಾಡಬೇಕು. ಆಯಾ ಗ್ರಾಮ ಮಟ್ಟದ ಸಮಿತಿಗಳು ಹೋಂ ಕ್ವಾರಂಟೈನ್‌ ಮಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ತಿಳಿಸಿದರು.

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

ಎಲ್ಲ ಸಾಂಸ್ಥಿಕ ಕ್ವಾರಂಟೈನ್‌ ಮಾಡುವ ಸಂದರ್ಭದಲ್ಲಿ ಸೂಕ್ತ ಪರಿಶೀಲನೆ ಮಾಡಿ ಕ್ವಾರಂಟೈನ್‌ ಮಾಡಬೇಕು. ಅನವಶ್ಯಕವಾಗಿ ಗಂಟಲು ದ್ರವ ಮಾದರಿ ಪಡೆಯದಂತೆ ತಿಳಿಸಿರುವ ಅವರು, ಕೋವಿಡ್‌ ಪಾಸಿಟಿವ್‌ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಲಕ್ಷಣವಿಲ್ಲದ ಸಂದರ್ಭದಲ್ಲಿ ನಿಯಮಾವಳಿಯಂತೆ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಮಹಾರಾಷ್ಟ್ರದಿಂದ ಮರಳಿರುವ ನಾಗರಿಕರಲ್ಲಿ ಕೋವಿಡ್‌-19 ಲಕ್ಷಣಗಳು ಕಂಡು ಬಂದಿಲ್ಲದ ಪಕ್ಷದಲ್ಲಿ ವೈದ್ಯಕೀಯ ಪರೀಕ್ಷೆಯ ಅವಶ್ಯಕತೆಯಿಲ್ಲ. ತೀವ್ರ ಉಸಿರಾಟದ ತೊಂದರೆ ಮತ್ತು ಗಂಭೀರ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಕ್ವಾರಂಟೈನ್‌, ಆರೋಗ್ಯ ತಪಾಸಣೆ ಮತ್ತು ಇತರೆ ಕ್ರಮಗಳನ್ನು ಪರಿಷ್ಕೃತ ನಿಯಮಾವಳಿಗಳಂತೆ ಕೈಗೊಳ್ಳಬೇಕು. ಧೂಳಖೇಡ ಚೆಕ್‌ಪೋಸ್ಟ್‌ ಮತ್ತು ರೈಲ್ವೇ ನಿಲ್ದಾಣಗಳಿಗೆ ಮಹಾರಾಷ್ಟ್ರ ಮತ್ತು ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಸಂಪೂರ್ಣ ನಿರ್ವಹಣೆಗೆ ಗಡಿ ಪ್ರವೇಶ ಕೇಂದ್ರಗಳ ಮೂಲಕ ನಿಗದಿಪಡಿಸಿದ ಕ್ರಮ ಕೈಗೊಳ್ಳಬೇಕು. ತರಬೇತುಗೊಂಡ ಕಂಪ್ಯೂಟರ್‌ ಆಪರೇಟರ್‌ಗಳನ್ನು ನಿಯೋಜಿಸಬೇಕು.

ವಾಣಿಜ್ಯ, ವ್ಯಾಪಾರಕ್ಕಾಗಿ ಬರುವವರು ಕಡ್ಡಾಯವಾಗಿ ಸೇವಾಸಿಂಧುದಲ್ಲಿ ನೋಂದಣಿ ಮಾಡಬೇಕು. ಎರಡು ದಿನಕ್ಕಿಂತ ಹೆಚ್ಚಿನ ದಿನಗಳಿಗೆ ಇಲ್ಲಿ ವಾಸ್ತವ್ಯ ಮಾಡಿದಲ್ಲಿ ಕೋವಿಡ್‌-19 ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ದಿನಗಳಿಗೆ ಇಲ್ಲಿ ವಾಸ್ತವ್ಯ ಮಾಡಿದಲ್ಲಿ ಸ್ವಯಂ ಕ್ವಾರಂಟೈನ್‌ ಆಗಬೇಕು. ಇತರೆ ರಾಜ್ಯಗಳ ನಾಗರಿಕರ ತಪಾಸಣೆಯನ್ನು ಹ್ಯಾಂಡ್‌ ಸ್ಟ್ಯಾಂಪಿಂಗ್‌ ಸೇರಿದಂತೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಜಿಲ್ಲಾ ಪ್ರವೇಶ ಕೇಂದ್ರಗಳನ್ನು ನಿಡಗುಂದಿ, ಬಸವನ ಬಾಗೇವಾಡಿ, ತಿಕೋಟಾ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಇಂಡಿಗಳಲ್ಲಿ ಸ್ಥಾಪಿಸಿ ಅವಶ್ಯಕ ಕ್ರಮಕೈಗೊಳ್ಳಲು ಸೂಚಿಸಿದರು.
 

Latest Videos
Follow Us:
Download App:
  • android
  • ios