ವಿಜಯಪುರ(ಮಾ.16): ವಿದೇಶ ಪ್ರವಾಸ ಮುಗಿಸಿ ಬಂದ 40 ಜನರಿಗೆ ಜಿಲ್ಲೆಯ ಶಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ.  ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದು(ಸೋಮವಾರ) 40 ಜನರನ್ನ ವೈದ್ಯರು ತಪಾಸಣೆ ನಡೆಸಿದ್ದಾರೆ.

ಗಾಯಕ ಅರ್ಜುನ್ ಇಟಗಿಗೂ ತಟ್ಟಿದ ಕೊರೋನಾ ಭೀತಿ!

ಸೋಂಕು ಹರಡುವ ಭೀತಿಯಿಂದ ವಿಜಯಪುರ ನಗರದಿಂದ 10 ಕೀ.ಮೀ ದೂರದಲ್ಲಿಯೇ ತಡೆದು ಆರೋಗ್ಯ ತಪಾಸಣೆ ನಡೆಸಲಾಗಿದೆ. ವಿಜಯಪುರ ನಗರದಿಂದ 40 ಜನರ ತಂಡ ಸೌದಿಗೆ ಪ್ರವಾಸಕ್ಕೆಂದು ತೆರಳಿದ್ದಾರೆ.
40 ಜನರ ತಂಡ ಖಾಸಗಿ ಬಸ್‌ನಲ್ಲಿ ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದರು. ಈ ಮಾಹಿತಿ ತಿಳಿದ ಜಿಲ್ಲಾಡಳಿತ ಶಿವಣಗಿ ಗ್ರಾಮದ ಆರೋಗ್ಯ ಕೇಂದ್ರದ ಬಳಿ ತಡೆದು ತಪಾಸಣೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾರಲ್ಲು ಕೊರೋನಾ ಸೋಂಕು ಕಂಡು ಬಂದಿಲ್ಲ. 

'ಮಲ್ಲಿಕಾರ್ಜುನ ಸ್ವಾಮಿಗೂ ಕೊರೋನಾ ಕಾಟ: ಶ್ರೀಶೈಲಕ್ಕೆ ಹೋಗಬೇಡಿ'

28 ದಿನಗಳ ಕಾಲ 40 ಜನರ ಮೇಲೂ ಜಿಲ್ಲಾ ಆರೋಗ್ಯ ಇಲಾಖೆ ನಿಗಾ ಇಡಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.