ಬೇಬಿ ಬೆಟ್ಟಪ್ರದೇಶಕ್ಕೆ ಡಿಸಿ ದಿಢೀರ್‌ ಭೇಟಿ: ನಿಷೇಧದ ನಂತರವೂ ನಡೀತಿದ್ಯಾ ಅಕ್ರಮ ಗಣಿಗಾರಿಕೆ..?

ಅಕ್ರಮ ಕಲ್ಲು ಗಣಿಗಾರಿಕೆಯ ಸ್ವರ್ಗ ಎಂದು ಖ್ಯಾತಿಯಾಗಿರುವ ಬೇಬಿ ಬೆಟ್ಟಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿ, ಸ್ಥಳೀಯ ಜನರ ಅಹವಾಲು ಕೇಳಿದರು.

dc visits Baby Hill in Mandya

ಮಂಡ್ಯ(ಜೂ.24): ಅಕ್ರಮ ಕಲ್ಲು ಗಣಿಗಾರಿಕೆಯ ಸ್ವರ್ಗ ಎಂದು ಖ್ಯಾತಿಯಾಗಿರುವ ಬೇಬಿ ಬೆಟ್ಟಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿ, ಸ್ಥಳೀಯ ಜನರ ಅಹವಾಲು ಕೇಳಿದರು.

ಜಿಲ್ಲಾಡಳಿತ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡಿದ್ದರೂ, ಇಂದಿಗೂ ರಾತ್ರಿ- ಹಗಲು ಎನ್ನದೇ ಗಣಿಗಾರಿಕೆ ಅವ್ಯಾಹತವಾಗಿ ಮಾಡುವುದರ ಬಗ್ಗೆ ಸಾಕಷ್ಟುದೂರುಗಳು ಬಂದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ.

IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ: ಪೋಸ್ಟ್‌ ಮಾರ್ಟಂ ಬಳಿಕ ಕುಟಂಬಸ್ಥರಿಗೆ ಹಸ್ತಾಂತರ

ಪ್ರಗತಿಪರರು ಹಾಗೂ ರೈತ ಸಂಘದ ನಾಯಕರು ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಪದೇಪದೇ ಕೂಗು ಹಾಕಿದರೂ ಗಣಿ ಮಾಲೀಕರು ಮಾತ್ರ ಕದ್ದು ಮುಚ್ಚಿ ಗಣಿಗಾರಿಕೆ ಮಾಡುತ್ತಲೇ ಇದ್ದಾರೆ. ಕೆಆರ್‌ಎಸ್‌ ಆಣೆಕಟ್ಟೆಗೆ ಕಲ್ಲು ಗಣಿಯಿಂದ ಸಾಕಷ್ಟುಹಾನಿಯಾಗುತ್ತಿದೆ. ಮುಂದೊಂದು ದಿನ ಆಣೆಕಟ್ಟೆಗಣಿಗಾರಿಕೆಯಿಂದ ಒಡೆಯಲೂ ಬಹುದು ಎಂಬ ಎಚ್ಚರಿಕೆ ನೀಡಿದರೂ ಯಾವುದಕ್ಕೂ ಜಗ್ಗದ ಗಣಿ ಮಾಲೀಕರು ಕದ್ದು ಮುಚ್ಚಿ ದಂಧೆ ಮಾಡುತ್ತಿದ್ದಾರೆಂಬ ಆರೋಪ ರೈತ ನಾಯಕರದ್ದಾಗಿದೆ.

ಜಿಲ್ಲೆಯ ಪ್ರಗತಿಪರರು ಹಾಗೂ ರೈತ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭಗಳಲ್ಲಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವ ಒತ್ತಾಯದ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಇಂದಿನ ಭೇಟಿ ಬಹಳ ಮಹತ್ವದ್ದಾಗಿದೆ.

ಜಿಲ್ಲಾಧಿಕಾರಿಗಳು ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಸ್ಥಳೀಯ ಜನರು ಅಕ್ರಮ ಕಲ್ಲು ಗಣಿಗಳ ಬಗ್ಗೆ ದೂರಿನ ಮಾಹಾಪೂರ ಹರಿಸಿದರು. ಸಾರ್‌ ಅಧಿಕಾರಿಗಳು ಬಂದಾಗ ಎಲ್ಲವೂ ನಿಂತು ಹೋಗುತ್ತದೆ. ಅಧಿಕಾರಿಗಳು ಹೋದ ನಂತರ ಮತ್ತೆ ನಿರಂತರವಾಗಿ ಕಲ್ಲು ಬ್ಲಾಸ್ಟ್‌ ಮಾಡಿ ಗಣಿಗಾರಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ಇಲ್ಲಿ ಭಯ ಭೀತರಾಗಿ ಬದುಕುವ ಸ್ಥಿತಿ ಬಂದಿದೆ. ಜಿಲ್ಲಾಡಳಿತವು ನಿಷೇಧ ಹೇರಿದ್ದರೂ ಯಾಕೆ ಮತ್ತೆ ಮತ್ತೆ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ತಡೆಯುವ ಶಕ್ತಿ ಯಾರಿಗೂ ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ಕೊರೋನಾ ಸಮರ: ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಗೌರವಿಸಿದ ವಿಶ್ವಸಂಸ್ಥೆ!

ಜನರ ಪ್ರಶ್ನೆಗಳ ಸುರಿ ಮಳೆಗೆ ಉತ್ತರಿಸಿದ ಡಿಸಿ ಡಾ ವೆಂಕಟೇಶ್‌, ಬೇಬಿ ಬೆಟ್ಟದಲ್ಲಿ ಯಾವುದೂ ಅಕ್ರಮವಾಗಿ ನಡೆಯುತ್ತಿಲ್ಲ. ಅಧಿಕಾರಿಗಳ ತಂಡ ನಿಗಾ ಇಟ್ಟಿದೆ. ಸಿ ಫಾರಂ ಇರುವ ಕೆಲವರು ಮಾತ್ರ ಗಣಿ ಮಾಡುತ್ತಿದ್ದಾರೆಂದು ಭಾವಿಸುತ್ತೇನೆ. ಎಲ್ಲವನ್ನೂ ಪರಿಶೀಲನೆ ಮಾಡಿ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಗಣಿ ಭೂವಿಜ್ಞಾನ ಅಧಿಕಾರಿ ಪುಷ್ಪಲತಾ ಕುಮಾರ್‌, ತಹಸೀಲ್ದಾರ್‌ ಪ್ರಮೋದ್‌ ಎಸ್‌. ಪಾಟೀಲ್‌ ಸೇರಿದಂತೆ ಅಧಿಕಾರಿಗಳ ತಂಡ ಜೊತೆಯಲ್ಲಿತ್ತು.

Latest Videos
Follow Us:
Download App:
  • android
  • ios