ಮದ್ದೂರು (ಡಿ.11):  ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತಹ ಯೋಗ್ಯರನ್ನು ಆಯ್ಕೆ ಮಾಡಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ತಾಲೂಕಿನ ಮಾಚಹಳ್ಳಿ ಗೇಟ್‌ ಸಮೀಪದ ಅರ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಜನಪ್ರತಿನಿಧಿಗಳಿಗೆ ಇರುವ ಅಧಿಕಾರ ಲೋಕಸಭಾ ಸದಸ್ಯರು ಮತ್ತು ಶಾಸಕರಿಗೆ ಇಲ್ಲವಾಗಿದೆ. ಈ ಎಲ್ಲ ಜನಪ್ರತಿನಿಧಿಗಳಿಗಿಂತ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಿದೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತಹ ವ್ಯಕ್ತಿಗಳನ್ನು ಮತದಾರರ ಚುನಾವಣೆಯಲ್ಲಿ ಬೆಂಲಿಸಬೇಕು ಎಂದು ಮನವಿ ಮಾಡಿದರು.

ಡಿಕೆಶಿ, ಎಚ್ಡಿಕೆ ಕುತಂತ್ರದಿಂದಾಗಿ ಸರ್ಕಾರ ಕೆಡವಲು ನೆರವಾದೆ: ಯೋಗೇಶ್ವರ್‌

ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಮನೆ ಹಣವನ್ನು ಹಾಕಿ ಗೆಲ್ಲಿಸಿಕೊಂಡು ಬಂದ ವ್ಯಕ್ತಿಗಳು ಇಂದು ಹಣದಾಸೆಗಾಗಿ ಬೇರೆ ಪಕ್ಷಕ್ಕೆ ಹೋಗಿ ಪಕ್ಷದ್ರೋಹ ಮಾಡಿ ಹೊರಹೋಗಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಕಿಡಿಕಾಡಿದರು.

ಕೆಲವರು ಹಣಕ್ಕಾಗಿ ತಮ್ಮತನವನ್ನು ಮಾರಿಕೊಂಡು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಇಂತಹ ವ್ಯಕ್ತಿಗಳಿಗೆ ಕಳೆದ ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ನನ್ನ ಮನೆಯ ದುಡ್ಡು ಹಾಕಿ ಅವರನ್ನು ಗೆಲ್ಲಿಸಿಕೊಂಡು ಬಂದೆ. ಸರ್ಕಾರ ಕ್ಷೇತ್ರ ಅಭಿವೃದ್ಧಿಗೆ ನೀಡಿದ ಅನುದಾನವನ್ನು ಹಣಕ್ಕಾಗಿ ಮಾರಿಕೊಂಡಿದ್ದಾರೆ. ಇಂತಹವರಿಗೆ ಮತದಾರರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಜಿಪಂ ಸದಸ್ಯೆ ಸುಚಿತ್ರ ಮನುಕುಮಾರ್‌ರನ್ನು ಗುರಿಯಾಗಿಟ್ಟುಕೊಂಡು ಶಾಸಕ ತಮ್ಮಣ್ಣ ತರಾಟೆಗೆ ತೆಗೆದುಕೊಂಡರು.