ಗಂಗಾವತಿ(ಏ.30): ಕನಕಗಿರಿ ತಾಲೂಕಿನ ಆದಾಪುರ ಗ್ರಾಮದ ಮೃತ ವ್ಯಕ್ತಿಯ ಕೋವಿಡ್‌-19 ವರದಿಯೂ ನೆಗೆಟಿವ್‌ ಬಂದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಮೂರು ದಿನಗಳಿಂದ ಕೆಮ್ಮು, ದಮ್ಮಿನಿಂದ ಬಳಲುತ್ತಿದ್ದ ಕನಕಗಿರಿ ತಾಲೂಕಿನ ಆದಾಪುರ ಗ್ರಾಮದ ವ್ಯಕ್ತಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬುಧ​ವಾರ ಮೃತಪಟ್ಟಿದ್ದ. ಇವರು ಮೂರು ದಿನಗಳಿಂದ ಕೆಮ್ಮು, ದಮ್ಮಿನಿಂದ ಬಳಲುತ್ತಿದ್ದ, ಚಿಕಿತ್ಸೆಗಾಗಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್‌ ಶಂಕಿತ ಎಂದು ಅಂದಾಜಿಸಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಗುಣಮುಖವಾಗದೆ ಬುಧವಾರ ಮೃತಪಟ್ಟಿದ್ದಾನೆ.

ಕೋವಿಡ್‌ ಶಂಕೆ ಇರುವುದರಿಂದ ಮೃತ ವ್ಯಕ್ತಿಯ ಗಂಟಲು ದ್ರವ ಲ್ಯಾಬಿಗೆ ಕಳಿಸಲಾಗಿತ್ತು. ಹೀಗಾ​ಗಿ, ಶವ​ವ​ನ್ನು ಆದಾಪುರ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳೇ ತೆಗೆ​ದು​ಕೊಂಡು ಹೋಗಿ ಸಂಸ್ಕಾರ ಮಾಡಿರುವುದಾಗಿ ನವಲಿ ಆರೋಗ್ಯ ಇಲಾಖೆಯ ವೈದ್ಯಾದಿಕಾರಿ ಡಾ. ರಾಘವೇಂದ್ರ ತಿಳಿಸಿದ್ದಾರೆ.

ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್‌ ನೋಟ್‌ ಬಿದ್ರೂ ಮುಟ್ಟದ ಜನ..!

ಸಾರಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಗಂಟಲ ದ್ರವ ಲ್ಯಾಬ್‌ಗೆ ಕಳಿಸಬೇಕಾಗಿರುವುದರಿಂದ ಕಳಿಸಲಾಗಿದೆ. ವರದಿ ನೆಗೆಟಿವ್‌ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ತಿಳಿಸಿದ್ದಾರೆ.

ವರದಿ ನೆಗೆಟಿವ್‌: 

ಆತ ಶಂಕಿತ ಎಂದು ಆಸ್ಪತ್ರೆಗೆ ದಾಖಲಾದ ವೇಳೆಯಲ್ಲಿಯೂ ಯಾವುದೇ ಆತಂಕ ಇರಲಿಲ್ಲ. ಆದರೆ, ಆತ ಮೃತನಾದ ಬಳಿಕ ಆರೋಗ್ಯ ಇಲಾಖೆಯಿಂದಲೇ ಅಂತ್ಯಸಂಸ್ಕಾರ ಮಾಡಿದ್ದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ವರದಿ ಈಗ ನೆಗಟೀವ್‌ ಬಂದಿರುವುದರಿಂದ ಎಲ್ಲ ಆತಂಕವೂ ದೂರವಾದಂತಾಗಿದೆ.