Asianet Suvarna News Asianet Suvarna News

ರದ್ದು ಮಾಡಿದ್ದು ಮೈಸೂರು ಡೀಸಿ ರೋಹಿಣಿ : JDS ನಾಯಕನ ಆರೋಪ

ಇದರ ಹಿಂದಿನ ಕಾರಣ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಚುನಾವಣಾ ಆಯೋಗ ಎಂದು ಗಂಭೀರ ಆರೋಪ ಮಾಡಿದ್ದಾರೆ ಜೆಡಿಎಸ್ ಮುಖಂಡ. ಅಲ್ಲದೇ ಸಾ ರಾ ಮಹೇಶ್ ಆಗಲಿ ನಾನಾಗಲಿ ಇದರ ಹಿಂದೆ ಇಲ್ಲ ಎಂದು ಮಿರ್ಲೆ ಜಿಲ್ಲಾ ಪಂಚಾಯತ್ ಕ್ಷೇತ್ರ ರದ್ದತಿ ವಿಚಾರವಾಗಿ ಹೇಳಿದ್ದಾರೆ. 

DC Rohini sindhuri   behind mirle ZP constituency Cancelation says JDS Leader snr
Author
Bengaluru, First Published Apr 19, 2021, 10:17 AM IST

ಭೇರ್ಯ (ಏ.19):  ಮಿರ್ಲೆ ಜಿಪಂ ಕ್ಷೇತ್ರ ಕಿತ್ತುಹಾಕಲು ನಾನಾಗಲಿ ಅಥವಾ ಶಾಸಕ ಸಾ.ರಾ. ಮಹೇಶ್‌ ಅವರಾಗಲಿ ಕಾರಣರಲ್ಲ, ರಾಜ್ಯ ಚುನಾವಣಾ ಆಯೋಗ ಮತ್ತು ಮೈಸೂರು ಜಿಲ್ಲಾಧಿಕಾರಿ ಕಾರಣರು ಎಂದು ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ ಸ್ಪಷ್ಟಪಡಿಸಿದರು.

ಮಿರ್ಲೆಯಲ್ಲಿ ಗ್ರಾಮದ ಮುಖಂಡರೊಂದಿಗೆ ಗ್ರಾಮದೇವತೆ ಹುಣಸಮ್ಮ ದೇವಸ್ಥಾನದ ಆವರಣದಲ್ಲಿ ಆಣೆ ಪ್ರಮಾಣ ಮಾಡಲು ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನನ್ನ ಎದುರಿಸೋಕೆ ಯಾರಿಗೂ ಆಗಲ್ಲ : ಸಾ ರಾ ಗರಂ

ಪ್ರಸ್ತುತ ನಮ್ಮ ನಾಯಕ ಶಾಸಕ ಸಾ.ರಾ. ಮಹೇಶ್‌ ಅವರು ಮಿರ್ಲೆ ಹಾಗೂ ಸಾಲಿಗ್ರಾಮ ಎರಡು ಕಣ್ಣುಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ಆದರೆ ಕ್ಷೇತ್ರ ಪುನರ್‌ ವಿಂಗಡಣೆ ನೆಪ ಮಾಡಿಕೊಂಡ ಕೆಲವರು ಶಾಸಕ ಸಾ.ರಾ. ಮಹೇಶ್‌ ಅವರಿಗೆ ಅಪಮಾನ ಮಾಡಿದ್ದಾರೆ. ಅನ್ಯಾಯ ಮಾಡಿದ್ದು ಯಾರು ಎಂದು ತಿಳಿದುಕೊಳ್ಳುವಷ್ಟುಚಿಂತಿಸದೇ ಯಾರೋದೊ ಮಾತನ್ನು ನಂಬಿ ಶಾಸಕರು ಹಾಗೂ ಮಿರ್ಲೆ ಗ್ರಾಮದ ನಾನು ಕಾರಣರು ಎಂದು ಪ್ರತಿಭಟನೆ ದಿನದಂದು ಕೆಲವರು ಆರೋಪ ಮಾಡಿದ್ದಾರೆ. ಆ ಆರೋಪಕ್ಕಾಗಿ ನಾನು ನಮ್ಮ ಗ್ರಾಮದ ಮುಖಂಡರೊಂದಿಗೆ ಹುಣಸಮ್ಮ ದೇವಸ್ಥಾನಕ್ಕೆ ಆಗಮಿಸಿದ್ದು, ಆರೋಪ ಮಾಡಿದವರು ಬರಲೇ ಇಲ್ಲ. ಆರೋಪ ಮಾಡಿರುವ ಮೈಮುಲ್‌ ನಿರ್ದೇಶಕ ಎ.ಟಿ. ಸೋಮಶೇಖರ್‌ ಅವರು ಮಿರ್ಲೆ ಗ್ರಾಮದ ಜನರ ಬಳಿ ಕ್ಷಮೆ ಕೇಳಿಲಿ ಎಂದರು.

ಶಾಸಕ ಸಾ.ರಾ.ಮಹೇಶ್‌ ಅವರು ಮಿರ್ಲೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟುದುಡಿದಿದ್ದಾರೆ, ಮಿರ್ಲೆ ಗ್ರಾಮದ ಜನರ ಬಗ್ಗೆ ಅಪಾರವಾದ ಪ್ರೀತಿ ವಿಶ್ವಾಸ, ನಂಬಿಕೆ ಇದೆ, ಜನರು ಯಾವುದೇ ಗಾಳಿ ಮಾತಿಗೆ ಬೆಲೆ ಕೊಡದೇ ಶಾಸಕರ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.

Follow Us:
Download App:
  • android
  • ios