ಕ್ಷಯರೋಗಿಗಳ ಮಾಹಿತಿ ನೀಡಿದವರಿಗೆ 500 ಪೋತ್ಸಾಹ ಧನ

ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು ಈ ಲಕ್ಷಣಗಳನ್ನು ಹೊಂದಿದ ವ್ಯಕ್ತಿಯನ್ನು ಗುರುತಿಸಿ ಸಮೀಪದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕಫ ಪರೀಕ್ಷೆಗೆ ಒಳಪಡಿಸಲಾ​ಗು​ವು​ದು: ಡಿಸಿ ಪಿ.ಸುನೀಲ್‌ ಕುಮಾರ್‌

DC P Sunil Kumar Talks Over Tuberculosis in Koppal district

ಕೊಪ್ಪಳ(ಜೂ.10): ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು, ಕ್ಷಯರೋಗ ಇರುವಂತಹ ರೋಗಿಗಳನ್ನು ಕರೆತರುವ ಹಾಗೂ ರೋಗಿಗಳ ಮಾಹಿತಿ ನೀಡುವ ಸಾರ್ವಜನಿಕರಿಗೆ 500 ಪೋ›ತ್ಸಾಹ ಧನ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

ಪ್ರಸಕ್ತ ಸಾಲಿನಲ್ಲಿ ಕ್ಷಯರೋಗವನ್ನು ಪತ್ತೆ ಮಾಡಲು, ಸಂಶಯಾಸ್ಪದ ರೋಗಿಗಳನ್ನು ಕರೆ ತರುವ, ಮಾಹಿತಿ ನೀಡುವ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು, ಖಾಸಗಿ ವೈದ್ಯರು, ಪ್ರಯೋಗಾಲಯಗಳು, ಇತರೆ ವ್ಯಕ್ತಿಗಳು ಕರೆ ತಂದಿರುವ ರೋಗಿಗಳಲ್ಲಿ ಕ್ಷಯ ದೃಢಪಟ್ಟಲ್ಲಿ ಪೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅದರಂತೆ ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು ಈ ಲಕ್ಷಣಗಳನ್ನು ಹೊಂದಿದ ವ್ಯಕ್ತಿಯನ್ನು ಗುರುತಿಸಿ ಸಮೀಪದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕಫ ಪರೀಕ್ಷೆಗೆ ಒಳಪಡಿಸಲಾ​ಗು​ವು​ದು. 

ಗಂಗಾವತಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಅಮೃತ್‌ ಯೋಜನೆ ಕಾಮಗಾರಿ ಕಳಪೆ

ಕ್ಷಯರೋಗ ದೃಢಪಟ್ಟಲ್ಲಿ ನಂತರ ಮಾಹಿತಿ ನೀಡಿದ ಮಾಹಿತಿದಾರರಿಗೆ ಪ್ರತಿ ರೋಗಿಗೆ 500ರಂತೆ ಪ್ರೋತ್ಸಾಹ ಧನವನ್ನು ನೀಡಲು ಸರಕಾರ ಸೂಚಿಸಿದೆ. ಯಾವುದೇ ವ್ಯಕ್ತಿಯು ತಾವೇ ಸ್ವಯಂ ಆರೋಗ್ಯ ಕೇಂದ್ರಗಳಲ್ಲಿ ಕಫ ಪರೀಕ್ಷೆಯಲ್ಲಿ ಕ್ಷಯರೋಗ ದೃಢಪಟ್ಟಲ್ಲಿ ಆ ವ್ಯಕ್ತಿಯನ್ನು ಮಾಹಿತಿದಾರ ಎಂದು ಪರಿಗಣಿಸಿ ಆಧಾರ ಲಿಂಕ್‌ ಹೊಂದಿದ ಬ್ಯಾಂಕ್‌ ಖಾತೆಗೆ ನೇರವಾಗಿ ಪೋತ್ಸಾಹ ಧನ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios