Mysuru : ಹನುಮ ಜಯಂತಿ ಶಾಂತಿಯುತವಾಗಿ ಆಚರಿಸಲು ಅಗತ್ಯಕ್ರಮ

ಡಿ. 7ರಂದು ಆಯೋಜನೆಗೊಂಡಿರುವ ಹನುಮ ಜಯಂತಿ ಶೋಭಾಯಾತ್ರೆಯ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪಟ್ಟಣದಲ್ಲಿ ಶೋಭಾಯಾತ್ರೆ ಸಾಗಲಿರುವ ರಸ್ತೆಗಳ ಪರಿಶೀಲಿಸಿದರು.

DC order To Take Safty Measures For Hanuma jayanthi snr

 ಹುಣಸೂರು (ಡಿ.06):  ಡಿ. 7ರಂದು ಆಯೋಜನೆಗೊಂಡಿರುವ ಹನುಮ ಜಯಂತಿ ಶೋಭಾಯಾತ್ರೆಯ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪಟ್ಟಣದಲ್ಲಿ ಶೋಭಾಯಾತ್ರೆ ಸಾಗಲಿರುವ ರಸ್ತೆಗಳ ಪರಿಶೀಲಿಸಿದರು.

ಎಸ್ಪಿ ಆರ್‌. ಚೇತನ್‌ ಅವರ ಜೊತೆಗೂಡಿ ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಆರಂಭಗೊಂಡು ಮೆರವಣಿಗೆ ಸಾಗುವ ಎಲ್ಲ ರಸ್ತೆಗಳಲ್ಲಿ (Road)  ಸಂಚರಿಸಿ ಶೋಭಾಯಾತ್ರೆ ದಿನ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಡಿವೈಎಸ್‌ಪಿ (DYSP)   ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಹನುಮ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ನಡೆಯುವಂತಾಗಲು ಎಲ್ಲ ಸಮುದಾಯಗಳೊಂದಿಗೆ ಸೇತುವೆಯಾಗಿ ಜಿಲ್ಲಾಡಳಿತ ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲಾಡಳಿತ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಎರಡೂ ಸಮುದಾಯದವರೂ ಜಯಂತಿ ಆಚರಣೆಯನ್ನು ಶಾಂತಿ ಸೌಹಾರ್ದತೆಗೆ ಭಂಗ ಉಂಟಾಗದಂತೆ ನಡಸಿಕೊಡುವುದಾಗಿ ತಿಳಿಸಿದ್ದಾರೆ.

ಜಯಂತಿ ದಿನ ಅನಗತ್ಯವಾಗಿ ಓಡಾಡುವುದನ್ನು ನಿಷೇಧಿಸಿದೆ. ಸಂಚಾರ  ದಟ್ಟಣದ (Traffic)  ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಪಟ್ಟಣ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ಅಂದು ರಜೆ ಘೋಷಿಸಲಾಗುವುದು. ಜೆಎಲ್‌ಬಿ ಮತ್ತು ಬಜಾರ್‌ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಿದೆ. ಕೋವಿಡ್‌ ನಂತರ ಪ್ರಥಮವಾಗಿ ವಿಜೃಂಭಣೆಯಿಂದ ಆಚರಿಸುತ್ತಿರುವ ಸಂದರ್ಭ ಇದಾಗಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲರೂ ಸಹಕರಿಸಬೇಕೆಂದರು.

25 ಮಂದಿಯನ್ನು ಗುರುತಿಸಲಾಗಿದೆ- ಎಸ್‌ಪಿ ಚೇತನ್‌ ಮಾತನಾಡಿ, ಶೋಭಾಯಾತ್ರೆಯ ದಿನ 8 ಕೆಎಸ್‌ಆರ್‌ಪಿ ತುಕುಡಿ, 90 ಡಿಎಆರ್‌ ತುಕುಡಿ ಸೇರಿದಂತೆ ಒಟ್ಟು 1,700ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ತವ್ಯ ನಿರ್ವಹಿಸಲಿದ್ದಾರೆ. ಹುಣಸೂರು ತಾಲೂಕು ಸುತ್ತ ಒಟ್ಟು 6 ಚೆಕ್‌ಪೋಸ್ಟ್‌ಗಳು ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ 2 ಚೆಕ್‌ಪೋಸ್ಟ್‌ ಸ್ಥಾಪಿಸಿದೆ. ಪಟ್ಟಣಾದ್ಯಂತ ನಗರಸಭೆ ವತಿಯಿಂದ 75 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ಸಿಸಿ ಟಿವಿಗಳ ಮಾನೀಟರ್‌ನ್ನು ಪೊಲೀಸ್‌ ಕಚೇರಿಲ್ಲಿಟ್ಟು ಗಮನಿಸಲಾಗುತ್ತದೆ. ಶೋಭಾಯಾತ್ರೆಗೆ ಬೇರೆ ಕಡೆಗಳಿಂದ ಹನುಮಭಕ್ತರು ಬರುತ್ತಿರುವುದರಿಂದ ಈಗಾಗಲೇ ಸನ್ನಡತೆಯನ್ನು ಹೊಂದಿರದ 25 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಅವರ ಚಲನವಲನಗಳ ಕುರಿತು ಗಮನಿಸಲಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮದ್ಯಮಾರಾಟವನ್ನು ತಾಲೂಕಿನಾದ್ಯಂತ ನಿಷೇಧಿಸಲು ನಿರ್ಧರಿಸಲಾಗಿದೆ. ಆಯೋಜಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದಾದ ವಾಹನಗಳ ಸಂಖ್ಯೆಯನ್ನು ತಿಳಿಸಲಿದ್ದು, ಅದನ್ನು ಹೊರತುಪಡಿಸಿ ಬೇರೆ ವಾಹನಗಳನು ಬಳಸುವಂತಿಲ್ಲ. ಧ್ವನಿವರ್ಧಕಗಳ ಬಳಕೆ ನ್ಯಾಯಾಲಯದ ಆದೇಶದಂತೆ ಪಾಲನೆ ಮಾಡಲು ಸೂಚಿಸಿದೆ. ಬೆಳಗ್ಗೆ 11ಕ್ಕೆ ಮೆರವಣಿಗೆ ಆರಂಭಗೊಂಡು ಸಂಜೆ 5ರೊಳಗೆ ಅಂತ್ಯಗೊಳಿಸಲು ಸೂಚಿಸಲಾಗಿದೆ ಎಂದರು.

ಹನುಮಾನ್ ಚಾಲೀಸಾ ಓದುವಾಗ ಈ ತಪ್ಪು ಮಾಡ್ಬೇಡಿ :

ಮಧ್ಯದಂದಿ ಓದುವುದು : ಜ್ಯೋತಿಷ್ಯ (Astrology) ನಂಬಿಕೆಗಳ ಪ್ರಕಾರ,  ಹನುಮಾನ್ ಚಾಲೀಸಾವನ್ನು ಸರಿಯಾದ ರೀತಿಯಲ್ಲಿ ಓದಿದ್ರೆ ಸಾಕಷ್ಟು ಪ್ರಯೋಜನವಿದೆ. ಕೆಲವರು ಸಮಯವಿಲ್ಲ ಎನ್ನುವ ಕಾರಣಕ್ಕೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಆರಂಭದಿಂದ ಹನುಮಾನ ಚಾಲೀಸಾ ಓದುವ ಬದಲು ಮಧ್ಯದಿಂದ ಪಠಣ ಶುರು ಮಾಡ್ತಾರೆ. ಹೀಗೆ ಮಾಡಿದ್ರೆ ನಿಮಗೆ ಯಾವುದೇ ಫಲ ಸಿಗುವುದಿಲ್ಲ. ಹಾಗೆ ಹನುಮಾನ ಚಾಲೀಸಾ ಓದುವ ವೇಳೆ ಮಧ್ಯ ಎದ್ದು ಹೋಗಬಾರದು.
ಹನುಮಾನ್ ಚಾಲೀಸಾ ಪಠಿಸಿದಾಗ ಎಂದಿಗೂ ಆತುರಪಡಬಾರದು. ಅದರ ಯಾವುದೇ ಪದ್ಯಗಳನ್ನು ತಪ್ಪಾಗಿ ಉಚ್ಚರಿಸಬಾರದು. ಅದನ್ನು ಯಾವಾಗಲೂ ತಾಳ್ಮೆಯಿಂದ ಓದಬೇಕು. ಹಾಗೆ ಪೂರ್ಣವಾಗಿ ಓದಿದ ನಂತ್ರವೇ ಮಾತನಾಡಬೇಕು. 

ವಿವಾಹೇತರ ಸಂಬಂಧ : ವಿವಾಹಿತರಾಗಿದ್ದು, ಹನುಮಾನ ಚಾಲೀಸಾ ಪಠಣೆ ಮಾಡುತ್ತಿದ್ದರೆ ಸಂಗಾತಿಯ ಜೊತೆ ಮಾತ್ರ ಸಂಬಂಧ ಬೆಳೆಸಬೇಕು. ಯಾವುದೇ ಕಾರಣಕ್ಕೂ ಸಂಗಾತಿ ಹೊರತುಪಡಿಸಿ ಬೇರೆಯವರ ಜೊತೆ ಸಂಬಂಧ ಬೆಳೆಸಬಾರದು. ಹೀಗೆ ಮಾಡಿದ್ರೆ ಹನುಮಾನ್ ಚಾಲೀಸಾ ಪಠಣೆಯ ಫಲ ಸಿಗುವುದಿಲ್ಲ.

ಶುದ್ಧ ದೇಹ ಮತ್ತು ಮನಸ್ಸು (Mind) ಮುಖ್ಯ :  ಮನೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ ಶುದ್ಧ ದೇಹ ಮತ್ತು ಮನಸ್ಸು ಹೊಂದಿರಬೇಕು. ಪಠಣೆ ಮಾಡ್ತಾ ಬೇರೆಯವರಿಗೆ ಕಟ್ಟದ್ದು ಬಯಸಬಾರದು. ಕೆಟ್ಟ ಆಲೋಚನೆ (Thought) ಮಾಡಬಾರದು. ಮನಸ್ಸು ಶುದ್ಧವಾಗಿರಬೇಕು. ಹಾಗೆಯೇ ದೇಹ ಕೂಡ ಶುದ್ಧವಾಗಿರಬೇಕು. ದೇವರ ಮನೆಯಲ್ಲಿ  ದೀಪ ಹಚ್ಚಿದ ನಂತ್ರ ಹನುಮಾನ ಚಾಲೀಸಾ ಓದಲು ಶುರು ಮಾಡಬೇಕು. 

ಆಹಾರ, ಚಟದ ಬಗ್ಗೆ ಎಚ್ಚರಿಕೆ : ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದರೆ ತಾಮಸಿಕ ಆಹಾರವನ್ನು ಸೇವನೆ ಮಾಡಬಾರದು. ಹಾಗೆಯೇ  ಮದ್ಯ ಸೇವನೆ ನಿಲ್ಲಿಸಬೇಕು. ನೀವು ತಾಮಸಿಕ ಆಹಾರ ಸೇವನೆ ಮಾಡಿ, ಮದ್ಯಪಾನ ಮಾಡ್ತಿದ್ದರೆ ಹನುಮಂತನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. 

Astrology Tips: ಮಾನಸಿಕ ಆರೋಗ್ಯ ಹಾಳು ಮಾಡುತ್ತೆ ಈ ಗ್ರಹ

ಬಡವರು, ಪ್ರಾಣಿಗಳ ಹಿಂಸೆ ಸಲ್ಲದು : ಮನೆಯ ಸಮೃದ್ಧಿಗಾಗಿ ನೀವು ಹನುಮಾನ್ ಚಾಲೀಸವನ್ನು ಪಠಿಸುತ್ತಿದ್ದರೆ ಯಾವುದೇ ಪ್ರಾಣಿ ಅಥವಾ ಬಡವರಿಗೆ ತೊಂದರೆ ಕೊಡಬೇಡಿ. ಇದ್ರಿಂದ ಸಂತೋಷದ ಬದಲು ದುಃಖ ಹೆಚ್ಚಾಗುತ್ತದೆ. ಮನೆಯ ವಾತಾವರಣ ಕಲುಷಿತಗೊಳ್ಳುತ್ತದೆ.

ASTROLOGY: ಸಹಾನುಭೂತಿಯೇ ಇಲ್ಲದ ರಾಶಿಗಳಿವು!

ಅಪರಾಧದಿಂದ ದೂರವಿರಿ : ಹನುಮಾನ ಚಾಲೀಸಾ ಪಠಿಸುವವರು ಯಾವಾಗ್ಲೂ ಅಪರಾಧ ಮಾಡಬಾರದು. ಸತ್ಯಕ್ಕೆ ಆದ್ಯತೆ ನೀಡ್ಬೇಕು. ಮೋಸ ಮಾಡಬಾರದು. ದುರ್ಬಲರ ಜೊತೆ ಅನಗತ್ಯ ಜಗಳ ಮಾಡಬಾರದು. ಬೇರೆಯವರನ್ನು ನಿಂದಿಸಬಾರದು. ಕೆಟ್ಟ ಪದಗಳ ಬಳಕೆ ಮಾಡಬಾರದು. ಅನಗತ್ಯ ಜಗಳ, ಅಪರಾಧ ಮಾಡುವ ವ್ಯಕ್ತಿಗೆ ಹನುಮಂತ ಒಲಿಯುವುದಿಲ್ಲ. 

Latest Videos
Follow Us:
Download App:
  • android
  • ios