Chitradurga: ಡಿಸಿ ಕಚೇರಿ ನಿರ್ಮಾಣ ಕಾಮಗಾರಿ ಅಕ್ರಮ: ತನಿಖೆಗೆ ಹೋರಾಟಗಾರರ ಒತ್ತಾಯ
ಸರ್ಕಾರದ ಕಾಮಗಾರಿಯಲ್ಲಿ ಗುತ್ತಿಗೆದಾರರು ಅಕ್ರಮ ಎಸಗಿದಾಗ ಅಧಿಕಾರಿಗಳು ತನಿಖೆ ನಡೆಸೋದು ಕಾಮನ್. ಆದ್ರೆ ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮವನ್ನು ತನಿಖೆ ನಡೆಸಿದ ಅಧಿಕಾರಿಗಳೇ, ಈ ಪ್ರಕರಣವನ್ನು ಮುಚ್ಚಿಹಾಕಲು ಸ್ಕೆಚ್ ಹಾಕಿದ್ದಾರಂತೆ..! ಈ ಕುರಿತು ಗಂಭೀರ ಆರೋಪ ಆ ಭಾಗದ ಸ್ಥಳೀಯರಿಂದ ಕೇಳಿ ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.23) : ಸರ್ಕಾರದ ಕಾಮಗಾರಿಯಲ್ಲಿ ಗುತ್ತಿಗೆದಾರರು ಅಕ್ರಮ ಎಸಗಿದಾಗ ಅಧಿಕಾರಿಗಳು ತನಿಖೆ ನಡೆಸೋದು ಕಾಮನ್. ಆದ್ರೆ ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮವನ್ನು ತನಿಖೆ ನಡೆಸಿದ ಅಧಿಕಾರಿಗಳೇ, ಈ ಪ್ರಕರಣವನ್ನು ಮುಚ್ಚಿಹಾಕಲು ಸ್ಕೆಚ್ ಹಾಕಿದ್ದಾರಂತೆ..! ಈ ಕುರಿತು ಗಂಭೀರ ಆರೋಪ ಆ ಭಾಗದ ಸ್ಥಳೀಯರಿಂದ ಕೇಳಿ ಬಂದಿದೆ.
ಐತಿಹಾಸಿಕ ಹಿನ್ನಲೆಯ ಕೋಟೆನಾಡು ಚಿತ್ರದುರ್ಗ(Chitradurga)ದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಟೇಕ್ ಆಫ್ ಆಗ್ತಿಲ್ಲ. ಸಮತಟ್ಟು ಜಾಗದಲ್ಲಿ ಜಿಲ್ಲಾಭವನ ನಿರ್ಮಾಣ ಮಾಡಬೇಕಿದ್ದ ಅಧಿಕಾರಿಗಳು, ಕಣಿವೆಯೊದರಲ್ಲಿ ಡಿಸಿ ಕಚೇರಿ ನಿರ್ಮಾಣ ಮಾಡ್ತಿದ್ದಾರೆ. ಹೀಗಾಗಿ ಆ ಕಣಿವೆಯಲ್ಲಿನ ಗಿರಿಧಾಮ ಸಮತಟ್ಟು ಮಾಡುವಲ್ಲೇ ಕಾಲಹರಣವಾಗ್ತಿದೆ. ಈ ಕಟ್ಟಡ ನಿರ್ಮಾಣದಲ್ಲಿ ಹಳೆಯ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗು ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಗಿರಿಧಾಮದಲ್ಲಿನ ಕೋಟ್ಯಂತರ ಮೌಲ್ಯದ ಮಣ್ಣು, ಕಲ್ಲು ಹಾಗು ಮುರ್ರಾಗೆ ರಾಯಲ್ಟಿ ಕಟ್ಟದೇ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಮಾನ ಆರೋಪ, ರಾಜ್ಯಾಧ್ಯಕ್ಷ ಜೋಷಿ ರಾಜೀನಾಮೆಗೆ ಒತ್ತಾಯ
ನಲವತ್ತು ಎಕರೆಯಲ್ಲಿ ನಿರ್ಮಾಣವಾಗಬೇಕಿದ್ದ ಡಿಸಿ ಕಚೇರಿಗೆ ನೂರು ಎಕರೆಗೂ ಅಧಿಕ ಗಿರಿಧಾಮವನ್ನು ಕೊರೆದು ಅಕ್ರಮ ಗಣಿಗಾರಿಕೆಯನ್ನು ಸಹ ಅಲ್ಲಿ ನಡೆಸಿರೊ ಅಕ್ರಮದ ವಿರುದ್ಧ ಇಂಗಳದಾಳ್ ಗ್ರಾಮಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ನಾಯಕ್(Ingaladal venkatesh nayak) ಉಚ್ಚ ನ್ಯಾಯಾಲಯ(Karnataka highcourt)ದ ಮೆಟ್ಟಿಲೇರಿದ್ದೂ, ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಅಧಿಕಾರಿಗಳು,ಕೋರ್ಟ್ ಗೆ ಸುಳ್ಳು ಮಾಹಿತಿನೀಡಿದ್ದಾರೆಂದು ಹೇಳಲಾಗಿದೆ. ಹಾಗೆಯೇ,ಕೇವಲ ಮೂರು ಲಕ್ಷ ರೂಪಾಯಿ ದಂಡವನ್ನು ಖಾಸಗಿ ಕಂಲನಿ ಹಾಗು ಅಧಿಕಾರಿಗಳಿಗೆ ವಿಧಿಸಿರೋದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಇನ್ನು ಈ ಬಗ್ಗೆ ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು(DC Divyaprabhu) ಅವರ ಗಮನಕ್ಕೆ ತಂದಿರೋ ಹೋರಾಟಗಾರರು ಹಾಗು ವಕೀಲರು ಈ ಪ್ರಕರಣವನ್ನು ಮುಚ್ಚಿಹಾಕದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ತ ಅಧಿಕಾರಿಗಳು ಹಾಗು ಖಾಸಗಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೋರ್ಟ್ ಗೆ ಅಗತ್ಯ ವರದಿ ನೀಡಬೇಕೆಂದು ಆಗ್ರಹಿಸಿದ್ದಾರೆ.
Chitradurga: ಶಾಸಕ ತಿಪ್ಪಾರೆಡ್ಡಿ ವಿರುದ್ದ ಮತ್ತೆ ಗುಡುಗಿದ ಗುತ್ತಿಗೆದಾರ ಮಂಜುನಾಥ್
ಒಟ್ಟಾರೆ ಡಿಸಿ ಕಚೇರಿ ಕಟ್ಟಡ ಕಾಮಗಾರಿಯಲ್ಲೂ ಅಕ್ರಮದ ವಾಸನೆ ನಾರುತ್ತಿದೆ. ಹೀಗಾಗಿ ನೂತನ ಜಿಲ್ಲಾಧಿಕಾರಿಗಳುಸೂಕ್ತ ತನಿಖೆ ನಡೆಸಿ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದಿರೊ ಖದೀಮರ ವಿರುದ್ಧ ಅಗತ್ಯ ಕ್ರಮ ಕೈಗೊಂಡು ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕಿದೆ.