Asianet Suvarna News Asianet Suvarna News

'ಲಾಭ​ದಾ​ಯಕ ಹುದ್ದೆ​ ಹೊಂದಿದವರು​ ಚುನಾ​ವಣೆಗೆ ನಿಲ್ಲು​ವಂತಿ​ಲ್ಲ'

ರಾಜ್ಯ ಚುನಾವಣಾ ಆಯೋಗವು ಲಾಭದಾಯಕ ಹುದ್ದೆಯ ಕುರಿತು ಅಭ್ಯರ್ಥಿ, ಮತದಾರ ಮತ್ತು ಸಾರ್ವಜನಿಕರ ತಿಳಿವಳಿಕೆಗಾಗಿ ಮಾಹಿತಿಯನ್ನು ನೀಡಿದೆ| ಮತದಾರರ, ಸಾರ್ವಜನಿಕರ ತಿಳಿವಳಿಕೆಗಾಗಿ ಜಿಲ್ಲಾಧಿಕಾರಿ ಪಾಟೀಲ್‌ ಮಾಹಿತಿ|

DC Nitesh Patil Talks Over Grama Panchayat Election grg
Author
Bengaluru, First Published Dec 9, 2020, 9:15 AM IST

ಧಾರವಾಡ(ಡಿ.09): ಪ್ರಸ್ತುತ ಜರುಗುತ್ತಿರುವ ಗ್ರಾಮ ಪಂಚಾಯತ್‌ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಬಯಸುವ ಅಭ್ಯರ್ಥಿಯು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು ಎಂಬ ನಿಯಮವಿದೆ ಎಂದು ಜಿಲ್ಲಾ​ಧಿ​ಕಾರಿ ನಿತೇಶ ಪಾಟೀಲ ತಿಳಿ​ಸಿ​ದ್ದಾರೆ.

ಈ ಕುರಿತು ಪತ್ರಿಕಾ ಪ್ರಕ​ಟಣೆ ನೀಡಿ​ರುವ ಅವರು, ರಾಜ್ಯ ಚುನಾವಣಾ ಆಯೋಗವು ಲಾಭದಾಯಕ ಹುದ್ದೆಯ ಕುರಿತು ಅಭ್ಯರ್ಥಿ, ಮತದಾರ ಮತ್ತು ಸಾರ್ವಜನಿಕರ ತಿಳಿವಳಿಕೆಗಾಗಿ ಮಾಹಿತಿಯನ್ನು ನೀಡಿದೆ. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಸಂಸ್ಥೆ ಅಥವಾ ಬೇರೆ ಯಾವುದೇ ಪ್ರಾಧಿಕಾರದಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದರೆ ಅಂತಹ ವ್ಯಕ್ತಿಯು ಗ್ರಾಮ ಪಂಚಾಯಿತಿ ಸದಸ್ಯನಾಗಲು ಅನರ್ಹರು. ಆದರೆ ಸ್ಥಳೀಯ ಸಂಸ್ಥೆಗಳ (ನಗರ ಸ್ಥಳೀಯ ಸಂಸ್ಥೆಗಳ ಅಥವಾ ಪಂಚಾಯತ್‌ ಸಂಸ್ಥೆಗಳ) ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆ ಹೊಂದಿರುವ ವ್ಯಕ್ತಿ ಮೇಲಿನ ಉದ್ದೇಶಕ್ಕೆ ಲಾಭದಾಯಕ ಹುದ್ದೆ ಹೊಂದಿರುವನೆಂದು ಪರಿಗಣಿಸಲಾಗುವುದಿಲ್ಲ.

ಶಿಕ್ಷಣ ಇಲಾಖೆಯಲ್ಲಿ ಪ್ರೇರಕ ಎಂದು ನೇಮಕಾತಿ ಹೊಂದಿ ಗೌರವಧನ ಪಡೆದು ಕೆಲಸ ಮಾಡುತ್ತಿರುವವರು ಲಾಭದಾಯಕ ಹುದ್ದೆ ಅರ್ಥ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಅವರುಗಳು ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ. ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರಾಗಿ ಅಯ್ಕೆಗೊಂಡು ಮಾಸಿಕ ವೇತನ ರು.750 ಗೌರವಧನವನ್ನಾಗಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು.

ಇತ್ತ ಪತ್ನಿ ಗರ್ಭಿಣಿ - ಅತ್ತ ಗಂಡ ಆತ್ಮಹತ್ಯೆಗೆ ಶರಣು

ಬಿಸಿಯೂಟ ಯೋಜನೆಯಡಿ ನೇಮಕಗೊಂಡ ಅಡುಗೆಯವರು, ಆದರೆ, ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು ಸರ್ಕಾರದ ನಿಯಂತ್ರಣಕ್ಕೊಳಪಡುವ ಇತರೆ ಪ್ರಾಧಿಕಾರ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ. ಸಾರ್ವಜನಿಕ ಉದ್ದಿಮೆಗಳು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅವುಗಳ ನೌಕರರು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವವರೆಂದು ಪರಿಗಣಿಸಲಾಗುತ್ತದೆ.

ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಮುನ್ಸಿಪಾಲಿಟಿ, ನಗರಸಭೆ ಮತ್ತು ನಗರ ಪಾಲಿಕೆಗಳು ಸ್ಥಳೀಯ ಸಂಸ್ಥೆಗಳಾಗಿದ್ದು ಅವುಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿವೆ. ಆದುದರಿಂದ ಈ ಸ್ಥಳೀಯ ಸಂಸ್ಥೆ ನೌಕರರು ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ ಎಂದು ಜಿಲ್ಲಾ​ಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.
 

Follow Us:
Download App:
  • android
  • ios