ಇತ್ತ ಪತ್ನಿ ಗರ್ಭಿಣಿ - ಅತ್ತ ಗಂಡ ಆತ್ಮಹತ್ಯೆಗೆ ಶರಣು
ಇತ್ತ ಪತ್ನಿ ಗರ್ಭಿಣಿ ಅತ್ತ ಗಂಡ ನೇಣಿಗೆ ಶರಣು. ಮನನೊಂದ ಗಂಡ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಹುಬ್ಬಳ್ಳಿ (ಡಿ.08): ತಂದೆಯ ಸಾವಿನಿಂದ ಮನನೊಂದು ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೋಹನ ಸಿಂಗ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೂಲತಃ ಪಶ್ಚಿಮ ಬಂಗಾಳದ ಈತ, ಕಳೆದ ಎರಡು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿ ಗೆ ಬಂದಿದ್ದ. ಈತನ ತಂದೆ ಇತ್ತೀಚೆಗೆ ಮೃತಪಟ್ಟಿದ್ದ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. ಈತನ ಪತ್ನಿ ಗರ್ಭಿಣಿ ಇದ್ದು ಈತ ನೇಣಿಗೆ ಶರಣಾಗಿದ್ದಾನೆ.
ತಲೆ ಬುರುಡೆಯಿಲ್ಲದ ವ್ಯಕ್ತಿ ದೇಹ ಪತ್ತೆ : ಪತ್ತೆಯಾಗದ ಗುರುತು
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.