Asianet Suvarna News Asianet Suvarna News

ಕಾರವಾರ: ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸವಿದ ಡಿಸಿ ಗಂಗೂಬಾಯಿ ಮಾನಕರ

ಕ್ಯಾಂಟಿನ್ ನಲ್ಲಿ ಶುಚಿ ಮತ್ತು ರುಚಿಗೆ ಯಾವಾಗಲೂ ಹೆಚ್ಚಿನ ಪ್ರಥಮಾದ್ಯತೆ ನೀಡುವಂತೆ ನಿರ್ದೇಶನ ನೀಡಿ, ಕ್ಯಾಂಟಿನ್ ಉಪಯೋಗಕ್ಕೆ ನೀಡಿರುವ ಫ್ರಿಡ್ಜ್ ಮತ್ತಿತರ ಯಂತ್ರೋಪಕರಣಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಹಾಗೂ ಶುದ್ಧ ಕುಡಿಯುವ ಯಂತ್ರದ ಮೂಲಕ ಗ್ರಾಹಕರಿಗೆ ನೀರು ಒದಗಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
 

DC Gangubai Manakar Has Breakfast at Indira Canteen in Karwar grg
Author
First Published Dec 10, 2023, 8:25 PM IST

ಕಾರವಾರ(ಡಿ.10):  ಇಲ್ಲಿನ ಕೆ.ಇ. ಬಿ. ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಶನಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬೆಳಗಿನ ಉಪಾಹಾರ ಸೇವಿಸಿ, ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಯಾಂಟಿನ್ ನಲ್ಲಿ ಶುಚಿ ಮತ್ತು ರುಚಿಗೆ ಯಾವಾಗಲೂ ಹೆಚ್ಚಿನ ಪ್ರಥಮಾದ್ಯತೆ ನೀಡುವಂತೆ ನಿರ್ದೇಶನ ನೀಡಿ, ಕ್ಯಾಂಟಿನ್ ಉಪಯೋಗಕ್ಕೆ ನೀಡಿರುವ ಫ್ರಿಡ್ಜ್ ಮತ್ತಿತರ ಯಂತ್ರೋಪಕರಣಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಹಾಗೂ ಶುದ್ಧ ಕುಡಿಯುವ ಯಂತ್ರದ ಮೂಲಕ ಗ್ರಾಹಕರಿಗೆ ನೀರು ಒದಗಿಸಬೇಕು ಎಂದು ಸೂಚನೆ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಸರ್ಕಾರ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಇಂದಿರಾ ಕ್ಯಾಂಟಿನ್ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕು. ಕಡಿಮೆ ವೆಚ್ಚದಲ್ಲಿ ಶುಚಿ ಮತ್ತು ರುಚಿಯಾದ ಆಹಾರ ಸೇವನೆ ಮಾಡುವಂತೆ ಹಾಗೂ ಪ್ರತಿ ದಿನದ ಮೆನು ವಿನ ಪ್ರಕಾರವೇ ಆಹಾರ ತಯಾರಿಸಿ, ಗ್ರಾಹಕರಿಗೆ ವಿತರಿಸುವಂತೆ ಕ್ಯಾಂಟಿನ್ ಸಿಬ್ಬಂದಿಗೆ ಹೇಳಿದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿ ದಿನ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯಿದ್ದು, ಉಪಾಹಾರಕ್ಕೆ ₹ 5 ಮತ್ತು ಊಟಕ್ಕೆ ₹10 ದರ ಮಾತ್ರ ನಿಗದಿಪಡಿಸಲಾಗಿದೆ ಎಂದು ಉಪಾಹಾರಕ್ಕೆ ಬಂದಿದ್ದ ಗ್ರಾಹಕರಿಗೆ ಮಾಹಿತಿ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಗಂಗೂಬಾಯಿ ಕ್ಯಾಂಟಿನ್‌ನಲ್ಲಿ ತಯಾರಿಸಿದ್ದ ಮಸಾಲ ರೈಸ್ ಸವಿದು , ರುಚಿಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಕಾರವಾರ ಸಿಎಂಸಿ ಪೌರಾಯುಕ್ತ ಕೆ. ಚಂದ್ರಮೌಳಿ, ಎಇಇ ಸದಾನಂದ ಸಾಲೆಹಿತ್ತಲ ಇದ್ದರು.

Follow Us:
Download App:
  • android
  • ios