ರೈತರಿಗೆ ಉಪಕಾರಿ, ಬೀಜ-ಗೊಬ್ಬರ ಕಂಪನಿಗಳಿಗೆ ವಂಚಿಸಿದ ವ್ಯಾಪಾರಿ
ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಪೂರೈಕೆ ಮಾಡಿದ ವ್ಯಾಪಾರಿ 20 ಕಂಪನಿಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿ ಪರಾರಿ ಆಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ (ಜೂ.06): ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡು ಸಾಲಕ್ಕೆ ಬೀಜ, ಗೊಬ್ಬರ ಕೊಟ್ಟ ಅಂಗಡಿ ಮಾಲೀಕ ಬರೋಬ್ಬರಿ 20 ಕಂಪನಿಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿ ಪರಾರಿ ಆಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು, ಈಗಾಗಲೇ ರಾಜ್ಯದಲ್ಲಿ ಉತ್ತಮವಾಗಿ ಮುಂಗಾರು ಮಳೆ ಸುರಿಯುತ್ತಿದ್ದು, ಕೃಷಿ ಕಾರ್ಯಗಳು ಆರಂಭವಾಗಿವೆ. ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯಗಳನ್ನೂ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಆಗುವಂತೆ ಗ್ರಾಮೀಣ ಮಟ್ಟದಲ್ಲಿ ಬೀಜ ಮತ್ತು ರಸಗೊಬ್ಬರ ಮಾರಾಟ ಮಳಿಗೆಯನ್ನು ಆರಂಭಿಸಿದ ವ್ಯಕ್ತಿಯೊಬ್ಬ ಬರೋಬ್ಬರಿ 20 ಕಂಪನಿಗಳಿಂದ ಸಾಲಕ್ಕೆ ಕೋಟ್ಯಂತರ ರೂ. ಮೌಲ್ಯದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರವನ್ನು ತರಿಸಿಕೊಂಡು ವ್ಯಾಪಾರ ಆರಂಭಿಸಿದ್ದಾನೆ. ರೈತರಿಗೆ ಕಡಿಮೆ ಹಣಕ್ಕೆ ಮತ್ತು ಕೆಲವರಿಗೆ ಸಾಲಕ್ಕೆ ಬೀಜ ಮತ್ತು ಗೊಬ್ಬರಗಳನ್ನು ಮಾರಾಟ ಮಾಡಿದ ವ್ಯಾಪಾರಿ ತನಗೆ ಬಂದ ಅಷ್ಟೋ ಇಷ್ಟೋ ಹಣವನ್ನು ಎತ್ತಿಕೊಂಡು ಪರಾರಿ ಆಗಿದ್ದಾನೆ.
ಸಚಿವ ನಾಗೇಂದ್ರ ರಾಜೀನಾಮೆ ಸುದ್ದಿ ಕೇಳಿ ಖುಷಿಪಟ್ಟ ಮೃತ ಅಧಿಕಾರಿ ಪತ್ನಿ ಕವಿತಾ
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬರೋಬ್ಬರಿ 20ಕ್ಕೂ ಅಧಿಕ ಕಂಪನಿಗಳಿಗೆ ಕೋಟಿಗಟ್ಟಲೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಬಿತ್ತನೆ ಬೀಜ ಬೀಜ, ಗೊಬ್ಬರ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಸುತ್ತಮುತ್ತಲಿನ 20ಕ್ಕೂ ಅಧಿಕ ಬೀಜ, ಗೊಬ್ಬರ ಕಂಪನಿಗಳ ಡೀಲರ್ಸ್ ಗಳು ಪೊಲೀಸರ ಮೊರೆ ಹೋಗಿದ್ದಾರೆ. ವಂಚನೆ ಮಾಡಿದ ವ್ಯಕ್ತಿಯನ್ನು ಹೊರ ರಾಜ್ಯದ ಕುಮಾರಗೌಡ ಎಂದು ಪೊಲೀಸರು ಗುರುತಿಸಿದ್ದಾರೆ.
ಜಗಳೂರು ಪಟ್ಟಣದ ದಾವಣಗೆರೆ ರಸ್ತೆಯಲ್ಲಿ ಆರೋಪಿ ಕುಮಾರಗೌಡ 'ಕಿಸಾನ್ ಆಗ್ರೋ' ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಅಂಗಡಿ ಆರಂಭಿಸಿದ್ದನು. ಈ ಮಳಿಗೆ ಮೂಲಕ ಪಯೋನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ್, ಲಕ್ಷ್ಮೀ ಸೀಡ್ಸ್ , ವಿಎನ್ ಆರ್ ಸೇರಿ 20ಕ್ಕೂ ಹೆಚ್ಚು ಕಂಪನಿಗಳಿಂದ ಸ್ವಲ್ಪ ಅಡ್ವಾನ್ಸ್ ಹಣ ಕೊಟ್ಟು ಕೋಟ್ಯಾಂತರ ರೂಪಾಯಿ ಮೌಲ್ಯದ ಬಿತ್ತನೆ ಬೀಜ ಮತ್ತು ಗೊಬ್ಬರ ಪಡೆದಿದ್ದನು. ಆದರೆ, ಕೆಲವು ದಿನಗಳಿಂದ ಉತ್ತಮವಾಗಿ ವ್ಯಾಪಾರ ಮಾಡುತ್ತಾ ಸ್ಥಳೀಯ ರೈತರಿಗೆ ಹೆಚ್ಚು ಪರಿಚಿತನಾಗಿದ್ದನು.
ರೈತರಿಗೆ ಕಡಿಮೆ ಬೆಲೆಗೆ ಹಾಗೂ ಸಾಲಕ್ಕೆ ಬೀಜ ಮತ್ತು ಗೊಬ್ಬರ ಕೊಟ್ಟು ಉಪಕಾರಿ ಆಗಿದ್ದನು. ಆದರೆ, ಬೀಜ ಗೊಬ್ಬರ ಪೂರೈಕೆ ಮಾಡಿದ ಕಂಪನಿಗಳ ಡೀಲರ್ಸ್‌ಗಳಿಗೆ ವ್ಯಾಪಾರ ಆಗುತ್ತಿಲ್ಲವೆಂದು ಹೇಳಿ ಹಣ ಕೊಡದೇ ಸತಾಯಿಸುತ್ತಿದ್ದನು. ಆದರೆ, ಈಗ ಇದ್ದಕ್ಕಿದ್ದಂತೆ ಅಂಗಡಿ ಹಾಗೂ ಅಳಿದುಳಿದ ದಾಸ್ತಾನು ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಆರೋಪಿ ಕುಮಾರಗೌಡ ಜಗಳೂರು ತಾಲೂಕಿನ ಉದಗಟ್ಟಿ ಗ್ರಾಮದ ರುದ್ರೇಶ ಎಂಬ ರೈತನ ಹೆಸರಿನಲ್ಲಿ ಬೀಜ ಮಾರಾಟದ ಲೈಸನ್ಸ್ ಪಡೆದಿದ್ದನು. ಹೀಗಾಗಿ, ಬೀಜ ಗೊಬ್ಬರ ಕೊಟ್ಟ ಕಂಪನಿಗಳು ಮೋಸ ಹೋಗಿರುವುದು ಖಚಿತವಾಗಿದೆ. ಆರೋಪಿ ಕುಮಾರಗೌಡ ಈ ಹಿಂದೆ ಆಂಧ್ರ ಪ್ರದೇಶ ರಾಜ್ಯದಲ್ಲಿಯೂ ಸಹ ಹಲವು ಕಂಪನಿಗಳಿಗೆ ವಂಚನೆ ಮಾಡಿದ್ದಾರೆಂಬ ಆರೋಪವಿದೆ.
ತಾಯಿ ಮಡಿಲು ಸೇರಿದ ಮಾಜಿ ಸಂಸದ ಡಿ.ಕೆ. ಸುರೇಶ್; ಮರೆಯಾಗುವುದೇ ಸೋಲಿನ ನೋವು
ಸದ್ಯಕ್ಕೆ ಆರೋಪಿ ಕುಮಾರಗೌಡ ವಿರುದ್ದ ಜಗಳೂರು ಪೊಲೀಸ್ ಠಾಣೆಯಲ್ಲಿ 17 ಬೀಜ ಕಂಪನಿಗಳ ಅಧಿಕೃತ ವಿತರಕರಿಂದ ದೂರು ದಾಖಲು ಆಗಿದೆ. ಬೀಜ ಕಂಪನಿಗಳಿಗೆ ಸ್ವಲ್ಪ ಅಡ್ವಾನ್ಸ್ ಹಣ ಕೊಟ್ಟು ಕೋಟ್ಯಾಂತರ ರೂಪಾಯಿ ಮೌಲ್ಯದ ಬೀಜ ಗೊಬ್ಬರ ಪಡೆದಿದ್ದನು. ಆರೋಪಿ ಸದ್ಯ ರೈತರಿಗೆ ಈತನಿಂದ ಯಾವುದೇ ವಂಚನೆ ಆಗಿಲ್ಲ. ದೂರಿನ ಅನ್ವಯ ಅಂಗಡಿಯಲ್ಲಿ ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು ಅಳಿದುಳಿದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಕಂಪನಿಗಳಿಗೆ ಒಪ್ಪಿಸಲು ಮುಂದಾಗಿದ್ದಾರೆ.