ಸಿಎಂ ಬಂದೋಬಸ್ತ್‌ನಲ್ಲಿದ್ದ PSIಗೆ ಹೃದಯಾಘಾತ, SP ಪ್ರಜ್ಞೆಯಿಂದ ಉಳಿಯಿತು ಜೀವ
* ಸಿಎಂ ಬಂದೋಬಸ್ತ್‌ನಲ್ಲಿದ್ದ PSIಗೆ ಹೃದಯಾಘಾತ
* ಎಸ್ಪಿ ಸಮಯ ಪ್ರಜ್ನೆಯಿಂದ ಉಳಿಯಿತು ಸರ್ಕಲ್ ಇನ್ಸಪೆಕ್ಟರ್ ಜೀವ
* ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಮಾಡಿ ಜೀವ ಉಳಿಸಲು ಪರೋಕ್ಷವಾಗಿ ಕಾರಣದ SP
ದಾವಣಗೆರೆ, (ಜೂನ್,17): ಆರಕ್ಷಕರು ಅಂದ್ರೆ ಸಾಕು..ಅವರು ಓಟ ನಿಲ್ಲಿಸದ ಕುದುರೆಯಂತೆ ಕೆಲಸ ಮಾಡಬೇಕು. ಎಷ್ಟೇ ಒತ್ತಡ ಆಯಾಸ ವಿದ್ದರು ಮೊದಲು ಕರ್ತವ್ಯ ನಂತರ ಉಳಿದವುಗಳ ಬಗ್ಗೆ ಪೊಲೀಸರ ಗಮನ . ಯಾವಾಗಲು ಒಂದಲ್ಲ ಒಂದು ಕೆಲಸದಲ್ಲಿ ಎಂಗೇಜ್. ಬಂದೋಬಸ್ತ್, ಠಾಣೆ ಕೆಲಸ, ಕ್ರೈಂ ಸೇರಿದಂತೆ ಯಾವುದರಲ್ಲು ತಾತ್ಸರ ಮಾಡುವಂತಿಲ್ಲ. ಅದರಲ್ಲೂ ನಾಡಿನ ದೊರೆ ದೊರೆ ಊರಿಗೆ ಬರುತ್ತಾರೆ ಅಂದ್ರೆ ಪೊಲೀಸರು ಬೆಳ್ಳಂ ಬೆಳ್ಳಗೆ ಕಣ್ಣಿಗೆ ಎಣ್ಣೆ ಬಿಟ್ಟು, ಊಟ ತಿಂಡಿ ಬಿಟ್ಟು ಬಿಸಿಲಿನಲ್ಲಿ ಕೆಲಸ ಮಾಡಬೇಕು. ಸದಾ ಒತ್ತಡದ ಬದುಕಿಗೆ ಸಿಲುಕಿ ಕೆಲಸ ಮಾಡುವಾಗ ಎಸ್ಪಿಯವರು ಸಮಯ ಪ್ರಜ್ನೆಯಿಂದ ಒಬ್ಬ ಸರ್ಕಲ್ ಇನ್ಸಪೆಕ್ಟರ್ ನ ಜೀವ ಉಳಿದಿದೆ.
ನಿನ್ನೆ ಶಾಮನೂರು ಶಿವಶಂಕರಪ್ಪ ಮೊಮ್ಮಗಳ ಮದುವೆಗೆ ಜೆಎಂಐಟಿ ಹೆಲಿಪ್ಯಾಡ್ ಗೆ ಸಿಎಂ ಬಂದಿರುತ್ತಾರೆ..ಅವರು ಬರುವ ಹಿನ್ನೆಲೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿರುತ್ತದೆ...ಅದಕ್ಕಾಗಿ ಸಿಇಎನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಮಂಜುನಾಥ್ ರನ್ನು ಬಂದೋ ಬಸ್ತ್ ಗೆ ಏರ್ಪಾಡು ಮಾಡಲಾಗಿರುತ್ತದೆ. ಸಿಎಂ ಜಿಎಂಐಟಿಗೆ ಬಂದು ಇಳಿದು ಇನ್ನೇನೂ ವಿವಾಹಕ್ಕೆ ಹೊರಡಲು ಸಿದ್ದರಾಗುತ್ತಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಂದೋಬಸ್ತ್ ಎಸ್ಕಾರ್ಟ್ ಕರ್ತವ್ಯದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಮಂಜುನಾಥ್ ಗೆ ಎದೆನೋವು ಕಾಣಿಸಿಕೊಂಡಿದೆ.
ಕರ್ತವ್ಯದಲ್ಲಿ ನಿರತರಾಗಿದ್ದ ಮಂಜುನಾಥ್ ಎದೆನೋವಿನಿಂದ ಕುಸಿದು ಬಿದಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಅರವಿಂದ್, ಸಿಬ್ಬಂದಿಯವರಾದ ಲಿಂಗರಾಜ್ ಬಿ.ಕೆ, ಕುಮಾರ್ ನಾಯ್ಕ್, ಲೋಹಿತ್, ಗೋವಿಂದರಾಜ್ ಹಾಗೂ ಇತರ ಸಿಬ್ಬಂದಿಯವರು ಕೂಡಲೇ ಎಸ್ಪಿ ಸಿ.ಬಿ ರಿಷ್ಯಂತ್ ಗಮನಕ್ಕೆ ತಂದಿದ್ದಾರೆ.
Davanagere: ಅಗಲಿದ ಪ್ರೀತಿಯ ಮಾಲೀಕನ ಸಮಾಧಿ ಮೇಲೆ ಮಲಗುವ 'ಡಯನಾ' ಶ್ವಾನ
ಕೂಡಲೇ ಸನ್ನದ್ದರಾದ ಎಸ್ಪಿ ರಿಷ್ಯಂತ್ ಮೊದಲು ಆಸ್ಪತ್ರೆಗೆ ಕಳಿಸಿ ಎಂದು ಅವರನ್ನು ಕೂಡಲೇ ದಾವಣಗೆರೆ ಎಸ್.ಎಸ್ ಆಸ್ಪತ್ರೆಯ ನಾರಾಯಣ ಹೃದಯಾಲಯಕ್ಕೆ ದಾಖಲಿಸಿದ್ದಾರೆ.ಅಲ್ಲಿ ಮೈಲ್ಡ್ ಹಾರ್ಟ್ ಆಟ್ಯಾಕ್ ಆಗಿದೆ ಎಂದು ಸ್ಟಂಟ್ ಹಾಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ ನಂತರ ತಕ್ಷಣ ಗುಣಮಟ್ಟದ ಟ್ರಿಟ್ಮೆಂಟ್ ಬಗ್ಗೆ ಗಮನ ಕೊಡಿ ಎಂದು ಖುದ್ದು ಎಸ್ಪಿಯೇ ಅದರ ನೇತೃತ್ವ ವಹಿಸಿ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಮಾಡಿ ಜೀವ ಉಳಿಸಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ನಂತರ ಡಿಸಿ ಮಹಾಂತೇಶ್ ಬೀಳಗಿ ಸಹ ಭೇಟಿ ನೀಡಿ ಇಡೀ ಕುಟುಂಬಕ್ಕೆ ಸಾಂತ್ವಾನ ಹೇಳಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಪ್ರಸ್ತುತ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆ. ಹೆಚ್ಚುವರಿ ಎಸ್.ಪಿ ರಾಮಗೊಂಡ ಬಸರಗಿ, ಡಿವೈಎಸ್ ಪಿ ರವರಾದ ಬಿ.ಎಸ್ ಬಸವರಾಜ್ ಹಾಗೂ ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ.
ಸಿಎಂ ಬಂದೋಬಸ್ತ್ ಮಧ್ಯೆ ಕರ್ತವ್ಯ ಪ್ರಜ್ನೆ ಜೊತೆ ಮಾನವೀಯತೆ ಮೆರೆದ ಎಸ್ಪಿ ರಿಷ್ಯಂತ್ ಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಒಂದು ಕಡೆ ರಾಜ್ಯದ ಮುಖ್ಯಮಂತ್ರಿ ಇದ್ದಾರೆ..ಇನ್ನೋಂದೆಡೆ ತನ್ನ ಸಿಬ್ಬಂದಿಗೆ ಹೃದಯಘಾತವಾಗಿದೆ...ಹೀಗಿರುವಾಗ ಎಸ್ಪಿ ರಿಷ್ಯಂತ್ ಮಂಜುನಾಥ್ ಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ಅಲ್ಲದೇ ಅವರ ಜಾಗಕ್ಕೆ ಇನ್ನೋಬ್ಬ ಸಿಬ್ಬಂದಿ ನೇಮಿಸಿ ಸಿಎಂ ಹೋಗುವ ತನಕ ಬಂದೋ ಬಸ್ತ್ ಮಾಡಿದರು..ಒಟ್ಟಾರೆ ಎಸ್ಪಿ ರಿಷ್ಯಂತ್ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.