Davanagere: ಕುಟೀರ ಜ್ಯೋತಿ ಭಾಗ್ಯ ಜ್ಯೋತಿ ಫಲಾನುಭವಿಗಳಿಗೆ ವಿದ್ಯುತ್ ಕಟ್: ಪ್ರತಿಭಟನೆ
ಜಿಲ್ಲೆಯ ಹದಡಿ ಗ್ರಾಮದಲ್ಲಿ ವಿದ್ಯುತ್ ಕಡಿತ ಖಂಡಿಸಿ ರೈತ ಸಂಘ ಹಾಗೂ ಗ್ರಾಮಸ್ಥರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ದಾವಣಗೆರೆ ತಾಲೂಕು ಹದಡಿ ಗ್ರಾಮದಲ್ಲಿ ಎರಡು ವಾರದಿಂದ ವಿದ್ಯುತ್ ಶಕ್ತಿಯನ್ನು ಕಡಿತ ಮಾಡಲಾಗಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.08): ಜಿಲ್ಲೆಯ ಹದಡಿ ಗ್ರಾಮದಲ್ಲಿ ವಿದ್ಯುತ್ ಕಡಿತ ಖಂಡಿಸಿ ರೈತ ಸಂಘ ಹಾಗೂ ಗ್ರಾಮಸ್ಥರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ (Protest). ದಾವಣಗೆರೆ ತಾಲೂಕು ಹದಡಿ ಗ್ರಾಮದಲ್ಲಿ ಎರಡು ವಾರದಿಂದ ವಿದ್ಯುತ್ ಶಕ್ತಿಯನ್ನು ಕಡಿತ (Power Cut) ಮಾಡಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಫಲಾನುಭವಿಗಳಿಗೆ ದೌರ್ಜನ್ಯದ ಮುಖಾಂತರ ವಿದ್ಯುತ್ ಕಡಿತಗೊಳಿಸಲಾಗಿದೆ.
ಇದರಿಂದ ಬಡ ಕುಟುಂಬಗಳು ವಾಸಿಸುವ ಇಡೀ ಗ್ರಾಮವನ್ನೇ ಕತ್ತಲಲ್ಲಿ ಮುಳುಗುವಂತೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ (State Government) ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ 75 ಯೂನಿಟ್ ಉಚಿತವಾಗಿ ವಿದ್ಯುತ್ತನ್ನು ನೀಡುವುದಾಗಿ ತಿಳಿಸಿದ್ದು, ಈ ಆದೇಶ ಬರುವವರೆಗೂ ಕಾಯದೆ ವಿದ್ಯುತ್ ಇಲಾಖೆಯವರು ಗ್ರಾಮಸ್ಥರ ಜನರಿಗೆ ಯಾವುದೇ ಮಾಹಿತಿ ನೀಡದೆ ವಿದ್ಯುತ್ ಕಡಿತಗೊಳಿಸಿದ್ದಾರೆ.
ಇದರಿಂದ ಮಕ್ಕಳು ಕತ್ತಲಲ್ಲಿ ಕುಳಿತು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ ಮಕ್ಕಳು (PUC Students) ಮನೆಯಲ್ಲಿ ಓದುತ್ತಿದ್ದಾರೆ. ಬೇಸಿಗೆ ಕಾಲ ಬಿಸಿಲ ಝಳಕ್ಕೆ ಜನ ಬಸವಳಿದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ 30 ಪೈಸೆ. 50 ಪೈಸೆ. ಬೆಲೆ ಏರಿಕೆ ಮಾಡಿ ಬರೆ ಎಳೆದಿದ್ದಾರೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ರಾಜ್ಯ ಸರ್ಕಾರ ನೀಡಿದ್ದು, ಅದನ್ನು ಸಂಪೂರ್ಣವಾಗಿ ಉಚಿತವಾಗಿಯೇ ನೀಡಬೇಕು.
ಮೇಣದ ಬತ್ತಿ, ಸೆಲ್‌ಫೋನ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಈಗಿರುವ 40 ಯೂನಿಟ್, 70 ಯೂನಿಟ್ ಮಿತಿ ನಿಗದಿ ಮಾಡಿರುವುದನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು. ಸರ್ಕಾರ ಸಂಪೂರ್ಣ ಉಚಿತ ವಿದ್ಯುತ್ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ವಿದ್ಯುತ್ ಕಡಿತಗೊಳಿಸಿದ್ದುಮ ಕೂಡಲೇ ಮರುಜೋಡಣೆ ಮಾಡಬೇಕು. ಇಲ್ಲದಿದ್ದರೆ ರೈತ ಸಂಘದ ಸದಸ್ಯರುಗಳು ಸೇರಿ ಮರುಜೋಡಣೆ ಕಾರ್ಯವನ್ನು ಮಾಡುತ್ತೇವೆ ಎಂದು ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ಎಚ್ಚರಿಸಿದ್ದಾರೆ.
ಕುಟೀರ ಫಲಾನುಭವಿಗಳಿಗೆ ಫ್ರೀ ವಿದ್ಯುತ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಭೂಒಡೆತನ ಯೋಜನೆ, ವಸತಿ ಯೋಜನೆಯಡಿ ನೀಡುತ್ತಿದ್ದ ಸಹಾಯಧನದ ಮೊತ್ತ ಹೆಚ್ಚಳ ಮತ್ತು ಕುಟೀರ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಕಟಿಸಿದ್ದಾರೆ.
ಭೂ ಒಡೆತನ ಯೋಜನೆಯಡಿ ಭೂಖರೀದಿಗೆ ನೀಡಲಾಗುತ್ತಿದ್ದ 15 ಲಕ್ಷ ರು. ಸಹಾಯಧವನ್ನು 20 ಲಕ್ಷ ರು.ಗೆ, ವಸತಿ ಯೋಜನೆಯಡಿ ಮನೆ ನಿರ್ಮಿಸಲು ನೀಡಲಾಗುತ್ತಿದ್ದ 1.75 ಲಕ್ಷ ರು.ನಿಂದ 2 ಲಕ್ಷ ರು.ಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಮುಂದಿನ ವಾರದೊಳಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮ ದಿನಾಚರಣೆ ಮತ್ತು ಬಾಬು ಜಗಜೀವನ ರಾಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯುತ್ ದರ ಏರಿಕೆ: ಬೆಲೆ ಏರಿಕೆ ಬಿಸಿ ನಡುವೆಯೂ ರಾಜ್ಯದ (Karnataka) ಜನರಿಗೆ ಸರ್ಕಾರ (Government) ಮತ್ತೊಂದು ಶಾಕ್ ನೀಡಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ (Electricity Bill) ಏರಿಕೆ ಸರದಿ. ಈ ತಿಂಗಳಿನಿಂದಲೇ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಬರೋಬ್ಬರಿ 35 ಪೈಸೆ ಏರಿಕೆ ಮಾಡಿದೆ. ಬೆಲೆ ಏರಿಕೆ. ಬೆಲೆ ಏರಿಕೆ. ಬೆಲೆ ಏರಿಕೆ.
ಖುರಾನ್ ಬರೆವಾಗ ಮೈಕಷ್ಟೇ ಅಲ್ಲ, ವಿದ್ಯುತ್ ಕೂಡ ಇರಲಿಲ್ಲ: ಸಿದ್ದರಾಮಯ್ಯ
ಏನು ಖರೀದಿಸಿದರೂ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಕಳೆದೊಂದು ವಾರದಿಂದ ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದೆ. ಯುದ್ಧದ ಪರಿಣಾಮ ಎಣ್ಣೆ ಬೆಲೆ ಏರಿಕೆಯಾಗ್ತಿದೆ. ಹೋಟೆಲ್‌ನಲ್ಲಿ ದರ ಏರಿಸಲು ಮುಂದಾಗಿದೆ. ಇದೀಗ ವಿದ್ಯುತ್ ದರವನ್ನೂ ಸರ್ಕಾರ ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿದೆ. ಅಂದ್ರೆ ಈಗ ಕಟ್ಟುವ ಬಿಲ್‌ಗಿಂತ ಇನ್ಮುಂದೆ ಶೇ.4.33ರಷ್ಟು ಹೆಚ್ಚು ದುಡ್ಡು ತೆರಬೇಕಾಗಿದೆ.
ಈ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿ ಅನುಮೋದಿಸಿ ಸುದ್ದಿಗೋಷ್ಟಿಯಲ್ಲಿ ಪ್ರಕಟಣೆ ಮಾಡಿದರು. ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ. ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಿಸಿದ್ದಾರೆ. ಫಿಕ್ಸೆಡ್ ದರವನ್ನು ಪ್ರತಿ ಹೆಚ್ ಪಿ/ಕಿ.ವ್ಯಾ/ಕೆ.ವಿ.ಎಗೆ 10 ರಿಂದ 30 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಇದು ಜಾರಿಯಾಗಲಿದೆ.