ದಾವಣಗೆರೆ(ಏ.05): ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ಕ್ಯಾಂಡಲ್‌ ತರಲು ಹೊರಗೆ ಹೋದರೆ ಪೊಲೀಸರು ಲಾಠಿ ಜಾಜ್‌ರ್‍ ಮಾಡುತ್ತಾರೆ ಎಂಬ ಜೆಡಿಎಸ್‌ ಶಾಸಕ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಹೊಳೆನರಸೀಪುರದ ಮನೆ ವಿಳಾಸಕ್ಕೆ ಬಿಜೆಪಿ ದಕ್ಷಿಣ ಯುವ ಮೋರ್ಚಾ ಸ್ಪೀಡ್‌ ಪೋಸ್ಟ್‌ ಮೂಲಕ ಕ್ಯಾಂಡಲ್‌ಗಳನ್ನು ಕಳಿಸಿ ತಿರುಗೇಟು ನೀಡಿದೆ.

ನಗರದ ಗಡಿಯಾರ ಕಂಬ ಸಮೀಪದ ಪ್ರಧಾನ ಅಂಚೆ ಕಚೇರಿಯಲ್ಲಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ, ನಗರ ಪಾಲಿಕೆ ಸದಸ್ಯ ಶಿವನಗೌಡ ಟಿ. ಪಾಟೀಲ್‌ ಇತರರ ನೇತೃತ್ವದಲ್ಲಿ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಹೇಳಿಕೆ ಖಂಡಿಸಲಾಯಿತು.

ಲಾಕ್‌ಡೌನ್‌ ನಡುವೆ ವಿದ್ಯುತ್ ಬಳಕೆದಾರರಿಗೆ ಶಾಕ್!

ಶಿವನಗೌಡ ಪಾಟೀಲ ಮಾತನಾಡಿ, ಕೊರೋನಾ ವೈರಸ್‌ ವಿರುದ್ಧ ಇಡೀ ದೇಶವೇ ಒಂದಾಗಿದೆ. ನಾವೆಲ್ಲರೂ ಒಂದಾಗಿ ವೈರಸ್‌ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ತಮ್ಮ ತಮ್ಮ ಮನೆಯಂಗಳ, ಮಹಡಿ ಮೇಲೆ ನಿಂತು ದೀಪ ಬೆಳಗಲು ಪ್ರಧಾನಿ ಕರೆ ನೀಡಿದ್ದಾರೆ. ಆದರೆ ಜೆಡಿಎಸ್‌ ಶಾಸಕ ರೇವಣ್ಣ ಈ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಖಂಡನೀಯ ಎಂದರು.

ಹಾಗಲ ಬೆಳೆದು ಕಹಿಯಾಯ್ತು ಬದುಕು, ಬಡ ರೈತನಿಗೆ 8 ಲಕ್ಷ ಸಾಲ

ರೇವಣ್ಣ ನಿವಾಸಕ್ಕೆ ಮೇಣದ ಬತ್ತಿ ಪಾಕೆಟ್‌ಗಳು ಸ್ಪೀಡ್‌ ಪೋಸ್ಟ್‌ನಲ್ಲಿ ತಲುಪಲಿವೆ. ಇದೇ ಕ್ಯಾಂಡಲ್‌ಗಳನ್ನು ಕುಟುಂಬ ಸಮೇತರಾಗಿ ರೇವಣ್ಣ ಮನಃಪೂರ್ವಕವಾಗಿ ಬೆಳಗಲಿ. ರೇವಣ್ಣ ರೀತಿ ಜೆಡಿಎಸ್‌ನ ಯಾವುದೇ ಶಾಸಕರು, ಮುಖಂಡರಿಗೆ ಕ್ಯಾಂಡಲ್‌ ತರುವುದು ಕಷ್ಟವಾದರೆ, ತಮ್ಮ ಅಸಹಾಯಕತೆ ತೋಡಿಕೊಂಡಿದ್ದರೆ ಅಂಥವರ ಬಗ್ಗೆ ನಮಗೆ ಮಾಹಿತಿ ನೀಡಿ. ಬಿಜೆಪಿ ಯುವ ಮೋಚಾ ರ್‍ದಿಂದ ಅಂತಹ ಜೆಡಿಎಸ್‌ ಮುಖಂಡರು, ಶಾಸಕರಿಗೂ ಕ್ಯಾಂಡಲ್‌ ತಲುಪಿಸಲು ನಾವು ಸಿದ್ಧ ಎಂದು ಶಿವನಗೌಡ ಪಾಟೀಲ್‌ ಹೇಳಿದ್ದಾರೆ. ಪಕ್ಷದ ಮುಖಂಡರಾದ ಆನಂದ ರಾವ್‌ ಸಿಂಧೆ, ಶ್ರೀಕಾಂತ ನೀಲಗುಂದ, ಟಿಂಕರ್‌ ಮಂಜಣ್ಣ, ಪಿ.ಅಭಿಷೇಕ್‌, ನಾಗರಾಜ ಅಂಗಡಿ, ಎಂ.ಬಿ.ಪ್ರಕಾಶ ಇತರರು ಇದ್ದರು.