ಮೂಡುಬಿದಿರೆ(ಏ.07): ಕೊರೋನಾ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶವ್ಯಾಪಿ ಲಾಕ್‌ಡೌನ್‌ ವಿಧಿಸಲಾಗಿರುವ ಪರಿಣಾಮ, ದೂರದ ಮುಂಬೈಯಲ್ಲಿ ಮೃತಪಟ್ಟತನ್ನ ತಾಯಿಯ ಅಂತಿಮ ದರ್ಶನ ಪಡೆಯಲಾಗದ ಪುತ್ರಿಯೊಬ್ಬರು ವಾಟ್‌್ಯಆ್ಯಪ್‌ ಮೂಲಕವೇ ಅಂತಿಮ ನಮನ ಸಲ್ಲಿಸಬೇಕಾಯಿತು.

ಮೂಲತಃ ಉಡುಪಿಯವರಾದ ಪ್ರಸ್ತುತ ಮುಂಬೈನ ಸಾಂತಾಕ್ರೂಸ್‌ನಲ್ಲಿರುವ ದಿ.ಮಂಜುನಾಥ ಆಚಾರ್ಯರ ಪತ್ನಿ ಕಲ್ಯಾಣಿ ಎಂ. ಆಚಾರ್ಯ (86) ಭಾನುವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟರು. ಭಾನುವಾರ ರಾತ್ರಿ 9 ಗಂಟೆಗೆ ದೀಪಗಳನ್ನು ಬೆಳಗಿದ್ದ ಅವರು 11 ಗಂಟೆ ವೇಳೆಗೆ ಅಸ್ವಸ್ಥರಾಗಿ ಅಸುನೀಗಿದರು.

ಉಡುಪಿ, ದಕ್ಷಿಣ ಕನ್ನಡಕ್ಕೆ ಅಬಕಾರಿ ಇಲಾಖೆಯಿಂದ ಸ್ಯಾನಿಟೈಸರ್‌

ಕಲ್ಯಾಣಿ ಅವರ ಏಕೈಕ ಪುತ್ರಿ, ಪತ್ರಕರ್ತ ಧನಂಜಯ ಮೂಡುಬಿದಿರೆ ಅವರ ಪತ್ನಿ ಪುಷ್ಪಾ ಅವರಿಗೆ ಲಾಕ್‌ಡೌನ್‌ನಿಂದಾಗಿ ತಮ್ಮ ತಾಯಿಯ ಅಂತಿಮ ದರ್ಶನ ಪಡೆಯಲು ದೂರದ ಮುಂಬೈಗೆ ಹೋಗಲು ಸಾಧ್ಯವಾಗದ ಕಾರಣ ವಾಟ್ಸ್‌ಆ್ಯಪ್‌ ಕಾಲ್‌ ಮೂಲಕವೇ ಅಶ್ರುತರ್ಪಣ ಸಲ್ಲಿಸಬೇಕಾದ ಅನಿವಾರ್ಯತೆ ಬಂದೊದಗಿತು.

ಕಲ್ಯಾಣಿ ಅವರ ಇನ್ನೋರ್ವ ಪುತ್ರ ಮೂಲ್ಕಿಯ ಕೊಲಕಾಡಿನ ತಮ್ಮ ಪತ್ನಿಯ ಮನೆಗೆ ಬಂದು ಲಾಕ್‌ಡೌನ್‌ ಕಾರಣದಿಂದ ಬಾಕಿಯಾಗಿದ್ದರು. ಹಾಗಾಗಿ ಉಳಿದ ಮೂವರು ಪುತ್ರರು ಹಾಗೂ ಬೆರಳೆಣಿಕೆಯ ಬಂಧುಗಳು ಮುಂಬೈನಲ್ಲಿ ಕಲ್ಯಾಣಿಯವರ ಅಂತ್ಯಸಂಸ್ಕಾರ ನಡೆಸಿದರು.