Love Marriage : ಪ್ರೀತಿಸಿ ವಿವಾಹವಾದ ಮಗಳ ವಿರೋಧಿಸಿದ ತಂದೆ ವಿರುದ್ಧ ದೂರು

  • ಪೋಷಕರ ವಿರೋಧದ ನಡುವೆಯೂ  ಪ್ರೀತಿ  ಮಾಡಿದ ಯುವಕನನ್ನು ವಿವಾಹವಾಗಿದ್ದ ಮಗಳು
  • ಮಗಳ ವಿವಾಹಕ್ಕೆ ವಿರೋಧಿಸಿದ ತಂದೆಯ ವಿರುದ್ಧವೇ ದೂರು ನೀಡಿದ ಮಗಳು
Daughter  Complaint Against  father For Opposing love marriage snr

 ಮೈಸೂರು (ಡಿ22):  ಪೋಷಕರ (Parents) ವಿರೋಧದ ನಡುವೆಯೂ  ಪ್ರೀತಿ (Love)  ಮಾಡಿದ ಯುವಕನನ್ನು ವಿವಾಹವಾಗಿದ್ದ (Marriage) ಮಗಳನ್ನು  ಜುಟ್ಟು ಹಿಡಿದು  ಅಪ್ಪ ಎಳೆದಾಡಿದ್ದಾರೆ ಎಂದು  ಮೈಸೂರಿನ (Mysuru) ನಂಜನಗೂಡಿನಲ್ಲಿ ಅಪ್ಪನ ಮೇಲೆ ಮಗಳೇ ದೂರು (Complaint) ಕೊಟ್ಟ ಘಟನೆ ಇಂದು ನಡೆದಿದೆ.  ಮಗಳು ಪ್ರೀತಿಸಿ ಮದುವೆಯಾಗಿದ್ದು ಈ ವಿಚಾರ ತಿಳಿಯುತ್ತಿದ್ದಂತೆ ತಂದೆ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದು ಮಗಳನ್ನು ಮನೆಗೆ ಕರೆದೊಯ್ಯಲು ಯತ್ನಿಸಿದ್ದರು. ಈ ವೇಳೆ ಆಕೆ ತಂದೆಯೊಡನೆ ತೆರಳಲು ವಿರೋಧಿಸಿ ನಂಜನಗೂಡು ಠಾಣೆಯಲ್ಲಿ ದೂರು ನೀಡಿದ್ದಾಳೆ.

ಪೋಷಕರು ಹಲವು ದಿನಗಳಿಂದ ಆಕೆಯ ಪ್ರೇಮ ವಿವಾಹಕ್ಕೆ (Love Marriage) ವಿರೋಧಿಸಿದ್ದು, ವಿರೋಧ ಲೆಕ್ಕಿಸದೆ ಮದುವೆಯಾಗಿದ್ದಳು.  ಮೈಸೂರು (Mysuru) ಜಿಲ್ಲೆ ನಂಜನಗೂಡು ತಾಲೂಕು ಹರತಲೆ ಗ್ರಾಮದ ವ್ಯಕ್ತಿಯ ಪುತ್ರಿ  ಕಳೆದ ಒಂದೂವರೆ ವರ್ಷದಿಂದ  ಮಹೇಂದ್ರ  ಎಂಬಾತನನ್ನು ಪ್ರೀತಿಸುತ್ತಿದ್ದಳು (Love). ಬಳಿಕ ಈ ಬಗ್ಗೆ ಮನೆಯಲ್ಲಿ ಮಾಹಿತಿ ತಿಳಿಯುತ್ತಿದ್ದಂತೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.  ಆದರೆ ವಿರೋಧ ಲೆಕ್ಕಿಸದೆ ಡಿಸೆಂಬರ್  8 ರಂದು ಮದುವೆ (Marriage) ಆಗಿದ್ದರು. ಡಿಸೆಂಬರ್ 22 ರಂದು ಕಚೇರಿಗೆ (Office) ನೋಂದಣಿಗೆ ಬಂದಾಗ ಗಲಾಟೆ ನಡೆದಿತ್ತು. 

ವಿವಾಹ (Marriage) ನೊಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ತಂದೆ ಈ ಮದುವೆಯನ್ನು ವಿರೋಧಿಸಿದ್ದರು. ಅಲ್ಲದೇ ಮನೆಗೆ ಕರೆದೊಯ್ಯಲು ಬಲವಂತ ಮಾಡಿದ್ದರು. ತಂದೆ ಬಸವರಾಜ ನಾಯ್ಕ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತು ಹಾಕಿದ್ದರು. ಅಲ್ಲದೇ ಆಕೆಯನ್ನು ಅಲ್ಲಿಂದ ಕರೆದೊಯ್ಯುವ ಪ್ರಯತ್ನವನ್ನು ಮಾಡಿದ್ದರು. ಈ ನಿಟ್ಟಿನಲ್ಲಿ ಈ ಬಗ್ಗೆ ನಂಜನಗೂಡು ಪೊಲೀಸ್ (Police) ಠಾಣೆಯಲ್ಲಿ ತಂದೆ ವಿರುದ್ಧ ದೂರು ನೀಡಿದ್ದಾಳೆ.

ಮದುವೆಯಾದ ವಾರದಲ್ಲೇ ಮದುಮಗಳ ಸಾವು :   ಮದುವೆಯಾದ(Marriage) ಎರಡೇ ವಾರಕ್ಕೆ ಮಧು ಮಗಳು ಸಾವನ್ನಪ್ಪಿದ ಘಟನೆ ಹಾಸನದ ಸಲೀಂ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ಫಿಜಾ ಖಾನಂ(22) ಮೃತಪಟ್ಟ(Death) ದುರ್ದೈವಿ.  ಜಿಲ್ಲೆಯ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ(Hassan) ಶಾಗಿಲ್ ಅಹಮದ್ ನಡುವೆ ಡಿ.2 ರಂದು ಮದುವೆ ನಡೆದಿತ್ತು. ಮದುವೆಯಾಗಿ ಕೇವಲ 19 ನೇ ದಿನಕ್ಕೆ ನವ ವಿವಾಹಿತೆ ಫಿಜಾ ಖಾನಂ ಅನುಮಾನಾಸ್ಪವಾಗಿ(Suspicious Death) ಮೃತಪಟ್ಟಿದ್ದಾಳೆ. ಹೀಗಾಗಿ ವರದಕ್ಷಿಣೆಗಾಗಿ(Dowry) ತಮ್ಮ ಮಗಳನ್ನು ಗಂಡನ ಮನೆಯವರು ಕೊಲೆ(Murder) ಮಾಡಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದರು. 

ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ವರದಕ್ಷಿಣೆ ಕಿರುಕುಳ, ಕೊಲೆ ಆರೋಪದಡಿ ಪ್ರಕರಣ(Case) ದಾಖಲಾಗಿದೆ. ಅಳಿಯ ಶಾಗಿಲ್ ಅಹಮದ್ ಸೇರಿ ಸಹೋದರರು, ಶಾಗಿಲ್ ತಾಯಿ ವಿರುದ್ಧ ಕೇಸ್ ದಾಖಲಿಸಲಾಗಿದೆ. 

 ಪ್ರೇಮಿ ಸಾವಿನ ಸುಳ್ಳು ಸಾವಿನ ಸುದ್ದಿ : ತಮ್ಮ ಮದುವೆಗೆ ವಿರೋಧಿಸಿದ್ದ ಪ್ರಿಯತಮೆ ಕುಟುಂಬದವರ ಒಲೈಕೆಗೆ ಪೊಲೀಸ್‌(Police) ಹೆಸರಿನಲ್ಲಿ ಗೆಳೆಯನಿಂದ ಯುವಕನೊಬ್ಬ ಮಾಡಿದ ಹುಸಿ ಕರೆ ಕೊನೆಗೆ ಪ್ರಿಯತಮೆ ಸಾವಿಗೆ ಕಾರಣವಾದ ದಾರುಣ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಸಮೀಪ  ನಡೆದಿತ್ತು.

ಪ್ರಿಯಕರ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ನಂಬಿ ದೊಡ್ಡಬಿದರಕಲ್ಲು ಸಮೀಪದ ಸುವರ್ಣ ನಗರದ ನಿವಾಸಿ ಸಾಕಮ್ಮ(24) ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಸುಳ್ಳು ಕರೆ ಮಾಡಿಸಿ ಪ್ರಿಯತಮೆ ಜೀವಕ್ಕೆ ಎರವಾದ ಆರೋಪದ ಮೇರೆಗೆ ಮೃತಳ ಪ್ರಿಯಕರ ಕಮಲಾ ನಗರದ ಅರುಣ್‌ ಹಾಗೂ ಆತನ ಗೆಳೆಯ ಗೋಪಾಲ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಹಾಸನ(Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಾಕಮ್ಮ ಹಾಗೂ ಅರುಣ್‌, ಯಶವಂತಪುರ ಸಮೀಪದ ಮೆಟ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೆಡೆ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ(Love) ತಿರುಗಿತ್ತು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು, ಕೊನೆಗೆ ಮದುವೆಯಾಗಲು(Marriage) ನಿರ್ಧರಿಸಿದ್ದರು. ಅಂತೆಯೇ ತಮ್ಮ ಮನೆಯಲ್ಲಿ ತಮ್ಮ ಪ್ರೇಮ ವಿಚಾರವನ್ನು ಇಬ್ಬರು ಪ್ರಸ್ತಾಪಿಸಿದ್ದರು. ಆದರೆ ಈ ಪ್ರೇಮ ವಿವಾಹಕ್ಕೆ(Love Marriage) ಎರಡು ಕುಟುಂಬಗಳು ವಿರೋಧಿಸಿವೆ ಎಂದು ಪೊಲೀಸರು ಹೇಳಿದ್ದರು.

ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದ ಸಾಕಮ್ಮ, ದೊಡ್ಡಬಿದರಕಲ್ಲು ಹತ್ತಿರದ ಸುವರ್ಣ ನಗರದಲ್ಲಿರುವ ತನ್ನ ತಂಗಿಯ ಮನೆಯಲ್ಲಿ ನೆಲೆಸಿದ್ದಳು. ಕೊನೆಗೆ ಪಟ್ಟುಹಿಡಿದು ತನ್ನ ಕುಟುಂಬದವರನ್ನು ಒಪ್ಪಿಸಿದ ಅರುಣ್‌, ಬಳಿಕ ಸಾಕಮ್ಮ ಕುಟುಂಬದವರನ್ನು ಭೇಟಿಯಾಗಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದ. ಸಾಕಮ್ಮರ ಪೋಷಕರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಈಕೆ 2ನೇ ಮಗಳಾಗಿದ್ದಳು. ಆಕೆಯ ತಂಗಿ ಪ್ರೀತಿಸಿ ವಿವಾಹವಾಗಿದ್ದ ಕಾರಣ, ಸಾಕಮ್ಮಳ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಕಮ್ಮಳ ತಂಗಿ ಮತ್ತು ಆಕೆಯ ಗಂಡ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸಾಕಮ್ಮ ಮನೆಯವರ ಒಲೈಕೆಗೆ ತನ್ನ ಪರಿಚಿತರ ಮೂಲಕ ಆತ ಒತ್ತಡ ಹೇರುತ್ತಿದ್ದ. ಆದರೆ ಇದ್ಯಾವುದಕ್ಕೂ ಬಗ್ಗದ ಅವರು ಹಠ ಮುಂದುವರೆಸಿದ್ದರು ಎನ್ನಲಾಗಿದೆ.

ಜೀವವೇ ಬಲಿ: ಕೊನೆಗೆ ಪೊಲೀಸರ ಹೆಸರಿನಲ್ಲಿ ಸಾಕಮ್ಮ ಕುಟುಂಬದವರನ್ನು ಬೆದರಿಸಿ ಮದುವೆಗೆ ಒಪ್ಪಿಸಲು ಅರುಣ್‌ ಯೋಜಿಸಿದ್ದ. ಅದರಂತೆ ಸಾಕಮ್ಮ ಅವರ ಭಾವನಿಗೆ ಬುಧವಾರ ಬೆಳಗ್ಗೆ ಬಸವೇಶ್ವರ ನಗರ ಪೊಲೀಸರ ಹೆಸರಿನಲ್ಲಿ ತನ್ನ ಗೆಳೆಯ ಗೋಪಾಲ್‌ ಮೂಲಕ ಅರುಣ್‌ ಕರೆ ಮಾಡಿಸಿದ್ದ. ‘ನಾನು ಬಸವೇಶ್ವರ ನಗರದ ಪೊಲೀಸ್‌ ಮಾತನಾಡುತ್ತಿರುವುದು. ನಮ್ಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ಅರುಣ್‌ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನಿಗೆ ನಿಮ್ಮ ನಾದಿನಿ ಸಾಕಮ್ಮಳನ್ನು ಕೊಟ್ಟು ವಿವಾಹ ಮಾಡದೆ ಹೋದರೆ ನಿಮ್ಮ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗುತ್ತದೆ. ನೀವು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಗೋಪಾಲ್‌ ಬೆದರಿಸಿದ್ದ. ಈ ಕರೆಯನ್ನು ನಂಬಿದ ಸಾಕಮ್ಮ ಭಾವ, ಮನೆಯಲ್ಲಿ ಅರುಣ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದರು. ತನ್ನ ಪ್ರಿಯಕರ ಆತ್ಮಹತ್ಯೆ ವಿಚಾರ ತಿಳಿದು ಆಘಾತಗೊಂಡ ಸಾಕಮ್ಮ, ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

Latest Videos
Follow Us:
Download App:
  • android
  • ios