Asianet Suvarna News Asianet Suvarna News

ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ಮಗಳು ನೇಣಿಗೆ ಶರಣು

  • ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ಮಗಳು ನೇಣಿಗೆ ಶರಣು
  • ತಂದೆಗೆ ಒಳ್ಳೆಯ ಮಗಳಾಗಲಿಲ್ಲ. ಗಂಡನಿಗೆ ತಕ್ಕ ಹೆಂಡತಿ ಆಗಿಲ್ಲವೆಂದು ಡೆತ್ ನೋಟ್ನಲ್ಲಿ ಉಲ್ಲೇಖ
Daughter Commits Suicide After Send death note to her Father snr
Author
Bengaluru, First Published Jul 25, 2021, 11:40 AM IST
  • Facebook
  • Twitter
  • Whatsapp

ಮೈಸೂರು (ಜು.25):  ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ಮಗಳು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿಂದು ನಡೆದಿದೆ. 
 
ತಂದೆಗೆ ಒಳ್ಳೆಯ ಮಗಳಾಗಲಿಲ್ಲ. ಗಂಡನಿಗೆ ತಕ್ಕ ಹೆಂಡತಿ ಆಗಿಲ್ಲವೆಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಿ ಮೋಹನ್ ಕುಮಾರಿ(32) ಎಂಬಾಕೆ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾ ಟ್ಯಾಂಕ್ ರೋಡ್ ನಲ್ಲಿ ಘಟನೆ ನಡೆದಿದೆ.

ಚಾರ್ಟೆಡ್ ಅಕೌಂಟೆಂಟ್ ಬಳಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರಿ 2013 ರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಎಂಬುವರನ್ನ ಪ್ರೀತಿಸಿ ಮದುವೆ ಆಗಿದ್ದರು.

ಉಡುಪಿ: ಫ್ಲಾಟ್‌ನಲ್ಲಿ ಸಿಕ್ಕ ಎರಡು ಟೀ ಗ್ಲಾಸ್ ಮತ್ತು 'ದುಬೈ' ಮಹಿಳೆಯ ಕೊಲೆ

ಚಾರ್ಟೆಡ್ ಅಕೌಂಟೆಂಟ್ ಬಳಿ ಕೆಲಸ ಮಾಡುತ್ತಿದ್ದ ಮೋಹನ ಕುಮಾರಿ ಸಾಕಷ್ಟು ಸಾಲದ ಶೂಲಕ್ಕೆ ಸಿಲುಕಿದ್ದರು. ಲಾಕ್ ಡೌನ್ ಹಿನ್ನಲೆ ಪತಿಗೂ ಆದಾಯ ಕಡಿಮೆ ಆಗಿತ್ತು. ಇದರಿಂದ ಮನನೊಂದಿದ್ದ ಮೋಹನ್ ಕುಮಾರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ತಂದೆಗೆ ಮಗಳು ಬರೆದು ಪೋಸ್ಟ್ ಮಾಡಿದ್ದ ಡೆತ್ ನೋಟ್ ತಲುಪಿದ ನಂತರ ಎನ್.ಆರ್.ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂಬಂಧ 
ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios