ಹಾಸನ, (ಆ.31): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯನ್ನೇ ತನ್ನ ಬಾಯ್‌ಫ್ರೆಂಡ್ ಮೂಲಕ ಹತ್ಯೆ ಮಾಡಿಸಿದ್ದ ಮಗಳ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಪ್ರಿಯಕರನ ಜತೆಗೆ ಸೇರಿ ಮಗಳೊಬ್ಬಳು ತಂದೆಗೇ ಸುಪಾರಿ ಕೊಟ್ಟು ಕೊಂದ ಘಟನೆ ಹಾಸನದಲ್ಲಿ ನಡೆದಿದೆ. ಘಟನೆ ಸಂಬಂಧ ಪುತ್ರಿ, ಪ್ರಿಯಕರ ಸೇರಿ ಮೂವರನ್ನು ಬಂಧಿಸಲಾಗಿದೆ.

ಮದ್ಯ ಸೇವನೆಗೆ ಹಣ ನೀಡದ ಪತ್ನಿಯ ಕೊಚ್ಚಿ ಕೊಂದ ಪತಿ!

ಬಂಧಿತರನ್ನು ವಿದ್ಯಾ, ಚಿದಾನಂದ ಹಾಗೂ ರಘು ಎಂದು ಗುರುತಿಸಿದ್ದು ತಂದೆಯ ಕೊಲೆಗಾಗಿ ವಿದ್ಯಾ ಹದಿನೈದು ಲಕ್ಷ ರು. ಸುಪಾರಿ ನೀಡಿದ್ದಳು. 

ಘಟನೆ ವಿವರ
ವಿದ್ಯಾಗೆ ಬೇರೆಯವರ ಜತೆ ಮದುವೆಯಾಗಿದ್ದರೂ ಪ್ರಿಯಕರ ಚಿದಾನಂದನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಅವನೊಂದಿಗೆ ಓಡಾಡುತ್ತಿದ್ದಳು. ಇದನ್ನು ಕಂಡ ವಿದ್ಯಾ ತಂದೆ ಮುನಿರಾಜು ಆಕೆಗೆ ಬೈಯ್ದಿದ್ದಾರೆ.

ಇದರಿಂದ ಕೋಪಗೊಂಡ ವಿದ್ಯಾ ಆಗಸ್ಟ್ 23ಕ್ಕೆ ಪ್ರಿಯಕರ ಚಿದಾನಂದ್ ಹಾಗೂ ರಘು ಜತೆ ಸೇರಿ ತಂದೆ ಮುನಿರಾಜುವನ್ನು ಹತ್ಯೆ ಮಾಡಿ ಹೇಮಾವತಿ ಹಿನ್ನೀರಿಗೆ ಎಸೆದಿದ್ದಾರೆ.

ಮುನಿರಾಜು ಮೃತದೇಹ ಮಾಲೂರಿನ ಮಣಿಗನಹಳ್ಳಿ ಬಳಿಯ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದು ಆಕ್ಸ್ ಕೇಬಲ್, ಚಕು ಬಳಸಿ ಅವರನ್ನು ಕೊಲ್ಲಲಾಗಿತ್ತು.ಇನ್ನು ಕೃತ್ಯ ಎಸಗಿದ ವಿದ್ಯಾ ತಾನೇ ಹಿರಿಸಾವೆ ಪೋಲೀಸ ಬಳಿ ತೆರಳಿ ತಂದೆ ಮುನಿರಾಜು ನಾಪತ್ತೆಯಾಗಿದ್ದಾಗಿ ದೂರು ಕೊಟ್ಟಿದ್ದಳು.

ದೂರು ದಾಖಲಿಸಿಕೊಂಡು ಶವ ಪತ್ತೆ ಹಚ್ಚಿದ ಪೋಲೀಸರು ವಿದ್ಯಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಇದೀಗ ಆಕೆಯ ಹೇಳಿಕೆಯಂತೆ ಆರೋಪಿ ಚಿದಾನಂದ್ ಮತ್ತು ರಘುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.