ದತ್ತಪೀಠದಲ್ಲಿ ತಲೆದೂರಿದ ದತ್ತಜಯತಿ-ಉರುಸ್ ವಿವಾದ, ಸರ್ಕಾರದ ಸಮಿತಿ ವಿರುದ್ಧ ಮುಸ್ಲಿಂಮರು ಗರಂ!

ದತ್ತಪೀಠದಲ್ಲಿನ ಉರುಸ್ ವಿಚಾರವಾಗಿ ಮುಸ್ಲಿಂ ಸಮುದಾಯ ಮತ್ತೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ. ಉರುಸ್ ಮಾಡೋದು ಜಿಲ್ಲಾಡಳಿತವಲ್ಲ. ಮುಸ್ಲಿಂ ಸಮುದಾಯ. ನಾವು ದತ್ತಜಯಂತಿಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ನಮ್ಮ ಉರುಸ್‍ಗೂ ಜಿಲ್ಲಾಡಳಿತ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ತಾಕೀತು ಮಾಡಿದೆ.

Datta Jayanti-Urus controversy in datta peeta gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.23): ದತ್ತಪೀಠದಲ್ಲಿನ ಉರುಸ್ ವಿಚಾರವಾಗಿ ಮುಸ್ಲಿಂ ಸಮುದಾಯ ಮತ್ತೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದೆ. ಉರುಸ್ ಮಾಡೋದು ಜಿಲ್ಲಾಡಳಿತವಲ್ಲ. ಮುಸ್ಲಿಂ ಸಮುದಾಯ. ನಾವು ದತ್ತಜಯಂತಿಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ನಮ್ಮ ಉರುಸ್‍ಗೂ ಜಿಲ್ಲಾಡಳಿತ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ತಾಕೀತು ಮಾಡಿದೆ. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮತ್ತೆ ದತ್ತಜಯಂತಿ ಹಾಗೂ ಉರುಸ್ ವಿವಾದ ಮುನ್ನೆಲೆಗೆ ಬಂದಿದೆ. ಇದೇ ಮಾರ್ಚ್ 8 ರಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತದಿಂದ ಉರುಸ್ ನಡೆಯಲಿದೆ. ಆದರೀಗ ಅದೇ ಉರುಸ್ ವಿವಾದ ಕಾರಣವಾಗಿದೆ. ಜಿಲ್ಲಾಡಳಿತದಿಂದ ಉರುಸ್ ನಡೆಸೋದಕ್ಕೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಉರುಸ್ ಮಾಡೋದು ಜಿಲ್ಲಾಡಳಿತವಲ್ಲ. ಮುಸ್ಲಿಂ ಸಮುದಾಯ. ಜಿಲ್ಲಾಡಳಿತ ಮಾಡಿದ್ರೆ ಹೇಗೆ. ನಮ್ಮ ಸಮುದಾಯದ ಪ್ರಕಾರ ಉರುಸ್ ನಡೆಯಬೇಕು. ಇಡೀ ಮುಸ್ಲಿಂ ಸಮುದಾಯ ಒಪ್ಪಬೇಕು. ಹಾಗೇ ಮಾಡ್ತೀರಾ. ನಮ್ಮ ಗುರುಗಳ ನೇತೃತ್ವದಲ್ಲಿ ನಡೆಯಬೇಕು. ಜಿಲ್ಲಾಡಳಿತ ಉಸ್ತುವಾರಿ ತೆಗೆದುಕೊಳ್ಳಬಹುದಷ್ಟೆ. ಉರುಸ್ ಮಾಡೋದಕ್ಕೆ ಆಗಲ್ಲ ಎಂದು ಅಸಮಾಧಾನ ಹೊರಹಾಕಿದೆ.

ದತ್ತಜಯಂತಿಗೆ ನಾವು ವಿರೋಧ ಮಾಡಿಲ್ಲ. ನಮ್ಮ ಕಾರ್ಯಕ್ರಮಕ್ಕೂ ಅವಕಾಶ ನೀಡಿ. ದರ್ಗಾ ಪಕ್ಕ ಮಸೀದಿ ಇದೆ. ನಮ್ಮ ಕಾರ್ಯಕ್ರಮಕ್ಕೆ ಅದನ್ನ ಓಪನ್ ಮಾಡಿಕೊಡಲಿ. ನಮಾಜ್ ಮಾಡಿ ನಾವು ಪೂಜೆಗೆ ಹೋಗ್ತೀವಿ. ಫಾತಿಹಾ ಮಾಡ್ಬೇಕು. ಗೋರಿಗಳ ಮೇಲೆ ಬಟ್ಟೆ ಹಾಕೋದಕ್ಕೆ ಬಿಡುತ್ತಿಲ್ಲ. ವ್ಯವಸ್ಥಾಪನಾ ಸಮಿತಿಯಲ್ಲಿರುವ ಮುಸ್ಲಿಂ ಮುಸ್ಲಿಮನೇ ಅಲ್ಲ. ನಮ್ಮ ಸಮುದಾಯ ಒಪ್ಪಲ್ಲ ಎಂದು ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನಾ ಸಮಿತಿ ವಿರುದ್ಧ ಬಾಬಾಬುಡನ್ ಗಿರಿ ಸಮಿತಿ, ಅಧ್ಯಕ್ಷ ಸಿರಾಜ್  ಅಸಮಾಧಾನ ಹೊರಹಾಕಿದ್ದಾರೆ. 

ವ್ಯವಸ್ಥಾಪನಾ ಸಮಿತಿ ರದ್ಧತಿಗೆ ಆಗ್ರಹ:
ಎರಡು ಧರ್ಮಿಯರಿಗೆ ಸಮಾನ ಪ್ರಾತಿನಿಧ್ಯ ನೀಡದೆ ಇರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಕೆ. ಮಹಮದ್ ಆಗ್ರಹಿಸಿದರು.ದತ್ತಜಯಂತಿಯ 3 ದಿನಗಳ ಕಾರ್ಯಕ್ರಮಕ್ಕೆ ನೇಮಿಸಿರುವ ತಾತ್ಕಾಲಿಕ ಅರ್ಚಕರನ್ನು ವಾಪಸ್ ಕರೆಸಿಕೊಳ್ಳಬೇಕು, ದರ್ಗಾದ ಒಳಗೆ ಇರುವ ಮಸೀದಿ (ಹಿಂದಿನಿಂದಲೂ ಇದ್ದ) ಕಟ್ಟಡದಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕು, ಒಳಗಿರುವ ಎಲ್ಲಾ ಗೋರಿಗಳಿಗೆ ಪ್ರತಿನಿತ್ಯ ಹಸಿರು ಬಟ್ಟೆ ಹಾಕಿ ಪ್ರತಿನಿತ್ಯ ಫಾತಿಹಾ (ಪ್ರಾರ್ಥನೆ) ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರದ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಸ್ಲಿಂಮರು ಗರಂ: 
ದತ್ತಪೀಠದ ಆಡಳಿತಕ್ಕೆ ಸರ್ಕಾರ ರಚಿಸಿದ ಸಮನ್ವಯ ಸಮಿತಿ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸೋದನ್ನ ಇನ್ನೂ ನಿಲ್ಲಿಸಿಲ್ಲ. ಆ ಸಮಿತಿಯನ್ನ ನಮ್ಮ ಮುಸ್ಲಿಂ ಸಮುದಾಯ ಒಪ್ಪಲ್ಲ. ಆ ಸಮಿತಿಯಲ್ಲಿರೋ ಎಂಟು ಜನರಲ್ಲಿ ಏಳು ಜನ ಹಿಂದೂ ಒಬ್ಬನೇ ಒಬ್ಬ ಮುಸ್ಲಿಂ. ಆತ ಮುಸ್ಲಿಮನೇ ಅಲ್ಲ. 2004ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ಅವನನ್ನ ನಮ್ಮ ಸಮುದಾಯ ಮುಸ್ಲಿಂ ಎಂದು ಒಪ್ಪಿಲ್ಲ. ಸರ್ಕಾರ ಭಾವೈಕ್ಯತೆ ನ್ಯಾಯ ಒದಗಿಸಬೇಕು ಅಂದ್ರೆ ಆ ಸಮಿತಿಯಲ್ಲಿ ನಾಲ್ಕು ಹಿಂದೂ ನಾಲ್ಕು ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ.

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಆತ ಅಲ್ಲಿ ಮುಸ್ಲಿ ಪದ್ಧತಿಗಳನ್ನ ಮಾಡೋದಕ್ಕೆ ಬಿಡುತ್ತಿಲ್ಲ. ನಮಾಜ್, ಫಾತಿಹಾ, ಲೋಬಾನ ಹಾಕೋದಕ್ಕೆ ಬಿಡುತ್ತಿಲ್ಲ. ಆತ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾನೆ ಎಂದು ಸಮಿತಿ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ಮುಸ್ಲಿಂ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಸರ್ಕಾರ ಆದೇಶದಂತೆ ಜಾಹಿರಾತು ನೀಡಿಯೇ ಮುಜರಾಯಿ ಆಯುಕ್ತರ ನೇತೃತ್ವದಲ್ಲೇ ಎಲ್ಲಾ ಪ್ರಕ್ರಿಯೇ ಮಾಡಿರೋದು. ನಿಮಗೆ ಅಸಮಾಧಾನ ಇದ್ದಾರೆ ನ್ಯಾಯಾಲಯಕ್ಕೆ ಹೋಗಬಹುದು ಉತ್ತರಿಸಿದ್ದಾರೆ.

ಚಿಕ್ಕಮಗಳೂರು: ದತ್ತಪೀಠ ಸಮಿತಿ ರದ್ದತಿಗೆ ಮುಸ್ಲಿಂ ಮುಖಂಡರ ಆಗ್ರಹ

ಒಟ್ಟಾರೆ, ಇಷ್ಟು ದಿನ ದತ್ತಜಯಂತಿ-ಉರುಸ್ ಎರಡೂ ಶಾಂತಿಯುತವಾಗಿಯೇ ನಡೆಯುತ್ತಿತ್ತು. ಆದರೀಗ, ಸರ್ಕಾರ ದತ್ತಪೀಠದ ಆಡಳಿತಕ್ಕೆ ಸಮನ್ವಯ ಸಮಿತಿ ರಚಿಸಿದ ಬಳಿಕ ದತ್ತಜಯಂತಿಯೂ ಬದಲಾಗಿತ್ತು. ಈಗ ಮುಸ್ಲಿಮರು ನಮಗೂ ನಮ್ಮ ಪದ್ಧತಿಯಂತೆ ಉರುಸ್ ಮಾಡೋದಕ್ಕೆ ಅವಕಾಶ ನೀಡಿ ಅಂತಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಎಲ್ಲಾ ನಡೆದಿರೋದು, ನಡೆಯುತ್ತಿರೋದು ಸರ್ಕಾರದ ಆದೇಶದಂತೆ. ಮುಂದೆ ನಡೆಯೋದು ಅದೇ ರೀತಿ ಅಂತಿದೆ. ಹಾಗಾದ್ರೆ, ಈ ವಿವಾದ ಮುಂದಿನ ದಿನಗಳಲ್ಲಿ ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದುನೋಡ್ಬೇಕು.

Latest Videos
Follow Us:
Download App:
  • android
  • ios